ಪಂಪಾ ಪೂರ್ಣಂ

ಪ್ರಶ್ನೋತ್ತರ ಜ್ಞಾನ ಭಂಡಾರ

ಓಂ ಗಣೇಶಾಯ ನಮಃ.
ಓಂ ವ್ಯಾಸಾದಿಗುರುದೇವತಾಭ್ಯೋ ನಮಃ
ಶ್ರೀ ಭುವನೇಶ್ವರೀಲಕ್ಷ್ಮೀನಾರಸಿಂಹ ಸಮೇತ ಪಂಪಾವಿರೂಪಾಕ್ಷೇಶ್ವರ ಪರಬ್ರಹ್ಮಣೇ ನಮ:

ಓಂಯಶ್ಶಿವೋ ನಾಮರೂಪಾಭ್ಯಾಂ ಯಾದೇವೀಸರ್ವಮಂಗಳಾ|
ತಯೋ: ಸಂಸ್ಮರಣಾತ್ಪುಂಸಾಂ ಸರ್ವತೋಜಯಮಂಗಳೇ||
ಓಂ ನಮ: ಪ್ರಣವಾರ್ಥಾಯ ಶುದ್ಧಜ್ಞಾನೈಕ ಮೂರ್ತ0iÉುೀ |
ನಿರ್ಮಲಾಯ ಪ್ರಶಾನ್ತಾಯ ದಕ್ಷಿಣಾಮೂರ್ತ0iÉುೀ ನಮ:||
ಶ್ರೀ ಹೇಮಕೂಟ ನಿಲಯಃ ಪಂಪಾಲಿಂಗಿನ ಕಾಮುಕಃ |
ಗಂಗಾಧರೋ ವಿರೂಪಾಕ್ಷೋ ಮಂಗಳಂ ದಿಶತಾತ್ಸದಾ. ||
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಷಂ |
ಪರಾಶರಾತ್ಮಜಂ ವಂದೇ ಶುಕತಾತಂ ತಪೆÇೀನಿಧಿಂ ||
ನಾರಾಯಣಸಮಾರಂಭಾಂ ವ್ಯಾಸಶಂಕರಮಧ್ಯಮಾಂ|
ಅಸ್ಮದಾಚಾರ್ಯಪರ್ಯನ್ತಾಂ ವಂದೇ ಗುರುಪರಂಪರಾಂ ||
ಅನೇಕಜನ್ಮ ಸಂಭ್ರಾನ್ತ ಕರ್ಮೇಂಧನ ವಿದಾಹಿನೇ |
ಜ್ಞಾನಾನಿಲ ಪ್ರದೀಪೇನ ತಸ್ಮೈಶ್ರೀಗುರವೇ ನಮ: ||

ಶ್ರೀಪಂಪಾಕ್ಷೇತ್ರ ಸ್ವರ್ಣಹಂಪಿ ಭಕ್ತಿನಗರಸಾಮ್ರಾಷ್ಟಕಮ್ ಸ್ತೋತ್ರಂ

ವಿಶ್ವೇಶ್ವರೋ ವಿರೂಪಾಕ್ಷ: ತುಂಙ್ಗಭದ್ರಾ ಚ ಜಾಹ್ನವೀ
ಸನ್ತಾ ವಿಮೌ ಪಾವಯನ್ತೌ ಭಕ್ತಾನ್ನ: ಪ್ರಚಕಾಸತಾಮ್ 1

ಭ್ರಮತೋ ಅವಿದ್ಯಯಾ ಅಜ್ಞಾನ್ ನೋ ಭವಸಂಸಾರಸಾಗರೇ
ಸ್ವರೂಪಾನನ್ದಗೋವಿನ್ದಾಮೃತರೂಪೆÇೀ„ವತಾತ್ಸದಾ 2

ಸಾಮ್ರಾಜ್ಯಂ ಭಕ್ತಿನಗರಂ ಭವಬನ್ಧಪ್ರಣಾಶಕಮ್
ಭಕ್ತಿಮುಕ್ತೀ ಸಮ್ಪ್ರದದಚ್ಚಕಾಸ್ತ್ವಾಚನ್ದ್ರತಾರಕಮ್ 3

ಭಗವಾನ್ ಯಶ್ಚ ಸರ್ವಜ್ಞ: ಸರ್ವಸರ್ಜನಕಾರಣಮ್
ಯೋ ಭಕ್ತಾನ್ ವಾಚಯನ್ ಸ್ನೇಹಾತ್ ತತ್ತ್ವಾನ್ ಭಾಗವತಾನ್ ಸದಾ 4

ಯತ್ಪ್ರೇರಣೋದಿತಂ ಪಮ್ಪಾಕ್ಷೇತ್ರ ಮಂಹೋಮುಗಕ್ಷರಮ್
ಸೋ„ವನ್ ಕ್ಷೇತ್ರಮಿಮಂ ಭದ್ರಂ ಸದಾ ಹೃದಿ ವಿರಾಜತಾಮ್ 5

ಪಮ್ಪಾತೀರವಿರೂಪಾಕ್ಷ: ಪಮ್ಪಾಮ್ಬಾ ಭುವನೇಶ್ವರೀ
ಕ್ಷೇತ್ರಪಾಲೋ ಭೈರವಶ್ಚ ಶ್ರೀಮಾನ್ ಭಾಗವತ: ಕಪೀ
ಶ್ರೀ ಕ್ಷೇತ್ರಂ ಭಕ್ತಿನಗರಂ ಕಲಿಕಲ್ಮಷ ಸಞ್ಚಯಾತ್
ಅವನ್ತೋ ಭಕ್ತಿಮುಕ್ತೀ ನೋ ಯಚ್ಛನ್ತು ಭವತಾರಕಾ: 6

ವಿರೂಪಾಕ್ಷ ಸ್ವರ್ಣ ಹಮ್ಪಿ ಕ್ಷೇತ್ರಾಧಿಷ್ಠಾತೃದೇವತಾ:
ಶ್ರೀಕಾಲಭೈರವಯುತೋ ವಿರೂಪಾಕ್ಷ: ಫಲಪ್ರದ:

ಕಪೀನ್ದ್ರಶ್ರೀನಾರಸಿಂಹ ಶ್ರೀ ಸೀತಾರಾಮಲಕ್ಷಮಣಾ:
ಈಶ್ವರೀ ಜಗತಾಂ ಕಿನ್ನರೇಶ್ವರಾಸ್ಸರ್ವದೇವತಾ: 7

ಪಾರಾಶರ್ಯವ್ಯಾಸ ವಿದ್ಯಾರಣ್ಯ ದೀಪ್ತೇಸುನಿರ್ಮಲೇ
ನಗರೇ ಭಕ್ತಿಸಾಮ್ರಾಜ್ಯೇ ಭಕ್ತಿಮುಕ್ತೀ ದಿಶನ್ತುನ: 8

ಅಕ್ಷಯಾಖ್ಯಾ ತೃತೀಯಾಚ ದಶಮೀವಿಜಯಾಖ್ಯಿಕಾ
ವಸನ್ತಪಞ್ಚಮೀ ಚೇತಿ ತ್ರಿಮುಹೂರ್ತಾರ್ಚಿತಂ ಪದಮ್ 9

ಸ್ವರೂಪಾಮೃತಗೋವಿನ್ದ ಆನನ್ದತತ್ವತ್ರಯಾನ್ವಿತಮ್
ಇಚ್ಛಾಜ್ಞಾನಕ್ರಿಯಾಶಕ್ತಿ ತತ್ವತ್ರಯಸಮನ್ವಿತಮ್ 10

ಭಗವದ್ ಭಕ್ತಿಭಕ್ತಾನಾಂ ಸಙ್ಗಮಂ ಪಾವಕಂ ನೃಣಾಮ್
ಶ್ರೀ ಭಕ್ತಿನಗರಂ ಕ್ಷೇತ್ರಂ ಸದಾ ವಿಜಯತಾನ್ತಮಾಮ್ 11

1) ಶ್ರೀ ಪಂಪಾಕ್ಷೇತ್ರ ಇತಿಹಾಸ

ಸಮಸ್ತ ಸೃಷ್ಟಿಯ ರಹಸ್ಯಗಳನ್ನು ಭೇಧಿಸುವಂತಹ ವೈಜ್ಞಾನಿಕ ದೃಷ್ಟಿಯುಳ್ಳ ಮಾನವನ ತೇಜೋಬುದ್ದಿಗೆ ಈ ಶ್ರೀ ಕ್ಷೇತ್ರದ ಇತಿಹಾಸವನ್ನು ತಿಳಿದುಕೊಳ್ಳುವುದು ಅಸಾಧ್ಯ. ಆದರೆ, ಇಂತಹ ಅಸಾಧ್ಯವಾದಂತಹ ಅಗೋಚರವಾದಂತಹ ದಿವ್ಯತೇಜೋಭರಿತವಾದಂತಹ ತಪಃಶ್ಯಕ್ತಿಯ ರಾಶೀಭೂತವಾದಂತಹ ಸುಸುಂದರ ಮನೋಹರವಾದಂತಹ ಶ್ರೀ ಕ್ಷೇತ್ರದ ಮಹಾತ್ಯ್ಮೆ ಮತ್ತು ಇತಿಹಾಸವನ್ನು ಮಾನವರಿಗೆ ತಿಳಿಸಿಕೊಟ್ಟು ಮಹೋಪಕಾರವನ್ನು ಮಾಡಬೇಕೆಂಬ ಸದುದ್ದೇಶದಿಂದ ಸಾಕ್ಷಾತ್ ಪಾರ್ವತೀ ದೇವಿ0iÉುೀ ಪರಶಿವನನ್ನು ವಿನಯಪೂರ್ವಕವಾದಂತಹ ಪ್ರಶ್ನೆಯನ್ನು ಮಾಡಿದಳು. ಆಗ ಸೃಷ್ಟಿಯ ರಹಸ್ಯಗಳನ್ನು ಹೇಳುವ ಸಂದರ್ಭದಲ್ಲಿ ಪ್ರಮುಖವಾಗಿ ಶ್ರೀ ಕ್ಷೇತ್ರದ ಲಕ್ಷಾಂತರ ವರ್ಷಗಳ ಇತಿಹಾಸವನ್ನು ಸವಿವರವಾಗಿ ಸಾಕ್ಷಾತ್ ಪರಮೇಶ್ವರನೇ ಬೋಧಿಸಿರುತ್ತಾನೆ.
ಸುಮಾರು 31 ಕೋಟಿ ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವುಳ್ಳ ವಿಷಯಗಳನ್ನು ಸವಿವರವಾಗಿ ಈಗಲೂ ಸಹಾ ಪ್ರತ್ಯಕ್ಷಪ್ರಮಾಣವಾಗಿ ಶ್ರೀ ಕ್ಷೇತ್ರದಲ್ಲಿ ಜೀವಂತವಾಗಿ ನೋಡಬಹುದು. ಕೋಟ್ಯಾಂತರ ವರ್ಷಗಳ ಇತಿಹಾಸವುಳ್ಳ ಈ ಕ್ಷೇತ್ರದ ಇತಿಹಾಸದ ಬಗ್ಗೆ 6000 ವರ್ಷಗಳ ಹಿಂದೆ ಉತ್ತರಭಾರತ ದೇಶದಲ್ಲಿ ನೈಮಿಷಾರಣ್ಯದಲ್ಲಿ ಋಷಿಮುನಿಗಳ ಮಧ್ಯೆ ಚರ್ಚೆಯೂ ನಡೆದುಬಂದು ಅಂತಹ ವಿಷಯಗಳನ್ನು ಸಾಕ್ಷಾತ್ ವಿಷ್ಣುವಿನ ಅವತಾರವಾದ ಭಗವಾನ್ ವ್ಯಾಸ ಮಹರ್ಷಿಗಳು ಗ್ರಂಥಸ್ವರೂಪಗೊಳಿಸಿದ್ದಾರೆ. ಈಗಲೂ ಸಹಾ ಈ ಕ್ಷೇತ್ರದ ಇತಿಹಾಸದ ವಿಷಯಗಳು ಇಲ್ಲಿಗೆ ಬಂದಿದ್ದಂತಹ ಸತ್ಯಹರಿಶ್ಚಂದ್ರ, ವಾಲಿ, ಶ್ರೀ ರಾಮ, ಸುಗ್ರೀವ, ಪಂಚ ಪಾಂಡವರು ಇತ್ಯಾದಿ ಮಹಾ ಚಕ್ರವರ್ತಿಗಳ ಪಾಲನೆಯ ಆರಾಧನಾ ಸ್ಥಾನವೂ ಆಗಿದ್ದು ಇವುಗಳನ್ನು ಸಪ್ರಾಮಾಣಿಕಗೊಳಿಸುವದಕ್ಕಾಗಿ, ಸಾವಿರಾರು ವರ್ಷಗಳ ಹಿಂದೆ ಈ ಕ್ಷೇತ್ರವನ್ನು ನೋಡುವುದಕ್ಕೆ ಬಂದಿದ್ದಂತಹ ಸಪ್ತಋಷಿಗಳು ಈ ಕ್ಷೇತ್ರದ ಇತಿಹಾಸವನ್ನೂ ಪಾವಿತ್ರತೆಯನ್ನೂ ಮಹಿಮೆಯನ್ನೂ ವೈಭವವನ್ನೂ ಇಲ್ಲಿದ್ದಂತಹ ಮಹಾ ಪರ್ವತಗಳನ್ನೂ ಮಹಾ ತೀರ್ಥಗಳನ್ನೂ ಕ್ಷೇತ್ರಪಾಲಕನಾದಂತಹ ಕಾಳಭೈರವನಿಂದ ತಿಳಿದುಕೊಂಡು ಇಲ್ಲಿ0iÉುೀ ನಿವಾಸವಾಗಿರುತ್ತಾರೆ. ಇಷ್ಟೇ ಅಲ್ಲದೇ, ಅನೇಕ ಭಾಗವತರ ಭಕ್ತಾಗ್ರೇಶ ಶಿಖಾಮಣಿಗಳಾದಂತಹ ಶ್ರೀ ಹನುಮಂತ, ಬಕದಾಲ್ಬ್ಯ, ಹರಮಿತ್ರ, ವಿಮಲ, ದಾಕ್ಷಾಯಣೀ, ಸಪ್ತ ಋಷಿಗಳು, ಶತರ್ಚನ, ಅತಿವಕ್ತ್ರ, ಶಬರಿ ಇತ್ಯಾದಿ ಅನೇಕ ಭಗವತ್ಭಕ್ತರ ಜೀವನ ಇತಿಹಾಸವೂ ಈ ಕ್ಷೇತ್ರದ ಯುಗಾನುಯುಗಗಳ ಇತಿಹಾಸವನ್ನು ಈಗಲೂ ಗೋಚರಗೊಳಿಸುತ್ತದೆ.

ಈ ಕ್ಷೇತ್ರದ ವೈಭವವನ್ನೂ ಮಹಾತ್ಮ್ಯೆಯನ್ನೂ ವಿಶೇಷತೆಯನ್ನೂ ನೋಡಿ ಇಲ್ಲಿಗೆ ಬಂದು ನಿವಾಸಗಳನ್ನು ಮಾಡಿಕೊಂಡು ರಾಜ್ಯಗಳನ್ನು ಸಹಾ ಸ್ಥಾಪಿಸಿ ಮಹಾಸಾಮ್ರಾಜ್ಯಗಳನ್ನಾಗಿ ವಿಸ್ತರಿಸಿದಂತಹ ನವೀನವಾದಂತಹ ಕೇವಲ ಎರಡು ಸಾವಿರಗಳ ಇತಿಹಾಸವನ್ನು ನಾವು ನವೀನ ಸಂಶೋಧಕರಿಂದ ತಿಳಿದುಕೊಳ್ಳಬಹುದು.


2) ಪುರಾಣ : ಪುರಾ+ಆಯನಂ ಅಂದರೆ ಸಹಸ್ರಾರು ವರ್ಷಗಳ ಹಿಂದೆ ನಡೆದಿದ್ದಂತಹ ಆದಿದೈವಿಕ ಘಟನೆಗಳನ್ನು ಮಹರ್ಷಿಗಳು ಅವರ ಋತಂಬರಾ ಪ್ರಜ್ಞೆಯಿಂದ ದಾರ್ಶನಿಕ ದೃಷ್ಟಿಯಿಂದ ಅತೀಂದ್ರಿಯವಾದಂತಹ ಜ್ಞಾನನೇತ್ರಗಳಿಂದ ದರ್ಶಿಸಿ ಪರಂಪರಾನುಗತವಾಗಿ ಭಗವಂತನಿಂದಲೇ ಅವನ ಲೀಲೆಗಳನ್ನು ತಿಳಿದುಕೊಂಡು ಆ ವಿಷಯಗಳನ್ನೆಲ್ಲವೂ ಸಹಸ್ರ ಸಂವತ್ಸರ ಸತ್ರಯಾಗಗಳಲ್ಲಿ ಸೂತ ಪುರಾಣಿಕರ ಪುಣ್ಯ ಸತ್ಕಥಾ ಶ್ರವಣ ಸತ್ಸಂಗಗಳನ್ನು ಮಾಡಿಕೊಳ್ಳುತ್ತಾ ಇರುವಂತಹಾ ಸಮಯದಲ್ಲಿ ಕೆಲವು ವಿಷಯಗಳನ್ನು ಕಲಿಯುಗದಲ್ಲಿ ಹುಟ್ಟುವ ಪ್ರಾಣಿಗಳ ಜನಗಳ ಉಪಯೋಗಕ್ಕಾಗಿ ಸಾಕ್ಷಾತ್ ವ್ಯಾಸರು ಅಷ್ಟಾದಶ ಪುರಾಣಗಳ ರೂಪದಲ್ಲಿ ಗ್ರಂಥೀಕರಿಸಿದರು. ಅಂತಹ ಅಷ್ಟಾದಶ ಪ್ರಣೀತರಾದಂತಹ ಭಗವಾನ್ ವ್ಯಾಸರು ಶ್ರೀ ಸ್ಕಾಂದ ಮಹಾ ಪುರಾಣವನ್ನು ಬರೆಯುತ್ತಾ ಕ್ಷೇತ್ರ ಮಹಿಮೆಗಳನ್ನು ಹೇಳುತ್ತಾ ಅದರಲ್ಲಿ ಉತ್ತರ ವಿಶ್ವನಾಥ ಕಾಶೀಕ್ಷೇತ್ರ ಮಹಿಮೆಯನ್ನು ವರ್ಣನೆ ಮಾಡುತ್ತಾ ಅದಕ್ಕಿಂತಲೂ ಭಾರತದ ದಕ್ಷಿಣ ಭಾಗದಲ್ಲಿರುವಂತಹಾ ಪಂಪಾ ವಿರೂಪಾಕ್ಷ ಕ್ಷೇತ್ರವನ್ನು ವಿವರಿಸುತ್ತಾ “ಹೇಮಕೂಟ ಖಂಡ” ವನ್ನು ರಚಿಸಿದರು. ಅದರಲ್ಲಿ “ಸಪ್ತಋಷಿ ಪ್ರಕಾಶಿಕಾ ಯಾತ್ರಾ” ಎಂಬ ಹೆಸರಿನಿಂದ ಈ ಪಂಪಾ ಪುರಾಣವನ್ನು ಬರೆದರು.

ಈ ಪಂಪಾಪುರಾಣಕ್ಕೆ ಸಂಹಿತಾ ಶಾರೀರಿಕಂ ಎಂದು ನಾಮಾಂತರಗಳನ್ನು ಕೊಟ್ಟಿದ್ದಾರೆ. ಈ ಕ್ಷೇತ್ರ ಪುರಾಣವನ್ನು

1) ಪೂರ್ವ ಭಾಗ
2) ಮಧ್ಯಮ ಭಾಗ ( ಇದರಲ್ಲಿ ಹರಿಶ್ಚಂದ್ರೋಪಾಖ್ಯಾನಂ ಮತ್ತು ಉತ್ತರಾರ್ಧ ಇವೆ)
3) ಉತ್ತರ ಭಾಗ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದಾರೆ.

1) ಪೂರ್ವ ಭಾಗದಲ್ಲಿ

  1. ಸೂತ ಶೌನಕಾದಿ ಪ್ರಶ್ನೋತ್ತರ ನಿರೂಪಣಂ.
  2. ಸಪ್ತರ್ಷೀಣಾಂ ಪಂಪಾಕ್ಷೇತ್ರಾಗಮನಂ.
  3. ಸಪ್ತರ್ಷೀಣಾಂ ಕ್ಷೇತ್ರಪಾಲ ದರ್ಶನಂ
  4. ಬ್ರಹ್ಮಾದೀನಾಂ ಕೈಲಾಸ ಗಮನಂ.
  5. ಪಂಪಾದೇವ್ಯೈ ಈಶ್ವರೇಣ ವರಪ್ರದಾನಂ.
  6. ಪಂಪಯಾ ಗಂಧರ್ವಾಯ ಶಾಪಪ್ರದಾನಂ.
  7. ಶ್ರೀ ಪಂಪಾ ವಿರೂಪಾಕ್ಷೇಶ್ವರಯೋರ್ವಿವಾಹಂ.
  8. ಹರ ಮಿತ್ರೋಪಾಖ್ಯಾನಂ, ತಸ್ಯ ವಿರೂಪಾಕ್ಷದ್ವಾರ ಪ್ರಾಪ್ರಿಃ.
  9. ಹರ, ಮಿತ್ರ, ವಿಮಲಾ ಸಂವಾದೇ ಶಿವಪೂಜಾ ವಿಧಾನಂ.
  10. ಹರ, ಮಿತ್ರ, ವಿಮಲಾ ಸಂವಾದೇ ಶಿವಪೂಜಾ ಮಹಿಮೆ.
  11. ಕಲ್ಯಾಣ ತೀರ್ಥ ಪ್ರಶಂಸಾ.
  12. ಬಕದಾಲ್ಬ್ಯ ತೀರ್ಥ ಮಹಿಮಾ, ಹರಮಿತ್ರಸ್ಯ ಮುಕ್ತಿಃ.
  13. ಋಷಿ ಶೃಂಗಾಯ ಶಿವೇನ ವರಪ್ರದಾನಂ.
  14. ಅತಿವಕ್ತ್ರಸ್ಯ ಸುಂದರ ಶರೀರ ಪ್ರಾಪ್ತಿಃ.
  15. ಕ್ರತು ತೀರ್ಥ ಪಶಂಶಾ, ಪುಂಡರೀಕ ನಾಮಕ ದಾನವ ವಧಃ.
  16. ಗಂಧರ್ವಾಣಾಂ ಕಿನ್ನರೇಶ್ವರ ಪ್ರತ್ಯಕ್ಷಂ.
  17. ಕಿನ್ನರೇಶಾಯ ಮಾತಂಗೀ ಪ್ರದಾನೇ ವಾಗ್ದಾನಂ.
  18. ಮಾತಂಗೀ ಕಿನ್ನರೇಶಯೋರ್ವಿವಾಹಃ.
  19. ಸಿದ್ಧೇಶ್ವರ ತೀರ್ಥ ಮಹಿಮಾ.
  20. ವರಾಹ ಪ್ಲುತ ತೀರ್ಥ ಪ್ರಶಂಸಾ-ವರಾಹವ್ಯಾಧಯೋರ್ಮುಕ್ತಿಃ.
  21. ಕಾಂಚನ ತೀರ್ಥ ಪ್ರಶಂಸಾ-ರಾಕ್ಷಸಾಯ ಅಭಯ ಪ್ರದಾನಂ.
  22. ಕಾಂಚನಾ ತೀರ್ಥ ಪ್ರಶಂಸಾ ರಾಕ್ಷಸಸ್ಯ ದೇವತ್ವ ಪ್ರಾಪ್ತಿಃ.
  23. ಕಾಂಚನ ತೀರ್ಥ ಮಾಂಡವ್ಯಾಶ್ರಮ ಮಾಧವೀ ಪಾತಿವ್ರತ್ಯಾದಿ.
  24. ಪ್ರೇತಧೇನುಕಾಂತಯೋ ಶ್ಯತರ್ಚನ ಋಷಿ ಸಂದರ್ಶನಂ.
  25. ಶತರ್ಚನ ಯಮ ಸಂವಾದಃ-ವಿಮಲಾ ತೀರ್ಥ ಪ್ರಶಂಸಾ. ಪ್ರಶಂಸಾ
  26. ಶತರ್ಚನ ಯಮ ಸಂವಾದಃ-ಶಂಡಿಲಸ್ಯ ಚಂಡಾಲ ಜನ್ಮ ಪ್ರಾಪ್ತಿಃ.
  27. ಶತರ್ಚನ ಯಮ ಸಂವಾದಃ-ಚಂಡಾಲಾದೀನಾಂ ಶಿವಲೋಕ ಪ್ರಾಪ್ತಿಃ.
  28. ವಿರೂಪಾಕ್ಷೇಣ ಜಾಂಬವತೋ ವರಪ್ರದಾನಂ.
  29. ಜಾಂಬವತಾ ಶಿವ ಸೇವಕ ದ್ವಿಜ ರಾಕ್ಷಸತ್ವ ಮೋಚನಂ.
  30. ಭದ್ರಯಾ ಜಾಂಬವಂತಂ ಪ್ರತಿ ಸ್ವಪುರಾವೃತ್ತ ಕಥನಂ.
  31. ಭದ್ರಾತಪೆÇೀವಿಘಾತಾಯ ಸಮಾಗತ ದೇವಸ್ತ್ರೀ ವಿಫಲಾಶಾ ಕಥನಂ.
  32. ಭದ್ರಾತಪೆÇೀವಿಘಾತಾಯ ಪಾರ್ವತ್ಯಾ ದೇವದೂತ ಪ್ರೇಷಣಂ.
  33. ದೂತಸ್ಯಶಾಪ ಪ್ರದಾನ ಪೂರ್ವಕಂ ಭದ್ರಾಯಾ ವಿಂದ್ಯಾಚಲ ನಿವಾಸಃ
  34. ಭದ್ರಾ0iÉುೈ ವರಪ್ರದಾನಪೂರ್ವಕಂ, ಪುನಃ ಪಾರ್ವತ್ಯಾ ಪಂಪಾಕ್ಷೇತ್ರಾಗಮನಂ.
  35. ದೇವದೂತಸ್ಯ ಶಿವಾನುಗ್ರಹೇಣ ಭೃಂಗಿತ್ವ ಪ್ರಾಪ್ತಿಃ.
  36. ಭದ್ರಾ ಜಾಂಬವತೇಶಯೋರ್ವಿವಾಹಃ.
  37. ಗಂಧರ್ವಕನ್ಯಕಾ ದರ್ಶನಾತ್ ಅಗ್ನಿಪಋಷೇರಂತರ್ಧಾನಂ.
  38. ಶಂಕರ ಕ್ಷೇತ್ರ ಮಹಿಮಾ – ಕನ್ಯಕಾನಾಮಗ್ನಿಪಸ್ಯಚ ವಿವಾಹಃ.
  39. ಅಗಸ್ತ್ಯ ತೀರ್ಥ ಪ್ರಶಂಸಾ – ಚಿತ್ರಸೇನಸ್ಯ ದೇವಲೋಕ ಪ್ರಾಪ್ತಿಃ.
  40. ಸೋಮ ತೀರ್ಥ ಪ್ರಶಂಸಾ – ಚಂದ್ರಸ್ಯ ಶಿವಭೂಷಣತಾ ಪ್ರಾಪ್ತಿಃ.
  41. ವ್ಯಾಘ್ರ ಪ್ಲುತತೀರ್ಥ ಪ್ರಶಂಸಾ – ವಿದ್ಯಾಧರಸ್ಯ ವ್ಯಾಘ್ರಮುಖತ್ವ ನಿವೃತ್ತಿಃ.
  42. ಚರ್ಚಾ ತೀರ್ಥ ಪ್ರಶಂಸಾ.
  43. ನಾಭಿಮತೀ ತೀರ್ಥ ಪ್ರಶಂಸಾ.
  44. ನಾಭಿಮತೀ ತೀರ್ಥ ಪ್ರಶಂಸಾ – ದೇವಾನಾಂ ಮೃಗತ್ವ ನಿವೃತ್ತಿಃ.
  45. ಉಮಾ ಸದಾಶಿವಯೋರ್ವಿವಾಹಃ.
  46. ಮಾಣಿ ಭದ್ರೇಶ್ವರ ಮಾಹಾತ್ಮ್ಯಂ – ಅಮೃತ ತೀರ್ಥ ಪ್ರಶಂಸಾ.
  47. ಮಾಣಿ ಭದ್ರೇಶ್ವರ ಮಾಹಾತ್ಮ್ಯಂ – ಪಾಪನಾಶನಾ ತೀರ್ಥ ಪ್ರಶಂಸಾ.
  48. ಶಾಪ ವಿಮೋಚನ ತೀರ್ಥ ಮಾಹಾತ್ಮ್ಯೈ ಶಂಭುನಾ ಅಗ್ನೇಗರ್ವ ಭಂಜನಂ.
  49. ಶಾಪ ವಿಮೋಚನ ತೀರ್ಥ ಮಾಹಾತ್ಮ್ಯೈ ದೇವಾನಾಂ ಪಶುತ್ವ ನಿವೃತ್ತಿಃ.
  50. ಪ್ರಸನ್ನ ತೀರ್ಥ ಮಹಿಮಾ.
  51. ಋಷಭ ತೀರ್ಥ ಪ್ರಶಂಸಾ.
  52. ರತ್ನತೀರ್ಥ ಪ್ರಶಂಸಾಯಾಂ ಕುಬೇರಸ್ಯ ಪುನಃ ರಾಜ್ಯ ಪ್ರಾಪ್ತಿಃ.
  53. ಮುಕ್ತಿ ತೀರ್ಥ ಪ್ರಶಂಸಾ ವೈಶ್ಯಾನಾಂ ಕೀಟಯೋನೇರ್ನಿವೃತ್ತಿಃ.
  54. ಮಾಣಿಭದ್ರೋಪಾಖ್ಯಾನಂ.
  55. ಮಾಣಿಭದ್ರೇಶ್ವರಸ್ಯ ತಪಃ ಪ್ರವೃತ್ತಿಃ.
  56. ಮಾಣಿಭದ್ರೇಶ್ವರೇಣ ಸರ್ವಮಂಗಲಾಂ ಪ್ರತಿ ಮೃಗ ಪ್ರೇಷಣಂ.
  57. ಮಾಣಿಭದ್ರೇಶ್ವರ ವಿವಾಹ ಸನ್ನಾಹ ವರ್ಣನಂ.
  58. ಸರ್ವಮಂಗಳಾ ಮಾಣಿಭದ್ರೇಶ್ವರಯೋರ್ವಿವಾಹಃ.
  59. ಕಕುಭ ತೀರ್ಥ ಪ್ರಶಂಸಾ.
  60. ನಾಗತೀರ್ಥ ಮಹಿಮಾ.
  61. ಮಾಲ್ಯವದ್ಗಿರಿ ಮಹಿಮಾ.
  62. ಗುಂಜಾಸಂಗಮ ಪ್ರವಾಹ ವರ್ಣನಂ.
  63. ಖರ್ಜೂರು ಸಂಗಮ ಅಮರೀ ಸಂಗಮ ವರ್ಣನಂ.
  64. ಶ್ರೀ ಕುಂಡಲ, ವಿಕುಂಡಲಯೋಃ ಸ್ವರ್ಗ ಪ್ರಾಪ್ತಿಃ.
  65. ಶಬರೀ ತೀರ್ಥ, ವ್ಯಾಧಾರಣ್ಯ ಮಹಿಮಾ.
  66. ಆಮ್ರಕೂಟೇಶ್ವರ ಮಹಿಮಾ
  67. ರಂಗನಾಥನಾಮಕ ಶಿವಪ್ರಾದುರ್ಭಾವಃ.
  68. ಪುಷ್ಕರ ತೀರ್ಥ ಮಹಿಮಾ
  69. ತಾರಾ ಪರ್ವತ ಮಹಿಮಾ
  70. ಕಪಿಲ, ಮಲಪ್ರಹಾರಿಣೀ ತೀರ್ಥ ಪ್ರಭಾವಃ.
  71. ಕಲಿತಾರಕ ತೀರ್ಥ ಪ್ರಭಾವಃ.
  72. ಸೀತಾ ಸರೋವರ ವರ್ಣನಂ
  73. ಸೀತಾ ಸರೋವರ ಮಹಿಮಾ
  74. ರಾಮ ತೀರ್ಥ ಮಹಿಮಾನುವರ್ಣನಂ.
  75. ಕೋಟಿಲಿಂಗ ತೀರ್ಥ ಪ್ರಶಂಸಾ
  76. ಚಕ್ರ ತೀರ್ಥ ಪ್ರಶಂಸಾ
  77. ಗೌರೀಮುಖತೀರ್ಥ ಮಹಿಮಾ
  78. ಮಾತಂಗಗಿರಿ ಮಾಹಾತ್ಮ್ಯಂ
  79. ಅಗ್ನಿ ತೀರ್ಥ ಪ್ರಭಾವಃ
  80. ಸಾಂಬ ತೀರ್ಥ ವರ್ಣನಂ.
  81. ಕುಮಾರ ತೀರ್ಥ ವರ್ಣನಂ
  82. ವ್ಯಾಸಾಶ್ರಮ ವರ್ಣನಂ
  83. ವ್ಯಾಘ್ರಾಸುರ ಕಥಾ
  84. ಹರಿಣಪ್ಲುತ ತೀರ್ಥ ಮಾಹಾತ್ಮ್ಯಂ
  85. ವ್ಯಾಘ್ರಾಸುರ, ಗಜಾಸುರ ವಧಃ
  86. ಹರಿಣಪ್ಲುತ ತೀರ್ಥ ಮಹಿಮಾ
  87. ದಾಕ್ಷಾಯಣೀ ಜನನಂ
  88. ಶ್ರೀ ದಾಕ್ಷಾಯಣೀ ವಿರೂಪಾಕ್ಷಯೋರ್ವಿವಾಹಃ
  89. ನಂದೀಶ್ವರಾತ್ ದಕ್ಷಸ್ಯ ಶಾಪ ಪ್ರಾಪ್ತಿಃ.
  90. ದೇವೀಕುಂಡಮ್ ಸುವೃತ್ತಿ ತೀರ್ಥ,
  91. ಬಕದಾಲ್ಭ್ಯಾಶ್ರಮ ಮಹಿಮಾ
  92. ಮುಕ್ತಿನೃಸಿಂಹ ಮಾಹಾತ್ಮ್ಯಂ
  93. ವಿದ್ವೇಷಣಸ್ಯ ಮುಕ್ತಿಃ
  94. ತಾರಾಕೇಶ್ವರಾದಿ ನವದುರ್ಗಾಂತಾನಾಂ ಅವತಾರಃ
  95. ವ್ಯೋಮಕೇಶ್ವರ ಮಾಹಾತ್ಮ್ಯಂ
  96. ವ್ಯೋಮಕೇಶ್ವರ ಸುಧರ್ಮಸ್ಯ ಪುತ್ರೋತ್ಪತ್ತಿಃ
  97. ಮನ್ಮುಖ ತೀರ್ಥೋಪರಿ, ವ್ಯೋಮಕೇಶ ಪ್ರಭಾವ ವರ್ಣನಂ.
  98. ಬ್ರಹ್ಮಕುಂಡ ತೀರ್ಥ ಮಹಿಮಾ
  99. ಭುವನೇಶ್ವರೀ ಮಹಿಮಾನುವರ್ಣನಂ.

ಮಧ್ಯಮ ಭಾಗಃ.

  1. ಸಪ್ತರ್ಷಿಭಿಃ ಹೇಮಕೂಟ ದರ್ಶನಂ.
  2. ಸಪ್ತರ್ಷಿಭಿಃ ಪಂಪಾಕ್ಷೆತ್ರ ಪ್ರವೇಶಃ
  3. ಸಪ್ತರ್ಷಿಭಿಃ ದೇವಮಂಟಪ ಸಾನ್ನಿಧ್ಯ ಪ್ರವೇಶಃ
  4. ಸಪ್ತರ್ಷಿಭಿಃ ವಿರೂಪಾಕ್ಷ ಪೂಜನಂ
  5. ಸಪ್ತರ್ಷಿಭಿಃ ಕೃತಮಾನಸ ಪೂಜಾ
  6. ಅಷ್ಟೋತ್ತರ ಶತನಾಮ ಸ್ತೋತ್ರಂ.
  7. ಸಪ್ತರ್ಷಿಣಾಂ ಪಂಪಾಕ್ಷೇತ್ರ ನಿವಾಸ ಕಥನಂ
  8. ಭರದ್ವಾಜಂಪ್ರತಿ ವಿಷ್ಣುವೃಧ್ದ ಪ್ರಶ್ನಃ.
  9. ಪೂರ್ವದ್ವಾರೇ ಕಿನ್ನರೇಶ್ವರ ಮಹಿಮಾ
  10. ದಕ್ಷಿಣ ದ್ವಾರೇ ಜಾಂಬವಂತೇಶ್ವರ ಮಾಹಾತ್ಮ್ಯಂ
  11. ಪಶ್ಚಿಮ ದ್ವಾರೇ ಸೋಮನಾಥ ಮಾಹಾತ್ಮ್ಯಂ
  12. ಉತ್ತರ ದ್ವಾರೇ ಮಾಣಿಭದ್ರೇಶ್ವರ ಮಾಹಾತ್ಮ್ಯಂ
  13. ಆಗ್ನೇಯ ನೈರುತ್ಯೋಪದ್ವಾರ ಪ್ರಶಂಸಾ
  14. ವಾಯುವ್ಯೇಶಾನೋಪದ್ವಾರ ಪ್ರಶಂಸಾ
  15. ರಂಭಾಶಿಲಾದಿ ತೀರ್ಥ ಪ್ರಶಂಸಾ
  16. ಹರಿಶ್ಚಂದ್ರೋಪಾಖ್ಯಾನಂ
  17. ವಸಿಷ್ಟ ವಿಶ್ವಾಮಿತ್ರ ಸಂವಾದಃ
  18. ಹರಿಶ್ಚಂದ್ರಸ್ಯ ಮೃಗಯಾ ವರ್ಣನಂ.
  19. ವಸಿಷ್ಟ ಧರ್ಮೋಪದೇಶಃ
  20. ಮಾಯಾ ವರಾಹ ಪ್ರಭಾವಃ
  21. ವಿಶ್ವಾಮಿತ್ರ ರೋಷಾವಿರ್ಭಾವಃ
  22. ಹರಿಶ್ಚಂದ್ರೇಣ ಚಂಡಾಲಕನ್ಯಕಾ ದರ್ಶನಂ
  23. ಕೌಶಿಕೇನ ಹರಿಶ್ಚಂದ್ರ ರಾಜಾಪಹರಣಂ
  24. ಹರಿಶ್ಚಂದ್ರಸ್ಯ ರಾಜ್ಯಾನ್ನಿರ್ಗಮನಂ
  25. ಮಾಯಾ ವಹ್ನಿ ಸೃಷ್ಟಿಃ
  26. ಚಂದ್ರಮತೀ ವಿಕ್ರಯಃ
  27. ವೀರಬಾಹು ದರ್ಶನಂ
  28. ಹರಿಶ್ಚಂದ್ರೇಣ ಸ್ಮಶಾನ ರಕ್ಷಣಂ
  29. ಚಂದ್ರಮತ್ಯಾ ಸರ್ಪವಿಷ್ಟ ಲೋಹಿತಾಶ್ವ ದರ್ಶನಂ
  30. ಚಂದ್ರಮತೀ ವಧಃ
  31. ಬ್ರಹ್ಮಾದಿಭಿಃ ಹರಿಶ್ಚಂದ್ರಾಯ ವರಪ್ರದಾನಂ
  32. ಪಾಪವಿನಾಶನಾಶ್ವಮೇಧ ತೀರ್ಥ ಮಹಿಮಾ

ಉತ್ತರಾರ್ಧಂ

  1. ಮನ್ಮುಖ ತೀರ್ಥೋತ್ಪತ್ತಿ ಕಥನಂ
  2. ಮನ್ಮುಖತೀರ್ಥೇ ಅವಾಂತರ ತೀರ್ಥ ಪ್ರಶಂಸಾ
  3. ನಲೇಶ್ವರಾದಿ ಯೋಗನೃಸಿಂಹ ಪರ್ಯಂತದೇವ ಕಥನಂ
  4. ಮಹಾಕಾಳಾದಿ ಶಕ್ತಿತ್ರಯಪದ ನ್ಯಾಸಾಂತ ಕಥನಂ

ಉತ್ತರ ಭಾಗಃ

  1. ದೇಶಕಾಲಾದಿ ನಿರೂಪಣಂ.
  2. ವೇದಮಾಹಾತ್ಮ್ಯ ಕಥನಂ
  3. ವೇದವ್ಯಾಸ ನಕ್ರಮಃ
  4. ನವವಿಧ ಸೃಷ್ಟಿ ಕಥನಂ
  5. ಭುವನಕೋಶದೇಶ ನಿರ್ಣಯಃ
  6. ಕಾಲಾಧಿಕಾರಿ ನಿರೂಪಣಂ
  7. ಸದಾಚಾರ ಕಥನಂ
  8. ಪಂಚಾಕ್ಷರೀ ಮಹಿಮಾ, ಆಶ್ಚರ್ಯ ಕಥನಂ
  9. ಪಂಚಾಕ್ಷರೀ ಮಹಿಮಾ ವಿಭೂತಿ ಕಥನಂ
  10. ಪಂಚಾಕ್ಷರೀ ಪ್ರಾಸಾದಾದಿ ಕಥನಂ
  11. ಪಂಚಾರ್ಥಚರಣ ಪ್ರಶಂಸಾ
  12. ಪಾಶುಪತವ್ರತ ನಿರೂಪಣಂ
  13. ಶೈವಚರ್ಯಾ ಮಹಾವ್ರತ ನಿರೂಪಣಂ
  14. ಕಾಲಾಮುಖ ಪ್ರಶಂಸಾ
  15. ಕಾಲಾಮುಖ ಮತ ನಿರೂಪಣಂ
  16. ಅಷ್ಟಾಂಗ ಯೋಗ ನಿರೂಪಣಂ. ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ.

ಪಂಪಾಮಹಾತ್ಮ್ಯೆ, ಮಹಿಮೆ

ಸತ್ಕಥಾ ಶ್ರವಣ, ಈಶ್ವರಾರಧನೆ, ಧ್ಯಾನ, ವ್ರತ. ಸತ್ಸಂಗಾದಿಗಳು ಪ್ರಾಣಿಗಳಿಗೆ ಶ್ರೇಯವನ್ನು ಕೋರುವಂತಹ ಶ್ರೇಯೋವಿಧಾಯಕಗಳಾಗಿವೆ. ಇದರಲ್ಲಿ ವ್ರತಕ್ಕಿಂತಲೂ ಈಶ್ವರಾರಧನೆ, ಈಶ್ವರಾರಧನೆಗಿಂತಲೂ ಧ್ಯಾನ, ಧ್ಯಾನಕ್ಕಿಂತಲೂ ಸತ್ಸಂಗ, ಸತ್ಸಂಗಕ್ಕಿಂತಲೂ ಸತ್ಕಥಾಶ್ರವಣಕ್ಕೆ ಸಾವಿರಾರು ಪಟ್ಟು ಹೆಚ್ಚು ಮಹಿಮೆಯಿದೆ. ಅಂತಹ ಯಾವ ಸತ್ಕಥಾ ಶ್ರವಣದಿಂದ ಪ್ರಾಣಿಗಳು ಸದ್ಗತಿಯನ್ನು ಪಡೆಯಬಹುದೋ ಅಂತಹ ಸತ್ಕಥೆಯನ್ನು ಸಾಕ್ಷಾತ್ ಶಂಕರನೇ ಗೌರಿ ದೇವಿಗೆ ಉಪದೇಶಿಸಿದನು ಯಾವ  ಶ್ರವಣ ಮಾತ್ರದಿಂದ ಶಾಂಕರ ಪದವನ್ನು ಹೊಂದುತ್ತಾರೋ ಅಂತಹ ಶ್ರವಣ ಯೋಗ್ಯವಾಗಿದ್ದ ಸತ್ಕಥೆ0iÉುೀ ಶ್ರೀ ಪಂಪಾಮಹಾತ್ಮೆಯು ಆಗಿದೆ.
 
 ಪಂಪಾ ಮಹಾತ್ಮ್ಯಮತುಲಂ ಪಠತ್ವಂ ಸರ್ವದಾ |
 ಮುನೇ ವಿರೂಪಾಕ್ಷಂ ಸಮಭ್ಯರ್ಚ ಭಕ್ತ್ಯಾಮುಕ್ತೋ ಭವಿಷ್ಯಸಿ ||
 ಕ್ಷಣಂ ವಾಸ್ಮಿನ್ವಸನ್ ಕ್ಷೇತ್ರೇ ದುರಿತಾನ್ ಮುಚ್ಚತೇ ನರಾಃ |
 ವಿನಾದಾನಂ ವಿನಾಧ್ಯಾನಂ ವಿನಾತೀರ್ಥಾವಗಾಹನಂ ||

ಎಂದು ಸಾಕ್ಷಾತ್ ವ್ಯಾಸರು ಜಾಬಾಲಿ ಮಹರ್ರ್ಷಿಗಳಿಗೆ ಅವರು ಮಾಡಿದಂತಹ ಪರಿಹಾರಕ್ಕೆ ಕ್ಷೇತ್ರ ಮಹಾತ್ಮ್ಯೆಯನ್ನು ವಿವರಿಸುತ್ತಾ ಯಾವುದೇ ರೀತಿಯ ದಾನಗಳನ್ನು ಮಾಡದೇ, ಯಾವುದೇ ತರಹದ ಯೋಗ ಧ್ಯಾನಗಳನ್ನು ಮಾಡದೇ ಅದೇ ರೀತಿ ಯಾವುದೇ ತೀರ್ಥದ ಬಗ್ಗೆ ತಿಳುವಳಿಕೆ ಇಲ್ಲದಿದ್ದರೂ ಸಹಾ ಅಂತಹ ಮನುಷ್ಯರು ಒಂದು ಕ್ಷಣ ಮಾತ್ರದ ಕಾಲದಷ್ಟು ಸಮಯ ಈ ಕ್ಷೇತ್ರದಲ್ಲಿ ನಿವಾಸ ಮಾಡುವದರಿಂದಲೇ ಸರ್ವಪಾಪಗಳಿಂದಲೂ  ವಿಮುಕ್ತರಾಗುತ್ತಾರೆ ಎಂದು ತಿಳಿಸಿರುತ್ತಾರೆ. ಪಂಪಾಕ್ಷೇತ್ರಂ ಸರ್ವಲೋಕೇ ಪವಿತ್ರಂ ಪಂಪಾಕ್ಷೇತ್ರವು ಸರ್ವ ಲೋಕಗಳಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಪವಿತ್ರವಾದುದು. 

ದೇವದೇವ ಜಗನ್ನಾಥ ಕರುಣಾಕರ ಶಂಕರ |
ಪಾಪಿನಾಂ ಪರಮಾ ಮುಕ್ತಿರನಾಯಾಸಂ ಭವೇತ್ಕಥಂ||
ಯಶ್ಚಸೂಕ್ಷ್ಮತಮೋಪಾಯೋ ಭವದುಃಖ ನಿವಾರಣೇ |
ಯಸ್ಯಶ್ರವಣಾತಸ್ಸರ್ವ ತೀರ್ಥಸ್ನಾನಫಲಂತಥಾ||
ಅನಾಯಾಸೇನ ಸರ್ವಜ್ಞಕಥಂ ಭೂಯಾತ್ ವದ ಪ್ರಭೋ |
ಉಪಾಯಂ ಕೃಪಯಾ ಬ್ರೂಹಿ ಕಲ್ಯುದ್ದರಣ ಹೇತವೇ ||
ಶ್ರೋತವ್ಯಂ ಪಠನೀಯಂಚ ಶರ್ವದಂ ಸರ್ವ ದೇಹಿನಾಂ |
ಅಸ್ಯಶ್ರವಣ ಮಾತ್ರೇಣ ಜನಾಯಾಸ್ಯಂತಿ ಸದ್ಗತೀಂ ||
ಪೆÇ್ರೀಕ್ತವಾನ್ ಕಲಿದೋಷಜ್ಞಂ ರಹಸ್ಯ ವೇದ ಭಾಷಿತಂ |
ವಿರೂಪಾಕ್ಷಸ್ಯಚರಿತಂ ಪಂಚಕ್ರೋಶಾಧಿಪಸ್ಯಮೆ ||
ಹೇಮಕೂಟಗಿರೇಸ್ತುಂಗಭದ್ರಾಯಾ ದೇವಿಸತ್ಕಥಾಂ |
ಪಂಪಾ ಮಹಾತ್ಮಮಮಲಂ ಕಲಿಕಲ್ಮಷನಾಶನಂ ||
ಮುಕ್ತಿದಂ ಕಲಿಜಾನಾಂಚ ಪಂಪಾಕ್ಷೇತ್ರಸ್ಯ ವೈಭವಂ||
ಸತ್ಕಥಾ ಶ್ರವಣಂ ಧ್ಯಾನಮೀಶ್ವರಾರಾಧನಂ ವ್ರತಂ|
ಸತ್ಸಂಗತ್ಯಾದಿಕಾ ಹ್ಯೇತೇ ನೃಣಾಂ ಶ್ರೇಯೋ ವಿಧಾಯಕಾಃ ||
ಪ್ರಣಾಮಾಮಿ ತಮೀಷಾನಂ ಸರ್ವವ್ಯಾಪಿನಮವ್ಯಯಂ |
ಯಚ್ಚ್ರುತ್ವಾ ಮುಚ್ಯತೇಜಂತುರಜ್ಞಾನೋತ್ಥಮಹೋಭಯಾತ್ ||
ಪಂಪಾ ಮಹಾತ್ಮ್ಯಮತುಲಂ ಶ್ರಾವಣೀಯಂ ತ ದೇವವಃ | ಶೃಣುಧ್ವಮೃಷುಯಸ್ಸರ್ವೇಪಂಪಾಮಹಾತ್ಮ್ಯಮುತ್ತಮಂ||
ಗೌರಿಶಂಕರ ಸಂವಾದಂ ಪಂಪಾಕ್ಷೇತ್ರಸ್ಯ ವೈಭವಂ |
ಯುಚ್ಚ್ರುತ್ವಾ ಶಾಂಕರಪದಂ ಪ್ರಾಪ್ನತ್ಯಾಶುನಸಂಶಯಃ ||

ಭಗವಾನ್ ಶ್ರೀ ವಿರೂಪಾಕ್ಷೇಶ್ವರಸ್ವಾಮಿ

Sri Pampa Virupaksha Swamy

ಅನಾದಿಯಾದಂತಹ ಸೃಷ್ಟಿಗೆ, ಅದರ ಕ್ರಿಯಾ ಕಾರಣಗಳಿಗೆ, ಸಕಲ ಜಗತ್ತುಗೆ  ಮೂಲಕಾರಣನಾದ  ಅತೀಂದ್ರಿಯನಾದ  ಪರಮೇಶ್ವರನ ಲೀಲೆಗಳನ್ನು ಅವನ ಸುಂದರ ದಿವ್ಯ ಮನೋಹರ ವಿಭೂತಿಗಳಿಂದ ಕೂಡಿದ ತೇಜೋಭರಿತವಾದ ಭಗವಂತನ ರೂಪವನ್ನು ಮಾಯಾ ಜಗತ್ತಿಗೆ ಒಳಗಾದ ಪಾಂಚ ಭೌತಿಕ ಇಂದ್ರಿಯಗಳಿಂದ ದರ್ಶಿಸುವದೂ ತಿಳಿದೊಕೊಳ್ಳುವದೂ ಸಾಮಾನ್ಯ  ಮನುಷ್ಯರಿಗೆ "ಯತೋವಾಚೋ ನಿವರ್ತನ್ತೇ" ವೇದ ವಾಕ್ಯ ಪ್ರಾಮಾಣ ದಿಂದ ಅಸಾಧ್ಯವು. ಅಂತಹ ರೂಪವು ದರ್ಶಿಸುವುದಕ್ಕೆ ಆ ಭಗವಂತನ ಕೃಪೆದಿಂದಲೇ ದರ್ಶಿಸುವುದಕ್ಕೆ ಸಾಧ್ಯ.

ಅಂತಹ ಆ ಭಗವಂತನ ಕೃಪೆ ಪಡೆದು ಅವನನ್ನು ಪ್ರತ್ಯಕ್ಷವಾಗಿ ಸಾಕ್ಷಾತ್ಕರಿಸಿಕೊಂಡು ಅವನ ಅನುಗ್ರಹದಿಂದ ಆ ಪರಮಾತ್ಮನ ದಿವ್ಯ ರೂಪವನ್ನು ಧ್ಯಾನ ಸಮಾಧಿ ಸ್ಥಿತಿಯಲ್ಲಿ ಶ್ರೀ ಪಂಪಾಂಬಿಕೆಯು ಮಾಡಿದ ವರ್ಣನೆ ಸ್ತುತಿಯ ಪ್ರಕಾರ ಶ್ರೀ ಭಗವಾನ್ ವಿರೂಪಾಕ್ಷೇಶ್ವರನು:- ಪ್ರಪ್ರಥಮನೂ, ಪುರಾಣ ಪುರುಷನೂ, ಮಂಗಲ ಸ್ವರೂಪನೂ, ಪಂಚಮುಖನೂ, ಪಂಚದಶನಯನನೂ, ಅನೇಕಾದ್ಭುತಲೀಲಾ ಮೂರ್ತಿಯೂ, ಪಾತಾಲಾದಿ ಚತುರ್ದಶ ಲೋಕಗಳನ್ನು ಗರ್ಭೀಕರಿಸಿಕೊಂಡಿರುವನೂ, ಸುವಿರಾಡ್ರೂಪನೂ, ಜಗದ್ರೂಪನೂ, ಅವ್ಯಕ್ತನೂ, ಅಣುವಿಗೆ ಅಣು, ಮಹತ್ತಿಗೆ ಮಹನೂ, ಹೇಮಕೂಟೇಶ್ವರನೂ, ವ್ಯಾಘ್ರ ಚರ್ಮಾಂಬರನೂ, ದಿವ್ಯ ಸುಂದರ ಮೂರ್ತಿಯೂ, ನಗುಮುಖದವನೂ, ವಿಶಾಲವಾದ ಕಣ್ಣುಗಳುಳ್ಳವನೂ, ಚೆಂದಾದ ಕರ್ಣಕುಂಡಲಗಳನ್ನು ಧರಿಸಿದವನೂ, ಜಟೆಯಲ್ಲಿ ಚಂದ್ರ-ಗಂಗೆಯರನ್ನು ಧರಿಸಿದವನೂ, ಜಟಾವಲ್ಕಲಗಳನ್ನು ಧರಿಸಿದವನೂ, ಕೋಟಿಸೂರ್ಯ ಪ್ರಕಾಶಮಾನನೂ, ಕೋಟಿಚಂದ್ರರಿಗೆ ಸಮನಾದ ಕಾಂತಿಯುಳ್ಳವನೂ, ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವವನೂ, ಶಂಭುವೂ ಪರಮಾನಂದ ಮೂರ್ತಿಯೂ ಆಗಿದ್ದಾನೆ.
ಅಂತಹ ಶ್ರೀ ವಿರೂಪಾಕ್ಷನು ಚಾಕ್ಷುಷ ಮನ್ವಂತರ ಆರಂಭದಲ್ಲಿ ಈ ಭೂಮಿಮೇಲೆ ಭಾರತ ದಕ್ಷಿಣ ದಿಗ್ಭಾಗದಲ್ಲಿ ತುಂಗಭದ್ರಾತೀರದಲ್ಲಿ ಇರುವ ಹೇಮಕೂಟ ಪರ್ವ್‍ತದಲ್ಲಿ 31,06,13,114 ಸಂ ಹಿಂದೆ ಸಮಸ್ತ ಜೀವರಾಶಿಗಳನ್ನೂ ಅನುಗ್ರಹಿಸುವುದಕ್ಕಾಗಿ ಅವತರಿಸಿನು.


” ಶ್ರೀ ಮದ್ಭಾರತವರ್ಶಸ್ಯ ದಕ್ಷಿಣೇಭಾಗ ಆಸ್ಥಿತ: ತುಂಗಭದ್ರಾ ನದೀ ತೀರೇ ವಿರೂಪಾಕ್ಷಾಖ್ಯಯಾ ಶಿವ: “

ಭಗವಂತ ಮತ್ತು ಭಕ್ತರ ಸಂಗಮಸ್ಥಾನ.

ಶ್ಲೋ : ಭಗವದ್ಭಕ್ತಿ ಭಕ್ತಾನಾಂ ಸಂಗಮಂ ಪಾವಕಂ ನೃಣಾಂ |
ಶ್ರೀ ಭಕ್ತಿನಗರ ಕ್ಷೇತ್ರಂ ಸದಾವಿಜಯತಾತಮಾಂ ||


ನಿಖಿಲ ಚರಾಚರ ದುರಿತ ದುರಂತ ತಾಪಗಳನ್ನು ಕರುಣಾದ್ರ್ರ ದೃಷ್ಟಿಯಿಂದ ಸಕಲ ಜೀವಿಗಳನ್ನೂ ಉದ್ಧರಿಸುವದಕ್ಕಾಗಿ ಭಕ್ತರಿಗೋಸ್ಕರವಾಗಿ ಸಾಕ್ಷಾತ್ ಭಗವಂತ. ಮತ್ತು ಅಂತಹ ಭಗವಂತನಿಗಾಗಿ ಮಹಾ ಭಾಗವತ ಭಕ್ತರು ಏಕೀಕೃತವಾದ ಏಕೈಕ ದಿವ್ಯ ಕ್ಷೇತ್ರ ತಪೆÇೀಭೂಮಿಯಾದ ಈ ಪಂಪ ವಿರೂಪಾಕ್ಷ ಕ್ಷೇತ್ರ ಸುಮಾರು 31 ಕೋಟಿ ವರ್ಷಗಳ ಇತಿಹಾಸವುಳ್ಳ ತಪೆÇೀದಿವ್ಯ ಮಹಿಮಾನ್ವಿತ ಕ್ಷೇತ್ರ ಶ್ರೀ ಕ್ಷೇತ್ರ ಪಂಪಾವಿರೂಪಾಕ್ಷ ಸ್ವರ್ಣ ಹಂಪಿ ಕ್ಷೇತ್ರವು. ಕಲೌ ದೇವೋ ಮಹಾದೇವಃ ಎಂಬ ಆರ್ಯೋಕ್ತಿಯಂತೆ ಕಲಿಯುಗದಲ್ಲಿ ಸಂಸಾರ ಸಾಗರದಿಂದ ಉದ್ದರಿಸುವದಕ್ಕಾಗಿ ಪರಶಿವ ಶ್ರೀ ವಿರೂಪಾಕ್ಷನಾಗಿ ನೆಲೆಸಿದಂತಹ ಮತ್ತು ಆ ವಿರೂಪಾಕ್ಷನ ಕೃಪಾಕಟಾಕ್ಷದಿಂದ ಅವನನ್ನೇ ಪ್ರಾಣನಾಥನನ್ನಾಗಿ ಪಡೆದಂತಹ ಭಕ್ತಾಗ್ರೇಸರೆಯಾದ ಶ್ರೀ ಪಂಪಾಂಬಿಕೆಯು ತಪೆÇೀನಿವಾಸವು ಈ ಪಂಪಾಕ್ಷೇತ್ರವು.

ನಾನಾ ತೀರ್ಥಗಳಿಂದ ವೈರಭಾವ ವಿನಿರ್ಮುಕ್ತವಾಗಿ ಇದ್ದು  ಮತ್ತು ಕ್ಷಣ ಮಾತ್ರಕಾಲ ಈ ಕ್ಷೇತ್ರದಲ್ಲಿ ಭಕ್ತಿಭಾವನೆಯಿಂದ ನಿವಾಸವನ್ನು ಮಾಡುವದರಿಂದ ಮುಕ್ತಿಯನ್ನೇ ದಯಪಾಲಿಸುವಂತಹ ಕರುಣಾಸಮುದ್ರನಾದ ಭಗವಂತನ ಸಾಮ್ರಾಜ್ಯವು, ಭಕ್ತರುಗಳ ತಪೆÇೀಭೂಮಿಯು ಈ ಕ್ಷೇತ್ರವು. ಕೋಟ್ಯಾಂತರ ವರ್ಷಗಳಿಂದ ಭಗವಂತನ ಮತ್ತು ಭಕ್ತರ ಸಂಗಮ ಕ್ಷೇತ್ರವಾಗಿ ರಾರಾಜಿಸುತ್ತಿದೆ. ಭಾಗವತದಲ್ಲಿ ಶ್ರೀ ಭಗವಂತನ ವಚನದಂತೆ ಕಲಿಯುಗದಲ್ಲಿ ಮುಕ್ತಿ,ಭಕ್ತಿ, ಭಗವಂತನನ್ನೂ  ಪಡೆಯುವ ಇಚ್ಚೆಯುಳ್ಳ ಭಕ್ತಜನರಿಗೆ ಕಲ್ಪತರುವೂ ಸಹಾ ಆಗಿದೆ ಈ ಕ್ಷೇತ್ರವು. ಇತಿಹಾಸದಲ್ಲಿ ಹರಮಿತ್ರನೂ, ಅತಿವಕ್ತ್ರನೂ, ಪುಂಡರೀಕನೂ, ಕಿನ್ನರೇಶನೂ, ಮಾತಂಗೇಶ್ವರನೂ, ಸಿದ್ಧೇಶ್ವರನೂ, ಮಾಂಡವ್ಯನೂ, ಶತರ್ಚನನೂ, ಜಾಂಬವಂತನೂ, ಭದ್ರೆಯೂ, ದೇವದೂತನೂ, ಅಗಸ್ತ್ಯನೂ ಚಂದ್ರನೂ, ವ್ಯಾಘ್ರಪ್ಲುತನೂ, ಮಾಣಿಭದ್ರೇಶ್ವರನೂ, ಕುಬೇರನೂ, ಸರ್ವಮಂಗಳೆಯೂ, ಮಾಲ್ಯವಂತನೂ, ಶ್ರೀಕುಂಡಲ ನಿಕುಂಡಲ ನೂ,  ಶಬರಿ ಯವರೂ, ಆಮ್ರಕೂಟನೂ, ರಂಗನಾಥನೂ, ತಾರಾ, ಕಪಿಲ, ಸಾಂಬ, ಕುಮಾರ, ವ್ಯಾಘ್ರಾಸುರ, ಗಜಾಸುರ, ವ್ಯೋಮಕೇಶ್ವರ, ಇತ್ಯಾದಿ ಅನೇಕ ಭಕ್ತರ ಮತ್ತು ಭಾರದ್ವಾಜ, ಜಮದಗ್ನಿ, ಅತ್ರಿ, ಗೌತಮ, ಕಶ್ಯಪ, ವಶಿಷ್ಠ, ನಾರದ, ಇತ್ಯಾದಿ ಮಹರ್ಷಿಗಳೂ ಸಪ್ತ ಋಷಿಗಳೂ ಹರಿಶ್ಚಂದ್ರಾದಿ, ವಾಲಿ, ಸುಗ್ರೀವಾದಿ, ಚಕ್ರವರ್ತಿಗಳೂ ಮಹಾ ಭಾಗವತ ಭಕ್ತಾಗ್ರೇಸರರಾದ ಹನುಮಂತ, ಜಾಂಬವಂತ, ಅಂಗದ, ಇತ್ಯಾದಿ ಭಾಗವತರಿಗೂ ಈ ಕ್ಷೇತ್ರವು ಕಾರ್ಯಕ್ಷೇತ್ರವಾಗಿದ್ದು  ಆಗಿನ ಕಾಲದಿಂದಲೂ ಭಾಗವತರ ಪಂರಂಪರೆಯು ಮುಂದುವರೆದು ಶ್ರೀ ಪುರಂದರ ದಾಸರಂಥವರು ಭಗವಂತನ ಸಾಕ್ಷಾತ್ಕಾರವನ್ನು ಕಂಡು ಮುಕ್ತಿಯನ್ನು ಪಡೆದುಕೊಂಡಂತಹ ಸುಪ್ರಸಿದ್ಧ ಕ್ಷೇತ್ರ ಭಕ್ತರ ಮತ್ತು ಭಗವಂತನ ಸಂಗಮ ಕ್ಷೇತ್ರವಾಗಿ ಭಕ್ತಿನಗರ ಸಾಮ್ರಾಜ್ಯವಾಗಿ ಕಲಿ ಕಲ್ಮಶಸಂಚಯಗಳಿಂದ ಜೀವಿಗಳನ್ನು ಉದ್ದರಿಸುವ ಮಹಾ ಮಹಿಮಾನ್ವಿತ ಭಕ್ತಿ ಸಂಗಮ ಕ್ಷೇತ್ರವಾಗಿದೆ.

ಶ್ಲೋ : ಭಗವಾನ್‍ಯಶ್ಚಸರ್ವಜ್ಜಃ ಸರ್ವಸರ್ಜನಕಾರಣಂ|
ಭಕ್ತಾನ್ ವಾಚಯನ್ ಸ್ನೇಹಾತ್ ತತ್ವಾನ್ ಭಾಗವತಾನ್ ಸದಾ ||
ಸಾಮ್ರಾಜ್ಯಂ ಭಕ್ತಿನಗರಂ ಭವಬಂಧ ಪ್ರಣಾಶಕಂ |
ಭಕ್ತಿಮುಕ್ತೀ ಸಂಪ್ರದದಚ್ಚಕಾಸ್ತ್ವಾಚಂದ್ರತಾರಕಂ. ||

ಪವಿತ್ರ ಸರೋವರ, ತೀರ್ಥಗಳು

ಕ್ಷೇತ್ರೇಸ್ಮಿನ್ ಪ್ರಕಾಶಂತೇ ತೀರ್ಥಾನಿ ವಿವಿಧಾನಿಚ ಪವಿತ್ರ ಸರೋವರಾಣಿ. ಭಗವಂತನ ಕೃಪಾಶೀರ್ವಾದಗಳಿಂದ ಭೌತಿಕ ಸ್ಥಿತಿಯಿಂದ ಅನೇಕ ಮಹರ್ಷಿಗಳು ಸಹಸ್ರಾರು ವರ್ಷಗಳು ಅಷ್ಟಾಂಗ ಯೋಗ ಸಹಿತ ತಪಸ್ಸುಗಳನ್ನು ಆಚರಣೆ ಮಾಡಿದ್ದಂತಹ ದಿವ್ಯಸ್ಥಾನಗಳಲ್ಲಿ ಅವರವರ ಹೆಸರುಗಳ ಮೇಲೆ ಪ್ರಾಕೃತಿಕ ಸ್ವಭಾವದಿಂದ ಅವರ ತಪೆÇೀಬಲಗಳಿಂದಲೂ ಉದ್ಭವವಾಗಿರುವಂಥ ಜಲಸಮೂಹವನ್ನು ತೀರ್ಥ ಅಥವಾ ಸರೋವರ ಎಂದು ಕರೆಯುತ್ತಾರೆ. ವಿಶಿಷ್ಟವಾಗಿ ಅಂಥ ತೀರ್ಥಗಳಲ್ಲಿ ಸರೋವರಗಳಲ್ಲಿ ಆಚಮನಾದಿ ಸ್ನಾನಗಳನ್ನು ಮಾಡುವದರಿಂದ ಸಾಮಾನ್ಯ ಪ್ರಾಣಿಯೂ ಸಹಾ ದಿವ್ಯಶರೀರಗಳನ್ನು ಹೊಂದಿ ಭಗವಂತನ ಅನುಗ್ರಹವನ್ನು ಪಡೆಯಬಹುದೆಂದು ಈ ಕ್ಷೇತ್ರದ ಮಹಾತ್ಮ್ಯವು ತಿಳಿಸುತ್ತದೆ.

ಲಕ್ಷಾಂತರ ವರ್ಷಗಳಿಂದ ಈ ಕ್ಷೇತ್ರದಲ್ಲಿ0iÉುೀ ಪರಶಿವನು ತಪೆÇೀಮಗ್ನನಾಗಿ ಇರುವ ಸಮಯದಲ್ಲಿ ಸಾಕ್ಷಾತ್ ದಾಕ್ಷಾಯಣಿಯು ಪರಶಿವನನ್ನು ಅನುಗ್ರಹಕ್ಕಾಗಿ ತುಂಗಾತಟದಲ್ಲಿ ತಪೆÇೀಮಗ್ನಳಾಗಿ ಈಶ್ವರನ ಕೃಪೆಯನ್ನು ಪಡೆದಿರುವ ಕಾರಣದಿಂದ ಅಂಥ ಪಂಪಾಂಬಿಕೆ ಮಾತೆಯ ತಪೆÇೀಸ್ಥಳದಲ್ಲಿ ದಿವ್ಯ ಪಂಪಾಸರೋವರವು ಉದ್ಭವವಾಗಿದೆ. ಈ ಸರೋವರದ ಹೆಸರಿನಿಂದಲೇ ಪಂಪಾ ಕ್ಷೇತ್ರವು ಹೆಸರುವಾಸಿಯಾಗಿದೆ.

ಇಂತಹಾ ಸರೋವರಗಳ ಬಗ್ಗೆ ಅನೇಕ ಪುರಾಣದಲ್ಲಿ ವಿಶೇಷವಾಗಿ ತೀರ್ಥಗಳ ಮಹಾತ್ಮ್ಯೆಯನ್ನು ವರ್ಣಿಸುವ ಸಂದರ್ಭದಲ್ಲಿ ಪಂಪಾಕ್ಷೇತ್ರದಲ್ಲಿ ವಿಶೇಷವಾಗಿ 41 ದಿವ್ಯ ತೀರ್ಥಗಳ ಬಗ್ಗೆ ಆ ತೀರ್ಥಗಳ ಉಗಮಸ್ಥಾನದ ಮೂಲ ಪುರುಷರ ಬಗ್ಗೆ ಆ ತೀರ್ಥಗಳಲ್ಲಿ ಸ್ನಾನಾದಿ ಆಚಮನಗಳನ್ನು ಮಾಡಿ ಸದ್ಗತಿಯನ್ನು ಹೊಂದಿದಂಥ ವಿಷಯಗಳನ್ನು ಹೊಂದಿರುವಂತೆ, ಬಕದಾಲ್ಭ ತೀರ್ಥದಲ್ಲಿ ಸ್ನಾನ ಮಾಡಿ ಮುಕ್ತಿ ಪಡೆದ ಹರಮಿತ್ರ, ಅತಿವಕ್ತ್ರನ ಸುಂದರ ಶರೀರ ಪ್ರಾಪ್ತಿ, ಪುಂಡರೀಕ ನಾಮ ದಾನವ ವಧೆ, ಸಿದ್ದೇಶ್ವರ ತೀರ್ಥದ ಪಾವಿತ್ರ್ಯತೆ, ವಾರಾಹ ಪ್ಲುತ ತೀರ್ಥ ಪ್ರಶಂಸೆ, ವಾರಾಹವ್ಯಾಧಯೋರ್ಮುಕ್ತಿಃ, ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದಂತಹ ರಾಕ್ಷಸನಿಗೆ ಅಭಯ ಪ್ರದಾನವು ಮತ್ತು ದೇವತಾ ಪ್ರಾಪ್ತಿಃ, ಶತರ್ಚನ ಯಮ ಸಂವಾದದ ವಿಮಲ ತೀರ್ಥ ಪ್ರಶಂಸವು, ಆ ತೀರ್ಥ ಮಹಿಮೆಯಿಂದ ಚಾಂಡಾಲ ಜನ್ಮ ಪ್ರಾಪ್ತಿ ಮತ್ತು ಅದೇ ತೀರ್ಥದ ವೈಶಿಷ್ಟವನ್ನು ತಿಳಿದು ಪೂಜಿಸಿದ ನಂತರ ಅದೇ ಚಂಡಾಲನಿಗೆ ಶಿವಲೋಕ ಪ್ರಾಪ್ತಿ, ಅಗಸ್ತ್ಯ ತೀರ್ಥ ಪ್ರಶಂಸೆ ಅದರಿಂದ ಚಿತ್ರಸೇನನ ದೇವಲೋಕ ಪ್ರಾಪ್ತಿ, ಸೋಮತೀರ್ಥದ ವಿಶಿಷ್ಟತೆಯಿಂದ ಚಂದ್ರ ನಿಗೆ ಶಿವ ಭೂಷಣ ಪ್ರಾಪ್ತಿ, ವ್ಯಾಘ್ರಪ್ಲುತ ತೀರ್ಥ ವಿಶೇಷತೆ ಯಿಂದ ವಿದ್ಯಾಧರನ ವ್ಯಾಘ್ರಮುಖತ್ವ ನಿವೃತ್ತಿ, ಮಹಾವಿಷ್ಣುವಿನ ಸುದರ್ಶನ ಚಕ್ರದ ಚಕ್ರತೀರ್ಥ ಪ್ರಶಂಸಾ, ನಾಭಿಮತಿ ತೀರ್ಥದಲ್ಲಿ ದೇವತೆಗಳ ಮೃಗತ್ವ ನಿವೃತ್ತಿ, ಮಾಣಿಭದ್ರೇಶ್ವರನ ಪಾಪನಾಶತೀರ್ಥದ ಮಹಿಮೆ ಅದರಿಂದ ದೇವತೆಗಳ ಪಶುತ್ವ ನಿವೃತ್ತಿ, ರತ್ನ ತೀರ್ಥದ ಮಹಿಮೆಯಿಂದ ಕುಬೇರನಿಗೆ ಪುನಃ ರಾಜ್ಯ ಪ್ರಾಪ್ತಿ, ಮುಕ್ತಿ ತೀರ್ಥದಿಂದ ವೈಶ್ಯಾನಾಂ ಕೀಟಯೋನಿಗಳಿಂದ ನಿವೃತ್ತಿ, ಇತ್ಯಾದಿ ಅನೇಕ ಅದ್ಭುತಗಳಿಂದ ಶೋಭಾಯಮಾನವಾಗಿ ತೀರ್ಥಕ್ಷೇತ್ರಗಳಿಗೆ ರಾಜತೀರ್ಥನಾಗಿ ತೀರ್ಥರಾಜ ಎಂಬುವಂತಹ ವೈಶಿಷ್ಟವನ್ನು ಹೊಂದಿದಂತಹ ಈ ಪಂಪಾ ವಿರೂಪಾಕ್ಷಕ್ಷೇತ್ರದಲ್ಲಿ ಇನ್ನೂ ಅನೇಕವಾದ ತೀರ್ಥಗಳು ವಿರಾಜಮಾನವಾಗಿವೆ.

ಪ್ರಸ್ತುತ ಕಲಿಕಾಲದಲ್ಲಿ ಕಲಿಕಲ್ಮಷಗಳ ಸಂಚಯಪ್ರಭಾವದಿಂದ ಪ್ರಾಣಿಗಳ ಉದ್ಧಾರಕ್ಕಾಗಿ ಸಾಕ್ಷಾತ್ ಭಗವಂತನ ಪ್ರೇರಣೆಯಿಂದ ಮಹಾಋಷಿಗಳ ತಪೆÇೀಬಲದಿಂದ “ಕಲಿತಾರಕ” ತೀರ್ಥವೆಂಬ ಮಹಾತೀರ್ಥವು ಇಲ್ಲಿ0iÉುೀ ವಿರಾಜಮಾನವಾಗಿದೆ. ಅಂತಹ 41 ತೀರ್ಥಗಳು ಈ ಕ್ಷೇತ್ರ ದಲ್ಲಿ ವಿರಾಜಮಾನವಾಗಿವೆ.

ವೈಭವ

1) ಮಮಮಾಹತ್ಮ್ಯಮಮಲಂ ಕಲಿಕಲ್ಮಶನಾಶನಂ | ಮುಕ್ತಿದಂಕಲಿಜಾನಾಂಚಪಂಪಾಕ್ಷೇತ್ರಸ್ಯ ವೈಭವಂ ||,
2) ತೀರ್ಥಾನಾಂ ಸಪ್ತಕೋಟೀನಾಂ ಮಹಾತ್ಮ್ಯಂ,
3) ವಿರೂಪಾಕ್ಷಸ್ತು ವಿಶ್ವೇಶ: ತುಂಗಭದ್ರಾತುಜಾಹ್ನವಿ|
ಪಂಪಾಕಾಶಿ ಸಮಾದಿವ್ಯಾ ಭುಕ್ತಿಮುಕ್ತಿ ಪ್ರದಾಯಿನಿ ||,
4) ಪಂಚಕ್ರೋಶಾತ್ಮಕಂ ಶುಭಂ,
5) ಅಹೋಭಾಗ್ಯಂಅಹೋಭಾಗ್ಯಂ ಪಂಪಾಕ್ಷೇತ್ರಸ್ಯವೈಭವಂ |
ಪಂಪಾಕಾಶೀತಿವಿಖ್ಯಾತಾದಕ್ಷಿಣಾಖ್ಯಾಅಮೃತಪ್ರದಾ ||
6) ಅನೇಕ ಜನ್ಮಾರ್ಜಿತ ಪುಣ್ಯ ಸಂಚಯಯಿರಿಯಂ ಪುರಿದೃಷ್ಟಿಪಥಾನುವರ್ತಿನೀ
ಯಥೋ ವಿರೂಪಾಕ್ಷ ಕಟಾಕ್ಷ ದಿವ್ಯಪ್ರಭಾವತೋ ಅನ್ಯತ್ ಭುವಿನಾಸ್ತಿ ಕಿಂಚಿತ್ ಕಿಂಚಿತ್,
7) ಇದಂಹಿ ಪಾವನಂ ಕ್ಷೇತ್ರಂ ಕ್ಷೇತ್ರರಾಜ ಇತಿಶೃತಂ,
8) ಸರ್ವತ್ರ ಹೇಮಕೂಟಾದ್ರಿಃ ಪ್ರಸಿದ್ಧೋ ಭೂದಿಗಂತರೇ,
9) ಪಾತೀತಿ ಪಂಪಾ ಶ್ರೀ ಮುಕ್ತಿದಾಯಿನೀ ಧನವರ್ಧನೀ,
10) ತಸ್ಮಾತ್ ಪಂಪಾಕ್ಷೇತ್ರಮಿದಂ ಸೇವನೀಯಂ ಮುಮುಕ್ಷುಭಿ:,
11) ಕ್ಷೇತ್ರೇಸ್ಮಿನ್‍ಸಂಪ್ರಕಾಶಂತೇ ನಗಾಃಪುಣ್ಯತಮಾಶುಭಾಃ
ಮತಂಗೋ ಮಾಲ್ಯವಂಶ್ಚೈವಋಷ್ಯಮೂಕಾಭಿಧೋ ಗಿರಿಃ |
ಕಿಷ್ಕಿನ್ಧಾದ್ರಿರ್ಹೇಮಕೂಟಃ ಪಂಚಯಿತೀ ಪುಣ್ಯಗೋಚರಾಃ
ಅತ್ರ ದ್ವಾರಾಣಿ ಚತ್ವಾರಿ ಪಂಚಕ್ರೋಶಾತ್ಮಕೇ ಪುರೇ ||
12) ಉಪದ್ವಾರಾಣಿ ಚತ್ವಾರಿ 0iÉುೀಷುಸಿದ್ದಿಯಂತಿ ಸತ್ಕ್ರಿಯಾಃ
ನಿವಸಂತಿ ಸದಾದೇವ ಶಿವಾರ್ಚನರತಾದ್ವಿಜಾಃ,
13) ತಿಸ್ರಃಕೋಟ್ಯೋ„ರ್ಧಕೋಟೀನಾಂ ತೀರ್ಥನಾಂ ಸ್ಥಾನಮುಕ್ತಮಂ,
14) ತುಂಗಭದ್ರಾನದೀರಮ್ಯಾಚಕಾಸ್ತಿವರಮುಕ್ತಿದಾ
ಋಷೀಣಾಮಾಶ್ರಮಾದಿವ್ಯಾ ರಾಜಂತೇಕ್ಷೇತ್ರರಾಜಕೇ |

ಶ್ರೀ ಪರಮೇಶ್ವರನ ಲೀಲಾವಿಲಸಿತವಾದಂತಹ ಚೈತನ್ಯಭರಿತ ಶಕ್ತಿಗಳನ್ನು ಒಂದು ಸ್ಥಾನದಲ್ಲಿ ಕೇಂದ್ರೀಕರಿಸಿದರೆ ಆಂತಹ ಸಮೂಹಗಳ ಸ್ಥಾನಕ್ಕೆ ಕ್ಷೇತ್ರ ಎಂದು ಹೆಸರು. ಅಂತಹ ಪರಮೇಶ್ವರನ ದಿವ್ಯವಾದ ವಿಗ್ರಹವನ್ನು ಪ್ರಾಣಿಗಳ ಲೌಕಿಕ ನೇತ್ರಗಳಿಗೂ ಸಹಾ ದರ್ಶನವನ್ನು ಮಾಡಿಸುವದಕ್ಕಾಗಿ ಪರಮೇಶ್ವರನೇ ಅವನ ತಪಸ್ಸುಗಳಿಗೆ ಮೂಲಕೇಂದ್ರವಾಗಿ ಆರಿಸಿಕೊಂಡಿದ್ದಂತಹ ದಿವ್ಯತಪೆÇೀಮಹಿಮಾನ್ವಿತ ಕ್ಷೇತ್ರವು ಈ ಪಂಪಾ ವಿರೂಪಾಕ್ಷ ಕ್ಷೇತ್ರವು.

ಇಂತಹ ಕ್ಷೇತ್ರದ ಬಗ್ಗೆ ವಿಪುಲವಾಗಿ ಋಷಿಮುನಿಗಳೂ ಶೌನಕಾದಿ ಋಷಿಮುನಿಗಳೂ ಕ್ಷೇತ್ರಪಾಲಕನೂ ಈ ರೀತಿಯಾಗಿ ಕೀರ್ತಿಸಿದರು. ಕಶ್ಯಪ, ವಶಿಷ್ಠ, ಭಾರದ್ವಾಜ ಇತ್ಯಾದಿ ಸಪ್ತಋಷಿಗಳು ಹಿಮಾಲಯದಿಂದ ಹೊರಟು ಪಂಪಾ ಕ್ಷೇತ್ರಕ್ಕೆ ಬಂದು, ನೈಮಿಷಾರಣ್ಯದಲ್ಲಿ ಸಹಸ್ರ ವರ್ಷಗಳ ಸತ್ರಯಾಗವನ್ನು ಮಾಡುವ ಸಮಯದಲ್ಲಿ ಸೂತ ಪುರಾಣಿಕರು ಶೌನಕಾದಿ ಮಹರ್ಷಿಗಳಿಗೆ ಮತ್ತು ವಿರೂಪಾಕ್ಷನ ಸ್ವರೂಪವೇ ಆದಂತಹ ಕ್ಷೇತ್ರಪಾಲಕನಾದ ಶ್ರೀ ಕಾಳಭೈರವನು ಸಪ್ತಋಷಿಗಳಿಗೆ ಹೇಳುವ ರೀತಿಯಾಗಿ ಮತ್ತು ಇಂತಹ ಕ್ಷೇತ್ರದ ಮಹಾತ್ಮ್ಯೆಯನ್ನು ಲಕ್ಷಾಂತರ ವರ್ಷಗಳ ಹಿಂದೆ ದೇವಲೋಕದಲ್ಲಿ ನಂದೀಶ್ವರನಿಗೆ ಸ್ಕಂದಕುಮಾರನು ಉಪದೇಶಿಸಿದ ರೀತಿಯಾಗಿ, ತತ್ಪೂರ್ವಂ, ಸಾಕ್ಷಾತ್ ಪರಮೇಶ್ವರನೇ ತನ್ನದೇ ಆದಂತಹ ಅವರ ಕ್ಷೇತ್ರಮಹಿಮೆಯನ್ನು ಸಾಕ್ಷಾತ್ ಶಕ್ತಿಸ್ವರೂಪಿಣಿಯಾದ ದಾಕ್ಷಾಯಣಿಗೆ ಹೇಳಿದ ಈ ರಹಸ್ಯಗಳನ್ನು ಕ್ಷೇತ್ರದ ಮಹಾತ್ಮ್ಯೆಯನ್ನು ನಾರಾಯಣಾವತಾರವಾದಂತಹ ಶ್ರೀ ಭಗವಾನ್ ವೇದವ್ಯಾಸ ಮಹರ್ಷಿಗಳು ಇನ್ನಷ್ಟು ವಿಸ್ತಾರವಾಗಿ ಪ್ರಾಣಿಗಳ ಉದ್ದಾರಕ್ಕಾಗಿ ಈ ಕ್ಷೇತ್ರದ ಮಹಿಮೆಯನ್ನು ವಿಶೇಷವಾಗಿ ಪಾವಿತ್ರ್ಯತೆಯನ್ನು ಹೇಳಿದಂತೆ {3} ಈ ಕ್ಷೇತ್ರದಲ್ಲಿ ನೆಲೆಸಿದ್ದಂತಹ ಶ್ರೀ ವಿರೂಪಾಕ್ಷನು ಸಾಕ್ಷಾತ್ ಕಾಶಿ ವಿಶ್ವೇಶ್ವರನೇ ಆಗಿದ್ದಾನೆ.

ಇಲ್ಲಿ ಪ್ರವಹಿಸುತ್ತಿರುವ ಪರಮ ಪಾವನೆಯಾದ ತುಂಗಭದ್ರಾ ನದಿಯು ಸಾಕ್ಷಾತ್ ಮಹಾವಿಷ್ಣುವಿನ ಪಾದಕಮಲಗಳಿಂದ ಉದ್ಭವಾದಂತಹ ಗಂಗಾನದಿ0iÉುೀ. ಈ ಪಂಪಾಕ್ಷೇತ್ರವು ಕಾಶಿ ಕ್ಷೇತ್ರದಂತೇ0iÉುೀ ಪ್ರಸಿದ್ದಿಯನ್ನು ಹೊಂದಿ ಭುಕ್ತಿ ಮುಕ್ತಿಗಳನ್ನು ಕೊಡುವಂತಹದ್ದು ಆಗಿದೆ. (1) ಈ ಪಂಪಾಕ್ಷೇತ್ರದ ವೈಭವವು ಸಾಕ್ಷಾತ್ ಪರಶಿವನ ವಿಭೂತಿಗಳ ಮಹಿಮೆ0iÉುೀ ಆಗಿದ್ದು ಕಲಿಕಲ್ಮಷಸಂಚಯಗಳಿಂದ ಪ್ರಾಣಿಗಳನ್ನು ರಕ್ಷಿಸುತ್ತಾ ಸಮಸ್ತ ಪ್ರಾಣಿಗಳಿಗೂ ಅನುಗ್ರಹವನ್ನು ಕೊಡುವಂತಹ ಕ್ಷೇತ್ರವೂ ಆಗಿದೆ. (2) ಭರತವರ್ಷದಲ್ಲಿ ಇದ್ದಂತಹ ಸಪ್ತಕೋಟಿ ತೀರ್ಥಗಳಲ್ಲಿ ಪಂಪಾ ಸರೋವರವು ಉತ್ತಮವಾದಂತಹ ತೀರ್ಥವಾಗಿದ್ದು, ಶ್ರೀ ಮದ್ಭಾಗವತ ವಚನದ ಪ್ರಕಾರ ಕಲಿಯುಗದಲ್ಲಿ ಸೇವಿಸುವದಕ್ಕೆ ಯೋಗ್ಯವಾಗಿದ್ದು ಮುಮುಕ್ಷುಗಳಿಗೆ ಪಂಪಾಸರೋವರವೆಂಬ ದಿವ್ಯ ತೀರ್ಥವು ಕಲ್ಪತರುವಾಗಿದೆ ಮತ್ತು ಈ ಕ್ಷೇತ್ರವು ಇನ್ನೂ 41 ತೀರ್ಥಗಳಿಂದ ಶೋಭಾಯಮಾನವಾಗಿದೆ.

ಶ್ರೀ ಕಾಶೀ ಕ್ಷೇತ್ರದಲ್ಲಿರುವಂತೆ ಈ ಕ್ಷೇತ್ರವೂಸಹಾ ದಿವ್ಯಪಂಚಕ್ರೋಶಾತ್ಮಕವನ್ನು ಒಳಗೊಂಡಿದೆ. ಈ ರೀತಿಯ ಪಂಚಕ್ರೋಶ ಯಾತ್ರೆಯಿಂದ ಮಂಗಳಗಳನ್ನು ಅನುಗ್ರಹಿಸುವ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರವನ್ನು ಜ್ಞಾನೋಪಾಸಕರಾದಂತಹ ಮಹರ್ಷಿಗಳು ಸಾಕ್ಷಾತ್ತಾಗಿ ವೀಕ್ಷಿಸಿ ಆಶ್ಚರ್ಯ ಚಕಿತರಾಗಿ ” ಅಹೋಭಾಗ್ಯಂ ಅಹೋಭಾಗ್ಯಂ” ಎಂದು ಹೇಳುತ್ತಾ ಈ ಪಂಪಾಕ್ಷೇತ್ರದಲ್ಲಿರುವ ಅನೇಕ ವಿಧವಾದಂತಹ ಪ್ರಾಕೃತಿಕ, ಆದಿಭೌತಿಕ, ಆದಿದೈವಿಕ ಮತ್ತು ಆಧ್ಯಾತ್ಮಿಕ ವೈಭವಗಳನ್ನು ನೋಡಿ, ದಕ್ಷಿಣ ಪ್ರಾಂತದಲ್ಲಿರುವ ಈ ಕ್ಷೇತ್ರವು ಅಮೃತಮಯಪ್ರದವಾಗಿದೆ ಎಂದೂ ಶ್ಲಾಘಿಸಿದರು. ಅನೇಕ ಜನ್ಮಾಂತರಗಳ ಪುಣ್ಯಸಂಚಯಗಳಿಂದಲೇ ಇಂತಹ ಕ್ಷೇತ್ರವನ್ನು ನೋಡುವದಕ್ಕೆ ಸಾಧ್ಯವು ಮತ್ತು ಈ ಸೃಷ್ಟಿಯಲ್ಲಿ ಈ ಕ್ಷೇತ್ರದಲ್ಲಿ ಶ್ರೀ ವಿರೂಪಾಕ್ಷನ ಕೃಪಾ ಕಟಾಕ್ಷಗಳು ಸಿಗುವಂತಹ ರೀತಿ ಮತ್ತಿನ್ಯಾವ ಕ್ಷೇತ್ರದಲ್ಲೂ ಅಲಭ್ಯವಾಗಿದೆ. ಸಮಸ್ತ ಕ್ಷೇತ್ರಗಳಿಗೆ ಕ್ಷೇತ್ರರಾಜನಾಗಿ ಪಾವನ ಕ್ಷೇತ್ರವೂ ಆಗಿ ಪ್ರಸಿದ್ಧಿ ಹೊಂದಿದೆ. 14 ಭುವನಗಳಲ್ಲಿಯೂ ಈ ಕ್ಷೇತ್ರದಲ್ಲಿದ್ದಂತಹ ಹೇಮಕೂಟವು ಪ್ರಸಿದ್ದಿ ಹೊಂದಿದ್ದಾಗಿದೆ. ಈ ಕ್ಷೇತ್ರದಲ್ಲಿರುವ ಪುಣ್ಯತಮವಾದ 5 ಪರ್ವತಗಳು 1) ಮಾತಂಗಿ ಪರ್ವತ 2) ಮಾಲ್ಯವಂತ ಪರ್ವತ 3) ಋಷ್ಯಮೂಕ ಪರ್ವತ 4) ಕಿಷ್ಕಿಂಧಾ ಪರ್ವತ 5) ಹೇಮಕೂಟ ಪರ್ವತ ಇವು ಪುಣ್ಯಗೋಚರವಾಗಿವೆ. ಮತ್ತು ಈ ಕ್ಷೇತ್ರಕ್ಕೆ 4 ದಿಕ್ಕುಗಳಲ್ಲಿ ಸೀಮಾರಂಭದಲ್ಲಿ ದಿವ್ಯ ಶೋಭಾಯಮಾನವಾದ 4 ಮಹಾ ಪ್ರಾಕಾರಗಳಿಂದ ಕೂಡಿದ 4 ದೇವಸ್ಥಾನಗಳಿವೆ. 1) ಪೂರ್ವದಲ್ಲಿ ಕಿನ್ನರೇಶ್ವರ 2) ದಕ್ಷಿಣದಲ್ಲಿ ಜಾಂಬವಂತೇಶ್ವರ 3) ಪಶ್ಚಿಮದಲ್ಲಿ ಸೋಮನಾಥೇಶ್ವರ 4) ಉತ್ತರದಲ್ಲಿ ಮಾಣಿಭದ್ರೇಶ್ವರ ದೇವಸ್ಥಾನಗಳಿಂದ ಮತ್ತು ಆಗ್ನೇಯ, ನೈರುತ್ಯ, ವಾಯುವ್ಯ ಮತ್ತು ಈಶಾನ್ಯ ದಿಕ್ಕುಗಳಲ್ಲಿಯೂ ಸಹಾ ಉಪದ್ವಾರಗಳನ್ನು ಹೊಂದಿ ಇದು ಸರ್ವದಾ ಶಿವಾರ್ಚನ ನಿರತರಾದ ದಿವ್ಯ ತಪೆÇೀಮೂರ್ತಿಗಳ ಕ್ಷೇತ್ರವೂ ಈ ಪಂಪಾಕ್ಷೇತ್ರವು.
ಜ್ಞಾನಮಿಚ್ಚೇತ್ ಮಹೇಶ್ವರಃ ಎಂಬುವಂತಹ ವಚನದಂತೆ ಈಗಲೂ ಸಹಾ ಸಪ್ತಋಷಿಗಳು ಸೂಕ್ಷ್ಮ ರೂಪದಲ್ಲಿ ನಿತ್ಯವೂ ಈ ಕ್ಷೇತ್ರದಲ್ಲಿ ಅನೇಕವಾದಂತಹ ಆಶ್ರಮಗಳನ್ನು ಸ್ಥಾಪಿಸಿಕೊಂಡು ಶ್ರೀ ವಿರೂಪಾಕ್ಷನನ್ನು ಸೇವಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಸಾಕ್ಷಾತ್ ಭಗವಾನ್ ವೇದವ್ಯಾಸರೇ ಸ್ಥಾಪನೆಮಾಡಿ ಬ್ರಹ್ಮಚಾರಿಗಳಿಗೆ ವೇದವೇದಾಂತ ಇತಿಹಾಸಾದಿ ಅನೇಕ ಶಾಸ್ತ್ರಗಳನ್ನು ಅಧ್ಯಾಪನ, ಯಜನ, ಯಾಜನ ಇತ್ಯಾದಿ ಅನುಷ್ಟಾನ ಕರ್ಮಗಳನ್ನು ಮಾಡಿಸುದಕ್ಕಾಗಿ ವ್ಯಾಸಾಶ್ರಮವನ್ನು ಸ್ಥಾಪಿಸಿದರು ಈ ಆಶ್ರಮ ಗುರುಕುಲದಲ್ಲಿ ವಿಶೇಷವಾಗಿ ಇದೇ ಪಂಪಾ ಮಹಾತ್ಮ್ಯೆ ಪುರಾಣವನ್ನು ಭೋದಿಸುತ್ತಿದ್ದರು. ಈ ರೀತಿಯಾಗಿ ಕಪಿಲ, ಜಾಬಾಲಿ, ಮುಂತದಹ ಸಮಸ್ತ ಜ್ಞಾನಿಗಳಿಗೂಸಹಾ ಮೂಲ ವಿದ್ಯಾಕೇಂದ್ರವಾಗಿ ಈ ಕ್ಷೇತ್ರವು ಮಹಿಮಾನ್ವಿತವಾಗಿದೆ.

ಪವಿತ್ರ ದೇವಸ್ಥಾನಗಳು

ಸನಾತನ ಧರ್ಮಕ್ಕೆ ಮೂಲಕೇಂದ್ರ ಬಿಂದುಗಳೆಂದರೆ ದೇವಸ್ಥಾನಗಳು. ದೇವಸ್ಥಾನವೆಂದರೆ ವೈದಿಕ ಪರಿಭಾಷೆಯಲ್ಲಿ “ದೇವಾಲಯ” ಎಂಬ ಪದದಿಂದ ವಿಖ್ಯಾತಿ ಹೊಂದಿದೆ. “ದೇವಾನಾಮ್ ಆಲಯಃ” ಪ್ರಾಣಿಗಳ ಸಹಜವಾದಂತಹ ಇಂದ್ರಿಯಗಳಿಂದ ಇಂದ್ರಿಯಾತೀತವಾದ ಸೃಷ್ಟಿಯ ಪ್ರಕೃತಿ ಮತ್ತು ಶಕ್ತಿಗಳ ದರ್ಶನವನ್ನು ಇವುಗಳಿಗೆ ಮೂಲಕಾರಣವಾದ ಭಗವಂತನ ದರ್ಶನವನ್ನು ಪಡೆಯುವುದು ಸಾಮಾನ್ಯರಿಗೆ ಸಾಧ್ಯ ಇಲ್ಲದ ಕಾರಣದಿಂದ ಸಾಕ್ಷಾತ್ ಭಗವಂತನು ಅಂತಹ ಭಕ್ತರನ್ನು ಅನುಗ್ರಹಿಸುವುದಕ್ಕಾಗಿ ತಾನೇ ಅವತಾರ ರೂಪಗಳಲ್ಲಿ ಬಂದು ನೆಲೆಸಿದಂತಹ ಸ್ಥಾನಗಳೇ ಆಧ್ಯಾತ್ಮಿಕ ಕೇಂದ್ರಗಳಾಗಿ ಕ್ಷೇತ್ರಗಳಾಗಿ ಸಾಂಸ್ಕೃತಿಕ ಕೇಂದ್ರಗಳಾಗಿ ಪ್ರಸಿದ್ಧ ದೇವಸ್ಥಾನಗಳಾಗಿವೆ.

ಇಂಥಾ ಕ್ಷೇತ್ರಗಳಲ್ಲಿ ಸಾಮಾನ್ಯ ಜನರೂ ಸಹಾ ವೈದಿಕ ಪೂಜಾವಿಧಾನಗಳಿಂದ ಭಗವಂತನನ್ನು ಆಲಯಗಳ ಒಳಗಡೆ ಆರಾಧನರೂಪದಿಂದ ಸಾಕ್ಷಾತ್ ಭಗವಂತನನ್ನು ಸಾಕ್ಷಾತ್ಕಾರ ಪಡೆಯುವದಕ್ಕಾಗಿ ಈ ಭರತವರ್ಷದಲ್ಲಿ ಎಷ್ಟೋ ದೇವಸ್ಥಾನಗಳು ವಿರಾಜಮಾನವಾಗಿವೆ. ಅದರಲ್ಲಿ ವಿಶೇಷ ಮಹಿಮಾನ್ವಿತವಾದ ಈಶ್ವರನೇ ಪಂಪಾಂಬಿಕೆಯ ತಪಸ್ಸನ್ನು ಮೆಚ್ಚಿ ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಭಸ್ಮಮಾಡಿ ವಿರೂಪಾಕ್ಷ ಎಂಬ ಹೆಸರನ್ನು ಹೊಂದಿ ಈ ಕ್ಷೇತ್ರದಲ್ಲಿ “ಶ್ರೀ ಪಂಪಾವಿರೂಪಾಕ್ಷೇಶ್ವರ” ನಾಗಿ ನೆಲೆಸಿದ್ದಾನೆ. ಅಂತಹ ಪರಮಾತ್ಮನ ಭವ್ಯವಾದ ರಾಜ ಪ್ರಾಕಾರಗಳಿಂದ ವಿಶಿಷ್ಟವಾದಂತಹ ಶಿಲ್ಪಕಲಾನೈಪುಣ್ಯಗಳಿಂದ ಮಹಾರಾಜ ಗೋಪುರಗಳಿಂದ ಇರುವ ಉತ್ಕೃಷ್ಟವಾದ ಈ ದೇವಸ್ಥಾನವು ಭಕ್ತರ ಅಭೀಷ್ಟಗಳಿಗೆ ಅಕ್ಷಯವಾಗಿದೆ ಮತ್ತು ಇನ್ನಷ್ಟು ಇಂತಹ ದೇವಸ್ಥಾನಗಳಿಂದ ಕೂಡಿದೆ. ಅಂತಹ ದೇವಸ್ಥಾನಗಳ ವಿವರ

ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ, ಶ್ರೀ ಪಂಪಾಂಬಿಕಾ, ಶ್ರೀ ಮಾಣಿ ಭದ್ರೇಶ್ವರ, ಶ್ರೀ ಮುಕ್ತಿ ನರಸಿಂಹ, ಶ್ರೀ ತಾರಕೇಶ್ವರ, ಶ್ರೀ ನವದುರ್ಗಾ, ಶ್ರೀ ವ್ಯೋಮಕೇಶ್ವರ, ಶ್ರೀ ಭುವನೇಶ್ವರಿ, ಶ್ರೀ ಹನುಮಂತ, ಶ್ರೀ ಕಿನ್ನರೇಶ್ವರ, ಶ್ರೀ ಸೋಮನಾಥ, ಶ್ರೀ ಕೋದಂಡರಾಮಸ್ವಾಮಿ, ಶ್ರೀ ಯೋಗಾನರಸಿಂಹ, ಶ್ರೀ ರಂಗನಾಥ, ಶ್ರೀ ಆಮ್ರ ಕೂಟೇಶ್ವರ, ಶ್ರೀ ಕಾಳಭೈರವ, ಶ್ರೀ ಮಾತಂಗೇಶ್ವರ, ಶ್ರೀ ಉದ್ದಾನ ವೀರಭದ್ರೇಶ್ವರ ಇನ್ನು ಅನೇಕ ದೇವಸ್ಥಾನಗಳು ಈ ಕ್ಷೇತ್ರದಲ್ಲಿ ವಿರಾಜಮಾನವಾಗಿವೆ ಮತ್ತು 1000 ವರ್ಷಗಳ ಅಂತರದಲ್ಲಿ ಸ್ಥಾಪನೆಯಾದ ದೇವಸ್ಥಾನಗಳು. ಶ್ರೀ ಯಂತ್ರೋದ್ಧಾರಕ, ಶ್ರೀ ವಿಜಯ ವಿಠ್ಠಲ, ಶ್ರೀ ಲಕ್ಷ್ಮಿ ನರಸಿಂಹ, ಶ್ರೀ ಸರಸ್ವತೀ, ಶ್ರೀ ಪಾತಾಳೇಶ್ವರ, ಶ್ರೀ ಅನಂತ ಪದ್ಮನಾಭ, ಶ್ರೀ ರಾಮಾಯಣದ ಚಿತ್ರಗಳುಳ್ಳ ಹಜಾರ ರಾಮ , ಶ್ರೀ ಕೃಷ್ಣ, ಶ್ರೀ ಸಾಸಿವೆ ಕಾಳು ಗಣಪತಿ, ಶ್ರೀ ಸೂರ್ಯನಾರಾಯಣ, ಶ್ರೀ ರಂಗನಾಥ ಸ್ವಾಮಿ, ಶ್ರೀ ಕಡಲೆಕಾಳು ಗಣಪತಿ, ಶ್ರೀ ಮಲ್ಲಿಕಾರ್ಜುನ, (ಮಲ್ಲಪ್ಪನ ಗುಡಿ), ಶ್ರೀ ಚಂಡೀಶ್ವರ, ಶ್ರೀ ಸತ್ಯನಾರಾಯಣ, ಶ್ರೀ ವಿದ್ಯಾರಣ್ಯ, ಶ್ರೀ ಸಿಂಗರಭಟ್ಟ ಇತ್ಯಾದಿ ಮುನಿ ದೇವ ದೇವತೆಗಳ ದೇವಸ್ಥಾನಗಳಿಂದ ಕೂಡಿದಂತಹ ಈ ಕ್ಷೇತ್ರವು ಕ್ಷೇತ್ರರಾಜವಾಗಿ ಪ್ರಸಿದ್ದಿಹೊಂದಿದೆ. ಯುಗಾನುಯುಗಗಳಿಂದ ಎಷ್ಟೋ ಋಷಿಮುನಿಗಳು ಮತ್ತು ಶ್ರೇಷ್ಠ ಭಾಗವತ ಭಕ್ತರು ಇಲ್ಲಿಗೆ ಬಂದು ಭಕ್ತಿಯಿಂದ ಭಗವಂತನನ್ನು ಆರಾಧಿಸಿ ಜನ್ಮದ ಶ್ರೇಷ್ಠ ಸಾಫಲ್ಯತೆಯನ್ನು ಹೊಂದಿದ್ದಾರೆ ಮತ್ತು ಈಗಲೂ ಸಹಾ ಇಲ್ಲಿಗೆ ಬರುವ ಭಕ್ತಾದಿಗಳು ಅನೇಕವಾದ ಸೂಕ್ಷ್ಮ ತೇಜೋ ರೂಪಗಳಲ್ಲಿ ಇರುವ ಭಗವಂತನ, ಅನೇಕ ದೇವತೆಗಳ ದರ್ಶನವನ್ನು ಸಾಕ್ಷಾತ್ಕಾರವನ್ನು ಪಡೆಯುವ ವಿಷಯದಲ್ಲಿ ಸದಾ ಸಹಾಯವನ್ನು ಮಾಡುತ್ತಾ ಈ ಕ್ಷೇತ್ರವನ್ನು ರಕ್ಷಿಸುತ್ತಿದ್ದಾರೆ.

ಅಧ್ಯಾಯ-1,2 : ಸೂತ ಶೌನಕಾದಿ ಪ್ರಶ್ನೋತ್ತರ ನಿರೂಪಣಂ.,
ಸಪ್ತರ್ಷೀಣಾಂ ಪಂಪಾಕ್ಷೇತ್ರಾಗಮನಂ.

ಪಂಪಾಮಾಹಾತ್ಮ್ಯ – ಪ್ರಶ್ನೋತ್ತರ ಜ್ಞಾನ ಭಂಡಾರ – ಅಧ್ಯಾಯ-1,2

1) ಶ್ರೀ ಕ್ಷೇತ್ರದ ದರ್ಶನಕ್ಕಾಗಿ ಮೊದಲೆನೆದಾಗಿ ಬಂದವರು ಯಾರು ?
ಉ: ಸಪ್ತರ್ಷಿಗಳು.

2) ಸಪ್ತರ್ಷಿಗಳು ಎಲ್ಲಿಂದ ಬಂದರು?
ಉ: ನೈಮಿಷಾರಣ್ಯದಿಂದ.

3) ಶೌನಕಾದಿ ಋಷಿಗಳು ಸೂತನನ್ನು ಏನೆಂದು ಕೇಳಿದರು?
ಉ: ಸೌಖ್ಯವೂ ಮತ್ತು ಮುಕ್ತಿಯನ್ನು ಕೊಡುವಂತಹ ಪಂಪಾಕ್ಷೇತ್ರದ ಮಹಿಮೆಯನ್ನು ಶ್ರೀ ವಿರೂಪಾಕ್ಷಾನ ಲೀಲೆಗಳನ್ನು ವಿವರಿಸುವುದಾಗಿ ಕೇಳಿದರು.

4) ಸಪ್ತರ್ಷಿಗಳು ಶ್ರೀ ವಿರೂಪಾಕ್ಷನ ಅನುಗ್ರಹದಿಂದ ಶ್ರೀ ಕ್ಷೇತ್ರವನ್ನು ನೋಡಿ ಯಾವ ಪದವಿಯನ್ನು ಹೊಂದಿದರು?
ಉ: ನಕ್ಷತ್ರ ಪದವಿಯನ್ನು.

5) ಸಪ್ತರ್ಷಿಗಳು ಈಗಲೂ ಸದಾ ಶಾಶ್ವತವಾಗಿ ಎಲ್ಲಿ ನಿವಾಸ ಮಾಡಿಕೊಡಿದ್ದಾರೆ?
ಉ: ಶ್ರೀ ಪಂಪಾವಿರೂಪಾಕ್ಷ ಕ್ಷೇತ್ರದಲ್ಲಿ

6) ಶೌನಕಾದಿ ಋಷಿಗಳು ಸೂತರನ್ನು ಕೇಳಿದ ಇನ್ನಿತರೆ ಪ್ರಶ್ನೆಗಳಾವುವು?
ಉ:
ಅ) ಸಪ್ತರ್ಷಿಗಳು ಯಾತ್ರಾರ್ಥವಾಗಿ ಯಾಕೆ ಬಂದರು?
ಆ) ಹಾಗೆ ಬಂದಾಗ ಪಂಚಕ್ರೋಶಾತ್ಮಕವಾದ ಪಂಪಾ ಕ್ಷೇತ್ರದಲ್ಲಿ ಎಲ್ಲೆಲ್ಲಿ ಉಳಿದುಕೊಂಡಿದ್ದರು?
ಇ) ಇಲ್ಲಿ ಯಾವ್ಯಾವ ತೀರ್ಥಗಳನ್ನು ನೋಡಿದರು?
ಈ) ಹೇಮಕೂಟ ಪರ್ವತದಲ್ಲಿ ಸಂಚರಿಸಿ ಯಾವ ಪದವಿಯನ್ನು ಹೊಂದಿದರು?

7) ಪಂಪಾ ಮಹಾತ್ಮ್ಯೆ ಪುರಾಣದಲ್ಲಿ ಏನಿದೆ?
ಉ: ಭಗವಂತನಾದ ಶ್ರೀ ಪಂಪಾವಿರೂಪಾಕ್ಷನ ಭವ್ಯ ಚರಿತವೂ, ಶ್ರೀ ಪಂಪಾ ಕ್ಷೇತ್ರದಲ್ಲಿ ಭಕ್ತಿ ಮಾರ್ಗದಿಂದ ಭಗವಂತನನ್ನು ಪಡಿದ ಮಹಾಭಾಗವತರ ದಿವ್ಯ ಚರಿತವು.

8) ಸಪ್ತರ್ಷಿಗಳ ಹೆಸರುಗಳೇನು?
ಉ: ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಶಿಷ್ಠ ಮುನಿಗಳು.

9) ಸಪ್ತರ್ಷಿಗಳು ಯಾರು ಸಹಿತವಾಗಿ ಈಕ್ಷೇತ್ರಕ್ಕೆ ಬಂದಿದ್ದರು?
ಉ: ಸಪ್ತರ್ಷಿಗಳು ಸತೀಸುತಾದಿ ಶಿಷ್ಯ ಪ್ರಶಿಷ್ಯರೊಂದಿಗೆ ಬಂದಿದ್ದರು.

10) ಪಂಪಾಕ್ಷೇತ್ರವು ಕಾಶಿ ಕ್ಷೇತ್ರವೇ ಎಂದು ಹೇಳುವ ಪ್ರಮಾಣ ಶ್ಲೋಕ ಯಾವುದು?
ಉ: ಶ್ಲೋಕ : ವಿರೂಪಾಕ್ಷಸ್ತು ವಿಷೇಶ: ತುಂಗಭದ್ರಾತು ಜಾನ್ಹವೀ |
ಪಂಪಾ ಕಾಶೀ ಸಮಾದಿವ್ಯಾ ಭುಕ್ತಿಮುಕ್ತಿ ಪ್ರದಾಯಿನೀ ||

11) ಶ್ರೀ ಪಂಪಾ ವಿರೂಪಾಕ್ಷ್ಸನನ್ನು ಏನೆಂದು ವರ್ಣಿಸಿದ್ದಾರೆ?
ಉ: ಶ್ರೀ ಪಂಪಾ ವಿರೂಪಾಕ್ಷ ನನ್ನು ಸಾಕ್ಷಾತ್ ಕಾಶೀ ವಿಶ್ವೇಶ್ವರನೆಂದು ವರ್ಣಿಸಿದ್ದಾರೆ.

12) ತುಂಗಭದ್ರಾ ನದಿಯನ್ನು ಏನೆಂದು ವರ್ಣಿಸಿದ್ದಾರೆ?
ಉ: ತುಂಗಭದ್ರಾ ನದಿಯನ್ನು ಜಾಹ್ನವಿ (ಗಂಗಾ) ಎಂದು ವರ್ಣಿಸಿದ್ದಾರೆ.

13) ಸಪ್ತಋಷಿಗಳು ಶ್ರೀ ಹೇಮಕೂಟಕ್ಕೆ ಬಂದ ನಂತರ ಯಾವ ವಿಷಯ ಕುರಿತು ಚಿಂತಿತರಾಗಿದ್ದರು?
ಉ: ಪಂಪಾಪುರವು ಕಾಣಿಸದೇ ಇದ್ದುದರಿಂದ.

14) ಆಗ ಋಷಿಮುನಿಗಳು ಏನು ಮಾಡಿದರು?
ಉ: ಶ್ರೀ ವಿರೂಪಾಕ್ಷನನ್ನು ಪ್ರಾರ್ಥಿಸಿದರು.

15) ಆ ರೀತಿಯಾಗಿ ಪ್ರಾರ್ಥಿಸಿದ ಶ್ಲೋಕ ಯಾವುದು?
ಉ: ವಿಶ್ವೇಶ್ವರ

16) ಪ್ರಾರ್ಥನೆಯ ನಂತರ ಏನಾಯಿತು?
ಉ: ಅವರಿಗೆ ಶ್ರೀ ಪಂಪಾಕ್ಷೇತ್ರದ ದರ್ಶನವಾಯಿತು.

17) ಶ್ರೀ ಪಂಪಾಕ್ಷೇತ್ರದ ದರ್ಶನಾನಂದದಿಂದ ಅವರು ಹೇಳಿದ ಶ್ಲೋಕ ಯಾವುದು?
ಉ: ಶ್ಲೋಕ : ಅಹೋ ಭಾಗ್ಯಂ ಅಹೋ ಭಾಗ್ಯಂ ಪಂಪಾಕ್ಷೇತ್ರಸ್ಯ ವೈಭವಂ | ಪಂಪಾಕಾಶೀತಿ ವಿಖ್ಯಾತಾ ದಕ್ಷಿಣಾಖ್ಯಾ ಅಮೃತಪ್ರದಾ ||

18) ಶ್ರೀ ಪಂಪಾಕ್ಷೇತ್ರವು ಯಾವ ಹೆಸರಿನಿಂದ ಪ್ರಖ್ಯಾತಿಯನ್ನು ಹೊಂದಿದೆ?
ಉ: ಶ್ರೀ ಪಂಪಾಕ್ಷೇತ್ರವು ದಕ್ಷಿಣಕಾಶಿ ಎಂದು ವಿಖ್ಯಾತಿ ಹೊಂದಿದೆ.

19) ಸಪ್ತರ್ಷಿಗಳು ನೋಡಿದ ದಿವ್ಯ ಲಿಂಗ ಯಾವ ರೀತಿಯಾಗಿತ್ತು?
ಉ: ಆಪಾತಾಳವಾಗಿ, ಪಂಚಕ್ರೋಶ ವ್ಯಾಪ್ತಿಯಾಗಿ, ಬ್ರಹ್ಮಾಂಡ ರೂಪವಾಗಿ,

ಅಧ್ಯಾಯ-3 : ಸಪ್ತರ್ಷೀಣಾಂ ಕ್ಷೇತ್ರಪಾಲ ದರ್ಶನಂ.

ಪ್ರಶ್ನೋತ್ತರ ಜ್ಞಾನ ಭಂಡಾರ – ಅಧ್ಯಾಯ-3 – ಸಪ್ತರ್ಷೀಣಾಂ ಕ್ಷೇತ್ರಪಾಲ ದರ್ಶನಂ

1) ಶ್ರೀ ಕ್ಷೇತ್ರದಲ್ಲಿ ಮೊಟ್ಟಮೊದಲನೆಯದಾಗಿ ಯಾವ ತೀರ್ಥವನ್ನು ಕಂಡರು?
ಉ: ಭದ್ರಶಿಲಾ ತೀರ್ಥ

2) ಭದ್ರಶಿಲಾತೀರ್ಥದಲ್ಲಿ ಸ್ನಾನವನ್ನು ಮಾಡಿದನಂತರ ಯಾವ ದೇವರನ್ನು ಶಾಶ್ತ್ರೋಕ್ತ ವಿಧಿಯಿಂದ ಪೂಜಿಸಿದರು?
ಉ: ಶ್ರೀ ನಂದಿಕೇಶ್ವರನನ್ನು ( ನಂದೀಶ್ವರ).

3) ಧರ್ಮಕ್ಕೆ ಪ್ರತಿರೂಪ ದೇವರುಯಾರು?
ಉ: ಶ್ರೀ ನಂದಿಕೇಶ್ವರನನ್ನು ( ನಂದೀಶ್ವರ).

4) ನಂದೀಶ್ವರನನ್ನು ಪ್ರಾರ್ಥಿಸಿದ ನಂತರೆ ಸಪ್ತರ್ಷಿಗಳು ಎಲ್ಲಿಗೆ ಹೋದರು?
ಉ: ಆ ಸಪ್ತರ್ಷಿಗಳು ಪೂರ್ವ ಮೊದಲು ಮಾಡಿ ದಕ್ಷಿಣ ಭಾಗದಿಂದ ಅಘೋರಾರಣ್ಯದಲ್ಲಿ ಪಂಪಾವನದೊಳಗೆ ಪ್ರವೇಶಿದರು.

5) ಪಂಪಾವನದೊಳಗೆ ಪ್ರವೇಶಿಸಿದ ಋಷಿ ಮುನಿಗಳು ಯಾರನ್ನು ದೈನ್ಯದಿಂದ ಪ್ರಾರ್ಥಿಸಿದರು?
ಉ: ಶ್ರೀ ವಿರೂಪಾಕ್ಷನನ್ನು ಪ್ರಾರ್ಥಿಸಿದರು.

6) ಅಲೆದಾಡುತ್ತಿರುವ ಸಪ್ತರ್ಷಿಗಳನ್ನು ಕಂದು ತಕ್ಷಣವೇ ಶೀ ವಿರೂಪಾಕ್ಷನು ಏನು ಮಾಡಿದನು?
ಉ: ತನ್ನ ಮಹಿಮೆಯನ್ನು ಪ್ರಕಟಿಸುವದಕ್ಕೋಸ್ಕರವಾಗಿ ಬಂದ ಮುನಿಗಳಿಗೆ ಕ್ಷೇತ್ರ ದರ್ಶನ ಮಾಡಿಸುವದಕ್ಕಾಗಿ … ಕ್ಷೇತ್ರ ಪಾಲಕ … ನನ್ನು ಪ್ರಕಟಿಸಿದನು.

7) ಶ್ರೀ ವಿರೂಪಾಕ್ಷನಿಂದ ಪ್ರಕಟಗೊಂಡಂಥ ಕ್ಷೇತ್ರ ಪಾಲಕ ನ ಹೆಸರೇನು?
ಉ: ಶ್ರೀ ಕಾಳಭೈರವ.

8) ಸಪ್ತರ್ಷಿಗಳು ಶ್ರೀ ಕ್ಷೇತ್ರಪಾಲಕನನ್ನು ಯಾವ ವಿಧದಿಂದ ಪೂಜಿಸಿದರು?
ಉ: ಅಷ್ಟ ವಿಧಾರ್ಚನೆ , ಶೋಡಶೋಪಚಾರಗಳಿಂದ.

9) ದಕ್ಷಿಣಕ್ಷೇತ್ರರಾಜವೆಂಬ ಹೆಸರು ಯಾವ ಕ್ಷೇತ್ರಕ್ಕೆ ಇದೆ?
ಉ: ಪಂಪಾಕ್ಷೇತ್ರ.

10) ಭೂಮಂಡಲದಲ್ಲಿ ಪ್ರಸಿದ್ದವಾಗಿರುವ ಪರ್ವತದ ಹೆಸರು.
ಉ: ಶ್ರೀ ಹೇಮಕೂಟ ಪರ್ವತ.

11) ಹೇಮಕೂಟಾಧಿಪತಿ ಯಾರು?
ಉ: ಶ್ರೀ ವಿರೂಪಾಕ್ಷ

12) ಕ್ಷೇತ್ರಪಾಲಕನನ್ನು ಕಂಡು ಸಪ್ತರ್ಷಿಗಳು ಏನು ಮಾಡಿದರು?
ಉ: ವಿರೂಪಾಕ್ಷ ವೈಭವವನ್ನೂ ಕ್ಷೇತ್ರಮಹಾತ್ಮ್ಯೆಯನ್ನೂ ತಿಳಿಸಬೇಕೆಂದು ಪ್ರಾರ್ಥಿಸಿದರು.

13) ಸಪ್ತರ್ಷಿಗಳಿಗೆ ಶ್ರೀ ಕ್ಷೇತ್ರ ಮಹಿಮೆಯನ್ನು ಹೇಳುವ ಮುಂಚೆ ಶ್ರೀ ಕ್ಷೇತ್ರಪಾಲನು ಏನು ಮಾಡಿದನು?
ಉ: ನಾನಾ ವಿಧಗುಣಾತ್ಮನಾದ ವಿಚಿತ್ರ ವಚನಗಳಿಂದ ವಿರೂಪಾಕ್ಷನನ್ನು ಸ್ತುತಿಸಿಅನುಜ್ಞೆಯನ್ನು ಪಡೆದು ಸಪ್ತರ್ಷಿಗಳಿಗೆ ಪಂಪಾ ಮಹಾತ್ಮ್ಯೆಯನ್ನು ಭೋದಿಸಲು ಪ್ರಾರಂಭಿಸಿದನು.

ಅಧ್ಯಾಯ-4 : ಬ್ರಹ್ಮಾದೀನಾಂ ಕೈಲಾಸ ಗಮನಂ.

ಪ್ರಶ್ನೋತ್ತರ ಜ್ಞಾನ ಭಂಡಾರ – ಅಧ್ಯಾಯ-4

1) ಪಂಪಾದೇವಿ ಯಾರ ಮಾನಸ ಪುತ್ರಿಕೆ?
ಉ:ಪಂಪಾದೇವಿಯು ಬ್ರಹ್ಮನ ಮಾನಸ ಪುತ್ರಿಕೆ.

2) ಪಂಪಾದೇವಿಯ ತಂದೆ-ತಾಯಿ ಯಾರು?
ಉ:ಬ್ರಹ್ಮದೇವ ಮತ್ತು ಸರಸ್ವತಿಯರು ಪಂಪಾದೇವಿಯ ತಂದೆ-ತಾಯಿ.

3) ಬ್ರಹ್ಮನು ಯಾವ ವಿಷಯವನ್ನು ಕುರಿತು ಚಿಂತಾತುರನಾಗಿದ್ದನು?
ಉ:ಯುಕ್ತವಯಸ್ಕಳಾದ ಶ್ರೀ ಪಂಪಾದೇವಿಯ ಮದುವೆಯ ಬಗ್ಗೆ.

4) ಬ್ರಹ್ಮನು ತನ್ನ ಮಾನಸಿಕ ಪುತ್ರಿಕೆಗೆ ಯಾವ ಹೆಸರನ್ನು ಇಟ್ಟಿದ್ದನು.?
ಉ:ಪಂಪಾ ಎಂದು

5) ಚಿಂತಾಕುಲನಾಗಿದ್ದ ಬ್ರಹ್ಮನ ಬಳಿಗೆ ಯಾರು ಬಂದರು?
ಉ:ಇಂದ್ರಾದಿ ದೇವತೆಗಳು.

6) ಪಂಪಾದೇವಿಯ ಮನಸ್ಸಿನಲ್ಲಿ ಯಾರನ್ನು ವರಿಸಿದ್ದಳು?
ಉ:ಶ್ರೀ ಶಂಕರನನ್ನು.

7) ಪಂಪಾ ಎಂದರೆ ಏನು?
ಉ:ಪಂ ಎಂದರೆ ಅಮೃತ , ಪ ಎಂದರೆ ಸ್ವರ್ಣ , ಆ ಬೇಡಿಕೊಳ್ಳುವದು.

8) ಪಂಪಾ ಶಬ್ದದ ಅರ್ಥವನ್ನು ವಿವರಿಸಿರಿ.
ಉ:ಬೇಡುವವರಿಗೆ ಭುಕ್ತಿ ಮತ್ತು ಮುಕ್ತಿಗಳನ್ನು ಕೊಡುವವಳು.

9) ಬ್ರಹ್ಮದೇವನು ಪಂಪಾದೇವಿಗೆ ಶಿವನನ್ನು ಒಲಿಸಿಕೊಳ್ಳಲು ಯಾವ ಉಪಾಯವನ್ನು ಹೇಳಿದನು?
ಉ:ಭೂಲೋಕದಲ್ಲಿ ಹೇಮಕೂಟದ ಪರ್ವತದಿಂದ ಅರ್ಧ ಕ್ರೋಶ ದೂರದಲ್ಲಿ ಉತ್ತರಕ್ಕೆ ವಿಪ್ರಕೂಟವೆಂಬ ಹೆಸರಿನ ಪರ್ವತದ ಸಮೀಪದಲ್ಲಿ ಹಂಸಕಮಲಯುಕ್ತವಾದ ಸರೋವರದ ಹತ್ತಿರ ತಪಸ್ಸನ್ನು ಮಾಡಲು ತಿಳಿಸಿದನು.

10) ಪಂಪಾದೇವಿಯು ಯಾವ ವಿಧದಿಂದ ತಪಸ್ಸನ್ನು ಆಚರಿಸಿದಳು?
ಉ: ಸರೋವರದಲ್ಲಿ ಸ್ನಾನವನ್ನು ಆಚರಿಸಿ ವಿಧಿವತ್ತಾಗಿ ಮಡಿಬಟ್ಟೆಗಳನ್ನುಟ್ಟು, ಭಸ್ಮರುದ್ರಾಕ್ಷಗಳನ್ನು ಧರಿಸಿಕೊಂಡು, ವಿಜಿತೇಂದ್ರಿಯಳಾಗಿ, ಸಿದ್ಧಾಸನ ಬದ್ಧಳಾಗಿ, ನಾಸಿಕಾಗ್ರದಲ್ಲಿ ದೃಷ್ಟಿಯನ್ನಿರಿಸಿ, ಹೃತ್ಕಮಲದಲ್ಲಿ ಶಂಭುವನ್ನು ಸ್ಥಾಪಿಸಿ, ರೇಚಕ ಪೂರಕ ಕುಂಭಕಗಳಿಂದ ವಾಯುವನ್ನು ಬಂಧಿಸಿ, ದೃಷ್ಟಿ ವಾಯು ಮನ ಶರೀರವನ್ನು ಏಕತ್ರ ಸ್ಥಾಪಿಸಿ, ಕೆಲವು ಕಾಲ ಹಣ್ಣು ಹಂಪಲುಗಳನ್ನೂ ಕೆಲವು ಕಾಲ ಮರದೆಲೆಗಳನ್ನೂ ಮತ್ತೆ ಕೆಲವು ಕಾಲ ವಾಯುವನ್ನೂ ಮತ್ತೆ ಕೆಲವು ಕಾಲ ವಾಯುವನ್ನೂ ಬಂಧಿಸಿ, ಶಿವಧ್ಯಾನೈಕನಿಸ್ಚಲೆಯಾಗಿ, ನೂರಾರು ವರ್ಷಗಳ ಕಾಲ ಉಗ್ರ ತಪಸ್ಸನ್ನಾಚರಿಸಿದಳು.

11) ಅವಳ ತಪಸ್ಸಿನ ಪ್ರಭಾವವನ್ನು ತಿಳಿಸಿರಿ.
ಉ: ಅವಳ ತಪಸ್ಸಿನಿಂದ ಹುಟ್ಟಿದ ಜ್ವಾಲೆಯು ಬ್ರಹ್ಮಸ್ಥಾನದಿಂದ ಹೊರಹೊರಟು ಮೇಲಿನ ಲೋಕಗಳನ್ನೆಲ್ಲಾ ವ್ಯಾಪಿಸಿಕೊಂಡು, ಅವಳ ತಪೆÇೀಜ್ವಾಲೆಯಿಂದ ಸುಡಲ್ಪಟ್ಟ ಇಂದ್ರಾದಿ ದೇವತೆಗಳು ವಿಸ್ಮಯಚಿತ್ತರಾಗಿ ಹಾಹಾಕಾರ ಮಾಡಿದರು.

12) ಪಂಪಾದೇವಿಯ ತಪೆÇೀಪ್ರಭಾವದಿಂದ ವಿಸ್ಮಯರಾದ ದೇವತೆಗಳು ಎಲ್ಲಿಗೆ ಹೋದರು?
ಉ: ಇಂದ್ರಾದಿದಳು ತಮ್ಮ ಗುರುಗಳಾದ ಬೃಹಸ್ಪತಿಯವರನ್ನು ಕಂಡರು.

13) ಇಂದ್ರಾದಿ ದೇವತೆಗಳಿಗೆ ದೇವಗುರುಗಳು ಏನೆಂದು ಅಪ್ಪಣೆಯನ್ನು ಕೊಟ್ಟರು?
ಉ: ಬ್ರಹ್ಮನನ್ನು ಶರಣು ಹೋಗುವದಕ್ಕೆ.

14) ಇಂದ್ರಾದಿ ದೇವತೆಗಳಿಗೆ ಬ್ರಹ್ಮದೇವರು ಯಾವ ಸಲಹೆಯನ್ನು ಕೊಟ್ಟರು?
ಉ: ಅವರಿಗೆ ಪಂಪಾದೇವಿಯ ತಪಃಪ್ರಭಾವವನ್ನು ವಿವರಿಸಿ ಕೈಲಾಸದಲ್ಲಿ ಶಿವನನ್ನು ಶರಣು ಹೋಗಲು ನಿರ್ದೇಶಿಸಿದನು.

ಅಧ್ಯಾಯ-5 : ಪಂಪಾದೇವ್ಯೈ ಈಶ್ವರೇಣ ವರಪ್ರದಾನಂ.

ಪ್ರಶ್ನೋತ್ತರ ಜ್ಞಾನ ಭಂಡಾರ – ಅಧ್ಯಾಯ-5

1) ಬ್ರಹ್ಮಾದಿ ದೇವತೆಗಳು ಕೈಲಾಸಕ್ಕೆ ಹೋಗಿ ಏನು ಮಾಡಿದರು?
ಉ: ಬ್ರಹ್ಮೇಂದ್ರಾದಿ ದೇವತೆಗಳು ಕೈಲಾಸಕ್ಕೆ ಹೋಗಿ ದಿವ್ಯವಾದ ಪಟ್ಟಣವಾದ ಜೀವನ್ಮುಕ್ತಿ ಪ್ರದವಾದ ಭದ್ರವಾದ ಅಷ್ಟದಿಕ್ಕುಗಳಲ್ಲಿ ಮಹಾ ಮಹಾ ಗೋಪುರಗಳಿಂದ ಕೋಟ್ಯಾನುಕೋಟಿ ಅಪ್ರತಿಮ ಮಹಿಮಾ ಸಂಪನ್ನ ರುದ್ರರಿಂದ ರಕ್ಷಿಸಲ್ಪಟ್ಟ ದಿವ್ಯಕಮಲಗಳಿಂದಲೂ ರಾಜಹಂಸಗಳಿಂದಲೂ ಶುಭಜಲದಿಂದಲೂ ಪಕ್ಷಿಗಳಿಂದಲೂ ಭೃಂಗ, ಗಂದರ್ವ, ತರುಲತೆಗಳು, ಯೋಗಸಾಧಕರು, ಪ್ರಮಥಾದಿಗಳು, ಸನಕಾದಿಗಳು, ಮಾರ್ಕಂಡೇಯಾದಿ ಗಣ ಮತ್ತು ಋಷಿ ಸಮೂಹದಿಂದ ಸುಪೂಜಿತನಾಗಿ ಮಹಾದೇವಿ ಸಹಿತ ನಂದೀಶ್ವರನ ಜೊತೆಗಿರುವ ಸಿಂಹಾಸನಾರೂಡನಾದ ಶಂಕರನನ್ನು ನೋಡಿದರು.

2) ಬ್ರಹ್ಮಾದಿ ದೇವತೆಗಳು ಕೈಲಾಸಕ್ಕೆ ಹೋಗಿ ಶಿವನನ್ನು ಏನೆಂದು ಪ್ರಾರ್ಥಿಸಿದರು?
ಉ: ನಿನ್ನನ್ನು ಶರಣು ಹೊಕ್ಕಿರುವ ನಿನ್ನ ಪಾದಪಂಕಜ ಮಗ್ನರಾದ ನಮ್ಮನ್ನು ಕಾಪಾಡು ಎಂದು ಬೇಡಿದರು

3) ಅವರ ಪ್ರಾರ್ಥನೆಗೆ ಓಗೊಟ್ಟು ಶಿವನು ಏನೆಂದು ಹೇಳಿದನು?
ಉ: ಹೇ ಭಕ್ತರೇ ಅಂಜಬೇಡಿ, ಭಕ್ತರ ಬೇಡಿದುದನ್ನು ಅನುಗ್ರಹಿಸುವದಕ್ಕಾಗಿ ಶರೀರವನ್ನು ಧರಿಸುತ್ತೇನೆ, ಭಕ್ತರಿಗೆ ದುಃಖವುಂಟಾದರೆ ನನಗೆ ದುಃಖವಾದಂತೆ.

4) ಶಿವನಿಗಿರುವ ಬಿರುದು ಏನು?
ಉ: ಭಕ್ತಪ್ರಾಣ.

5) ಶಿವನು ಯಾವ ಹೆಸರಿನಿಂದ ಅವತರಿಸುತ್ತೇನೆಂದು ಬ್ರಹ್ಮಾದಿ ದೇವತೆಗಳಿಗೆ ಹೇಳಿದನು?
ಉ: ಶ್ರೀ ವಿರೂಪಾಕ್ಷ.

6) ಶಿವನು ಶ್ರೀ ವಿರೂಪಾಕ್ಷನಾಗಿ ಯಾಕೆ ಅವತಾರವನ್ನು ಎತ್ತಿದನು?
ಉ: ನೂರಾರು ವರ್ಷಗಳಿಂದ ಉಗ್ರ ತಪಸ್ಸನ್ನು ಆಚರಿಸುತ್ತಿರುವ ಬ್ರಹ್ಮನ ಮಗಳಾದ ಶ್ರೀ ಪಂಪಾದೇವಿಯ ಸಲುವಾಗಿ.

7) ಶಿನನು ತಾನು ಅವತಾರವೆತ್ತುವ ಸಲುವಾಗಿ ಸೂಚಿಸಿದ ಸ್ಥಳವ್ಯಾವುದು?
ಉ: ಪಂಚಕ್ರೋಶಾತ್ಮಕವಾದ ಕ್ಷೇತ್ರದಲ್ಲಿರುವ ಹೇಮಕೂಟವೆಂಬ ಮಹಾಗಿರಿ.

8) ಶಿವನು ತನ್ನ ಅವತಾರ ವಿಶೇಷದ ಸಲುವಾಗಿ ಬ್ರಹ್ಮಾದಿ ದೇವತೆಗಳಿಗೆ ಏನೆಂದು ಆಜ್ಜೆ ಮಾಡಿದನು?
ಉ: ಬ್ರಹ್ಮೇಂದ್ರಾದಿಗಳಿಗೆ ನೀವುಗಳೆಲ್ಲರೂ ನನ್ನ ಆರಾಧನೆಗಾಗಿ ನಿಮ್ಮಲ್ಲಿರುವ ವಿಚಿತ್ರ ಕಳೆಗಳಿಂದ ವಿಧವಿಧವಾದ ಸೃಷ್ಟಿಗಳನ್ನು ಆ ಕ್ಷೇತ್ರದಲ್ಲಿ ಮಾಡಬೇಕೆಂದು ಅಪ್ಪಣೆ ಮಾಡಿದನು.

9) ಶಿವನು ಶ್ರೀ ಪಂಪಾದೇವಿಯ ಮುಂದೆ ಪ್ರತ್ಯಕ್ಷನಾದಾಗ ಪಂಪಾದೇವಿಯು ಮಾಡಿದ ಶಿವಸ್ತುತಿ ಶ್ಲೋಕಗಳನ್ನು ಬರೆಯಿರಿ.
ಉ : ಪಂಪಾ ಉವಾಚ : ಪ್ರಸೀದಃ ಗಿರಿಜಾಧೀಶ ಭಕ್ತಾಭೀಷ್ಟ ಫಲಪ್ರದ |
ತ್ವಾಂ ಸ್ತೋತುಂಕಸ್ಸಮತ್ರ್ಥೋಹಿವೇದವಾಚಾಮಗೋಚರಂ ||

ಯೋಷಿನ್ಮೂಡಾಹ ಮಜ್ಞಾತಾಕಥಂಜಾನೇಮಹಸ್ತವ |
ಶಬ್ದಾದಿಭಿರಗಮ್ಯಸ್ತ್ವಂ ಸ್ವಾತ್ಮಾನಂದಪರಿಪ್ಲುತಃ ||

ಬ್ರಹ್ಮವಿಷ್ಣ್ವಾದಿಭಿರ್ದೇವೈರಲಕ್ಷ್ಯಃ ಪರಮೇಶ್ವರಃ |
ಭಕ್ತಾನಾಂ ಮುಕ್ತಿಸಿಧ್ಯರ್ಥಂ ದೃಷ್ಟಸ್ತ್ವಂ ಚರ್ಮಚಕ್ಷುಷಾ ||

ತ್ವತ್ತೋಹಿಜಾತಂ ಜಗದೇತದೀಶ ತ್ವ0iÉ್ಯುೀವಶಂಶಂಭೋವಿಲಯಂಪ್ರಯಾತಿ |
ಭೂಮೌಯಥಾವೃಕ್ಷಲತಾದಯಸ್ತಥಾ ಬ್ರಹ್ಮೇಂದ್ರರುದ್ರಾಸ್ಸಮೂಹಃ ||

ಗಂಗಾದಿ ನದ್ಯೋವರುಣಾಲಯಾದ್ಯಾಃತ್ವಯೀಪ್ರತಿಷ್ಟಾಸ್ತ್ರಿದಿವಾದಿಲೋಕಾಃ |
ತ್ವನ್ಮಾಯಯಾ ಕಲ್ಪಿತ ಮಿಂದು ಮೌಳೇ ತ್ವ0iÉ್ಯುೀವದೃಶ್ಯತ್ವ ಮುಪೈತಿವಿಶ್ವಂ ||

ಭ್ರಾಂತ್ಯಾಜನಃಪಶ್ಯತಿಸರ್ವಮೇತ ಚ್ಚುಕ್ತೌಯಥಾರೌಪ್ಯಮಹಿಂಚರಜ್ಜೌ |
ತೇಜೋಭಿರಾಪೂರ್ಯ ಜಗತ್ಸಮಸ್ತಂ ಪ್ರಕಾಶಮಾನಃ ಕುರುಷೇಪ್ರಕಾಶ ||

ವಿನಾಪ್ರಕಾಶಂ ತವ ದೇವದೇವ ನದೃಷ್ಯ ತೇ ವಿಶ್ವಮಿದಂಕ್ಷಣೇನ |
ಅಜ್ಞಾನ ಮೂಡಾಹಿ ನರೋರ್ವಯಂತಿ ಬಹೂಪಚಾರಾದಿ ಬಹಿಃ ಕ್ರಿಯಾಭಿಃ ||

ತಾಸ್ತಾಗಿರೀಶೋ ಭಜತೀತಿಮಿಥ್ಯಾ ಕುತಸ್ತ್ವಮೂರ್ತೇಸ್ತನುಬೋಗಲಿಪ್ಯಾ |
ಕಿಂಚಿದ್ದಲಂವಾಚುಲುಕೋದಕಂವಾಯತ್ವಂಮಹೇಶಪ್ರತಿಗೃಹ್ಯಧತ್ಸೇ ||

ತ್ರೈಲೋಕ್ಯಲಕ್ಷ್ಮೀಮಪಿತಜ್ಜನೇಭ್ಯಸ್ಸರ್ವಂತವಿದ್ಯಾಕೃತಮೇವಮನ್ಯೇ |
ಕೋಟಿ ಜನ್ಮಾರ್ಜಿತೈಃಪುಣ್ಯೈರ್ಲಭ್ಯತೇತವದರ್ಶನಂ ||

ತ್ವಂ ಪಾಹಿ ಜಗತಾಂ ನಾಥಮಗ್ನಾಂತ್ವತ್ಪಾದಪಂಕಜೇ ||

10) ಶ್ರೀ ಪಂಪಾದೇವಿಯು ಶಿವನನ್ನು ಯಾವ ವರವನ್ನು ಕೇಳಿದಳು?
ಉ: ಪಂಪಾಂಬಿಕೆಯು ಶಿವನನ್ನು ಪತಿಯಾಗಿ ವರಿಸುವದಕ್ಕಾಗಿ ಬೇಡಿಕೊಂಡಳು.

11) ಆಗ ಪರಮೇಶ್ವರನು ಪಂಪಾಂಬಿಕೆಗೆ ಯಾವ ವರವನ್ನು ಕೊಟ್ಟನು?
ಉ: ನಿನ್ನ ಸಲುವಾಗಿ ಶುಭವಾದ ಹೇಮಕೋಟದಲ್ಲಿ ವಿರೂಪಾಕ್ಷನೆಂಬ ಹೆಸರಿನಿಂದ ದೇವತಾಸಮೂಹದೊಂದಿಗೆ ಅವತರಿಸಿ ನಿನ್ನನ್ನು ವರಿಸುವೆನು ಎಂದು ಆಶೀರ್ವದಿಸಿದನು.

12) ವರವನ್ನು ಕೊಡುವಾಗ ಮಹರ್ಷಿಗಳು ತನ್ನನ್ನು ಏನೆಂದು ಕರೆಯುವರೆಂದು ಶಿವನು ಹೇಳಿದನು?
ಉ: ಆಗ ಮಹರ್ಷಿಗಳು ತನ್ನನ್ನು ಪಂಪಾಪತಿ0iÉುಂದು ಕರೆಯುವರೆಂದು ಶಿವನು ಹೇಳಿದನು.

ಅಧ್ಯಾಯ-6 : ಪಂಪಯಾ ಗಂಧರ್ವಾಯ ಶಾಪಪ್ರದಾನಂ.

ಪ್ರಶ್ನೋತ್ತರ ಜ್ಞಾನ ಭಂಡಾರ – ಅಧ್ಯಾಯ-6

1) ಶಿವನ ವರವನ್ನು ಪಡೆದ ನಂತರ ಪಂಪಾಂಬಿಕೆಯು ಏನು ಮಾಡಿದಳು?
ಉ: ನಿತ್ಯವೂ ಹೃದಯವೆಂಬ ಚಿದ್ಗುಹೆಯಲ್ಲಿ ಶಂಭುವನ್ನು ನೆಲೆಗೊಳಿಸಿಕೊಂಡು ತಪೆÇೀನಿಷ್ಟಳಾಗಿ ವಿಪ್ರಕೂಟದಲ್ಲಿ ಶಿವನ ನಿರೀಕ್ಷೆಯಲ್ಲಿದ್ದಳು.

2) ಶಿವನಂತೆ ಛದ್ಮವೇಷವನ್ನು ಧರಿಸಿಕೊಂಡು ಪಂಪಾಂಬಿಕೆಯ ಬಳಿಗೆ ಯಾರು ಬಂದರು?
ಉ: ಖೇಟಕ ಎಂಬ ಗಂಧರ್ವ.

3) ಪಂಪಾಂಬಿಕೆಯ ದಿವ್ಯ ತೇಜಸ್ಸನ್ನು ವರ್ಣಿಸಿರಿ.
ಉ: ಸುಂದರೀಂ ಮೃಗಶಾಬಾಕ್ಷೀಂ ಪೂರ್ಣ ಚಂದ್ರ ನಿಭಾನನಾಂ |
ಶ್ಯಾಮಾಂಸು ಕುಂದರದನಾಮಶೇಷ ಜನಮೋಹಿನೀಂ ||

ಪೀನೋತ್ತುಂಗಸ್ತನಭರಾಂ ಶೋಣಾಧರವಿರಾಜಿತಾಂ |
ಶ್ರೀಕಾರೋಪಮ ಕರ್ಣಾಂತಾಂ ಕಪೆÇೀಲಾದರ್ಶ ಭಾಸುರಾಂ||

ನೀಲವೇಣೀಂಕುಂಕುಮಾಕ್ತಾಂಫಾಲಾವೃತ ಸು ಕುಂತಲಾಂ |
ಸುನಾಸಾಂ ಸುಭಗಾಂ ಸುಭ್ರಾಂ ಸರ್ವಾಭರಣ ಭೂಷಿತಾಂ ||

ಕಂಬುಕಂಠೀಂ ಚಾರುಹಾಸಾಂಮಣಿಕಂಠನೂಪುರಾಂ |
ತನ್ವೀಂ ಮರಾಳ ಗಮನಾಂ ಶ್ರೋಣೀಭಾರಭರಾಲಸಾಂ ||

ದುಕೂಲಪರಿಸಂದೀತಾಂ ವಸ್ತ್ರಾಂತರ್ವ್ಯಂಜಿತಸ್ತನೀಂ |
ರಣನ್ನೂಪುರ ಹಂಸಾದ್ವೈರ್ಭಾಸಿತಾಂಘ್ರಿದ್ವಯಾಂಬುಜಾಂ ||

4) ಪ್ರಪಂಚದಲ್ಲಿ ಯಾವ ವಿಷಯಗಳ ಕುರಿತು ಮನುಷ್ಯನು ಎಚ್ಚರಿಕೆಯಿಂದ ಇರಬೇಕು ಎಂದು ಪಂಪಾಂಬಿಕೆಯು ಖೇಟಕನಿಗೆ ಹೇಳಿದಳು?
ಉ: ಅಗ್ನಿ, ಸೂರ್ಯ, ಹುಲಿ, ಸರ್ಪ, ವಿಷ ಮತ್ತು ಪರಸ್ತ್ರೀ.

5) ಪಂಪಾಂಬಿಕೆಯ ಕ್ರೋಧಕ್ಕೆ ಹೆದರಿ ಗಂಧರ್ವನು ಏನು ಮಾಡಿದನು?
ಉ: ಅಮ್ಮಾ ಅ ಜ್ಞಾನದಿಂದ ದ್ರೋಹವೆಸಗಿದ ನಾನು ನಿನ್ನ ದಾಸನಾಗಿರುವೆ, ಶಿಶುವಿನ ಹಾಗೆ ನನ್ನ ಮೇಲೆ ಕರುಣೆ ತೋರಿ ಕಾಪಾಡು, ಭೋ ನನ್ನ ಹೆತ್ತ ತಾಯಿ0iÉುೀ ಎಂದು ಬೇಡಿಕೊಂಡನು.

5) ದುವ್ರ್ಯಾಮೋಹಿಯಾದಂತಹ ಗಂಧರ್ವನನ್ನು ನೋಡಿ ಪಂಪಾಂಬಿಕೆಯು ಏನೆಂದು ಶಾಪ ಕೊಟ್ಟಳು ?
ಉ: ಎಲೈ ದುರಾತ್ಮನೇ ಪರಸ್ತ್ರೀ ವ್ಯಾಮೋಹದಿಂದ ಮಾಡಿದ ಈ ದೋಷದಿಂದ ರಾಕ್ಷಸ ಯೋನಿಯಲ್ಲಿ ಹುಟ್ಟಿ, ದೇವ, ಬ್ರಾಹ್ಮಣ ಹಿಂಸಕನಾಗಿ ದುರ್ಬುದ್ದಿಯಿಂದ ಕ್ರೂರ ಕಾರ್ಯರತನಾಗಿ, ಘೋರಾರಣ್ಯದಲ್ಲಿ ತಿರುಗುತ್ತಿರು. ಪಿಶಾಚರರೊಂದಿಗೆ ಸಂಚರಿಸುತ್ತಾ ದುಷ್ಟನಾಗಿ ಹಸಿವೆ, ನೀರಡಿಕೆಗಳಿಂದ ನರಳು ಎಂದು ಶಾಪ ಕೊಟ್ಟಳು.

6) ಶಾಪವನ್ನು ಕೇಳಿ ಮೂರ್ಛಿತನಾಗಿ ಮತ್ತೆ ಎದ್ದ ನಂತರ ಗಂಧರ್ವನು ಏನು ಮಾಡಿದನು?
ಉ: ಭೋ ಮಾತೆ0iÉುೀ, ಮುಂದೆ ನನ್ನ ಗತಿ0iÉುೀನು? ಹೇಳು ಹೇ ದೇವಿ0iÉುೀ, ನನ್ನ ಮೇಲೆ ದ0iÉುಯಿರಿಸಿ ವಿಶಾಪವನ್ನು ಕೊಡು ತಾ0iÉುೀ ಎಂದು ಪ್ರಾರ್ಥಿಸಿದನು.

7) ಪಂಪಾಂಬಿಕೆಯು ಕರುಣೆಯನ್ನು ತೋರಿ ಏನೆಂದು ವಿಶಾಪವನ್ನು ಅನುಗ್ರಹಿಸಿದಳು?
ಉ: ಅಪಸ್ಮಾರ, ಮನ್ಮಥ ಮತ್ತು ಶುಕ್ಲ ಎಂಬ ಮೂರು ಜನ್ಮಗಳ ನಂತರ ಶಿವಪದವಿಯನ್ನು ಹೊಂದುವಿ ಎಂದು ಅನುಗ್ರಹಿಸಿದಳು.

8) ಗಂಧರ್ವನ ಪ್ರಥಮ ಜನ್ಮವಾದ ಅಪಸ್ಮಾರ ಜನ್ಮದ ಬಗ್ಗೆ ವಿವರಿಸಿ.
ಉ: 10,000 ವರ್ಷಗಳ ಕಾಲ ಅಪಸ್ಮಾರ ನೆಂಬ ಹೆಸರಿನಿಂದ ಅಸುರೀತನುವನ್ನು ಧರಿಸಿ , ದುಃಖವನ್ನು ಅನುಭವಿಸುತ್ತಾ ಭೋಲೋಕದಲ್ಲಿ ತಿರುಗಾಡುತ್ತಾ ಯಾರ ವೇಷದಿಂದ ಪಂಪಾಂಬಿಕೆಯನ್ನು ಮೋಹಿಸಿದೆನೋ ಆ ಶಂಕರನ ದಕ್ಷಿಣಾಮೂರ್ತಿ ಅವತರ ದಿಂದ ಸಂಹರಿಸಲ್ಪಟ್ಟು, ಅಸುರೀ ದೇಹವನ್ನು ಬಿಟ್ಟನು.

9) ಗಂಧರ್ವನ ದ್ವಿತೀಯ ಜನ್ಮವಾದ ಮನ್ಮಥ ಜನ್ಮದ ಬಗ್ಗೆ ವಿವರಿಸಿ.
ಉ: ಗಂಧರ್ವನು ಎರಡನೇ ಜನ್ಮದಲ್ಲಿ ವಿಷ್ಣುವಿಗೆ ಮಗನಾಗಿ ಜನಿಸಿ, ಹೇಮಕೂಟದಲ್ಲಿ ಶಿವನೇತ್ರಾಗಿಯಿಂದ ದಗ್ಧನಾಗಿ ಭಸ್ಮವಾದನು.

10) ಗಂಧರ್ವನ ತೃತೀಯ ಜನ್ಮವಾದ ಶುಕ್ಲ ಜನ್ಮದ ಬಗ್ಗೆ ವಿವರಿಸಿ.
ಉ: ಗಂಧರ್ವನು ಮೂರನೇ ಜನ್ಮದಲ್ಲಿ ಕ್ರೂರನಾದ ಶುಕ್ಲನೆಂಬ ಹೆಸರಿನಿಂದ ಹುಟ್ಟಿ, ಹೇಮಕೂಟ ಮಹಾಗಿರಿಯಲ್ಲಿ ಮಹಾದೇವನು ಲೀಲೆಗಳನ್ನು ತೋರಿಸುವ ಸಮಯದಲ್ಲಿ ಶಿವನಿಂದ ಸುಡಲ್ಪಟ್ಟಿ ನಂತರ ಶ್ರೇಷ್ಟ ಪದವಿಯನ್ನು ಹೊಂದಿದನು.

ಅಧ್ಯಾಯ-7 : ಶ್ರೀ ಪಂಪಾ ವಿರೂಪಾಕ್ಷೇಶ್ವರಯೋರ್ವಿವಾಹಂ.

ಪ್ರಶ್ನೋತ್ತರ ಜ್ಞಾನ ಭಂಡಾರ – ಅಧ್ಯಾಯ-7

1) ವಿಪ್ರಕೂಟ ಪರ್ವತದಲ್ಲಿ ಎಲ್ಲಿ ಪಂಪಾದೇವಿಯು ಶ್ರೀ ವಿರೂಪಾಕ್ಷನಿಗಾಗಿ ತಪಸ್ಸನ್ನು ಆಚರಿಸಿದಳು?
ಉ: ಮೊದಲಿಗೆ ವಿಪ್ರಕೂಟದ ಹತ್ತಿರದಲ್ಲಿರುವ ಸರೋವರದ ದಕ್ಷಿಣ ತಟದಲ್ಲಿ ತಪಸ್ಸು ಮಾಡಿದಳು. ಅಲ್ಲಿ ವಿಘ್ನಗಳುಂಟಾದ ಕಾರಣದಿಂದ ಆ ಸರೋವರದ ಉತ್ತರ ತೀರದಲ್ಲಿದ್ದ ಪಾಪನಾಶಕವಾದ ಸರೋವರದಲ್ಲಿ ಸ್ನಾನ ಮಾಡಿ ಮನಶ್ಯುದ್ದಿಯನ್ನು ಹೊಂದಿ ಅಲ್ಲಿದ್ದ ಒಂದು ಗುಟ್ಟಾದ ಗುಹೆಯಲ್ಲಿ ತಪಸ್ಸನ್ನು ಆಚರಿಸಿದಳು. ಈ ಸರೋವರಕ್ಕೆ ಮಾನಸ ಸರೋವರವೆಂದು ಹೆಸರಾಯಿತು.

2) ಶ್ರೀ ವಿರೂಪಾಕ್ಷನ ಸಾಕ್ಷಾತ್ಕಾರಕ್ಕಾಗಿ ಪಂಪಾದೇವಿಯು ಯಾವ ರೀತಿಯಾಗಿ ತಪಸ್ಸನ್ನು ಆಚರಿಸಿದಳು?
ಉ: 1) ತ್ರಿಕಾಲ ಪೂಜೆ 2) ಸಿದ್ಧ, ಸ್ವಸ್ತಿಕ, ಗೋಪದ್ಮಾದಿ ಶ್ರೇಷ್ಟಾಸನಗಳಿಂದ. 3) ಅಂಗನ್ಯಾಸ , ಕರನ್ಯಾಸಗಳಿಂದ 4) ಪಂಚಮುದ್ರೆಗಳಿಂದ 5) ತಿರ್ಯಕ್ ತ್ರಿಪುಂಡ್ರ ಭಸ್ಮ ಧಾರಣದಿಂದ 6) ಆಗಮೋಕ್ತಗಳಿಂದ 7) ಮೌನವನ್ನಾಚರಿಸುತ್ತ ಮನೋವಾಕ್ಕಾಯಗಳು ದೋಷಗಳಲ್ಲಿ ಸಿಲುಕದಂತೆ 8) ನಿರ್ಗುಣಾಷ್ಟಾಂಗ ಯೋಗದಿಂದ ಶ್ರೀ ವಿರೂಪಾಕ್ಷನನ್ನು ಆರಾಧಿಸಿದಳು.

3.1) ಶ್ರೀ ವಿರೂಪಾಕ್ಷನ ಸಾಕ್ಷಾತ್ಕಾರಕ್ಕಾಗಿ ಪಂಪಾದೇವಿಯು ಯಾವ ವಿಧಾನವನ್ನು ಅನುಸರಿಸಿದಳು?
ಉ: ಅ) ಸುಚಿತ್ತವೆಂಬ ಹಸ್ತದಿಂದ ಗಂಧ ಸಂಬಂಧವಾದ ವಿಷಯಗಳನ್ನು ಕ್ರಿಯಾಶಕ್ತಿಯೊಡಗೂಡಿ ಆಧಾರ ಚಕ್ರದಲ್ಲಿರುವ ಆಚಾರ ಲಿಂಗಕ್ಕೆ ಸದ್ಭಕ್ತಿಯಿಂದ ಸಮರ್ಪಿಸಿ

ಆ)ಸುಬುದ್ದಿ ಎಂಂಬ ಹಸ್ತದಿಂದ ರಸ ರೂಪವಾದ ವಿಷಯಗಳನ್ನು ಜ್ಜಾನ ಶಕ್ತಿಯೊಡಗೂಡಿ ಸ್ವಾಧಿಷ್ಟಾನ ಚಕ್ರದಲ್ಲಿರುವ ಗುರು ಲಿಂಗಕ್ಕೆ ನೈಷ್ಟಿಕಾ ಭಕ್ತಿಯಿಂದ ಸಮರ್ಪಿಸಿ

3) ನಿರಹಂಕಾರ ಎಂಬ ಹಸ್ತದಿಂದ ರೂಪ ಸಂಬಂಧವಾದ ವಿಷಯಗಳನ್ನು ಇಚ್ಚಾ ಶಕ್ತಿಯೊಡಗೂಡಿ ಮಣಿಪೂರ ಚಕ್ರದಲ್ಲಿರುವ ಶಿವ ಲಿಂಗಕ್ಕೆ ಅವಧಾನ ಭಕ್ತಿಯಿಂದ ಸಮರ್ಪಿಸಿ

4) ಸುಮನ ಎಂಬ ಹಸ್ತದಿಂದ ಸ್ಪರ್ಷ ಸಂಬಂಧವಾದ ವಿಷಯಗಳನ್ನು ಆದಿ ಶಕ್ತಿಯೊಡಗೂಡಿ ಅನಾಹತ ಚಕ್ರದಲ್ಲಿರುವ ಜಂಗಮ ಲಿಂಗಕ್ಕೆ ಅನುಭಾವ ಭಕ್ತಿಯಿಂದ ಸಮರ್ಪಿಸಿ

5) ಸುಜ್ಜಾನ ಎಂಬ ಹಸ್ತದಿಂದ ಶಬ್ದ ಸಂಬಂಧವಾದ ವಿಷಯಗಳನ್ನು ಪರಾ ಪರಾ ಶಕ್ತಿಯೊಡಗೂಡಿ ವಿಶುದ್ಧ ಚಕ್ರದಲ್ಲಿರುವ ಪ್ರಸಾದ ಲಿಂಗಕ್ಕೆ ಆನಂದ ಭಕ್ತಿಯಿಂದ ಸಮರ್ಪಿಸಿ

6) ಸದ್ಭಾವನ ಎಂಬ ಹಸ್ತದಿಂದ ತೃಪ್ತಿ ಸಂಬಂಧವಾದ ವಿಷಯಗಳನ್ನು ಚಿತ್ ಶಕ್ತಿಯೊಡಗೂಡಿ ಆಜ್ಜಾ ಚಕ್ರದಲ್ಲಿರುವ ಮಹಾ ಲಿಂಗಕ್ಕೆ ಸಮರಸ ಭಕ್ತಿಯಿಂದ ಸಮರ್ಪಿಸುತ್ತಿದ್ದಳು.

ಈ ರೀತಿಯಾಗಿ ಆರು ಭೂತಗಳೂ ಆರು ಚಕ್ರಗಳೂ ಆರು ಲಿಂಗಗಳೂ ಆರು ಅಂಗಗಳೂ ಆರು ಮುಖಗಳೂ ಆರು ಕರಗಳೂ ಆರು ಶಕ್ತಿಗಳನ್ನು ಆರು ಭಕ್ತಿಗಳನ್ನೂ ಆರು ದೈವಗಳನ್ನೂ ಆರು ಪ್ರಸಾದ ಗಳನ್ನೂ ಆರು ಮಂತ್ರಗಳನ್ನೂ ಆರು ಕಳೆಗಳನ್ನೂ ಅರಿತು ಆಚರಿಸುತ್ತಾ ಷಡ್ಲಿಂಗ ಪೂಜೆಯ ಆನಂದದಲ್ಲಿ ಸಮಾಧಿಯನ್ನು ಹೊಂದುತ್ತಿದ್ದಳು.

3.2) ಶ್ರೀ ಪಂಪಾಂಬಿಕೆಯು ಸಮಾಧಿ ಸ್ಥಿತಿಯಲ್ಲಿದ್ದಾಗ ಮಾಡಿದ ಈಶ್ವರ ಆರಾಧನೆ ಸ್ವರೂಪವನ್ನು ವರ್ಣಿಸಿರಿ.
ಉ:
ಶ್ಲೋಕ :
ಸಮಾಧೌಸಾದದರ್ಶಾದ್ಯಂ ಪುರಾಣ ಪುರುಷಂಶಿವಂ |
ಅನೇಕ ವಕ್ತ್ರನಯನ ಮನೇಕಾದ್ಭುತ ದರ್ಶನಂ ||

ಪಾತಾಲಾರ್ದೀ ಸಪ್ತಲೋಕಾರ್ಧಾರಯಂತಂ ಸ್ವಪಾದಕಃ |
ಭೂಮುಖಾನುದರೇಕಕ್ಷ ಕಂಠಾದೌ ಸುವಿರಾಟ್ತನುಂ ||

ಜಗದಾಕಾರಮವ್ಯಕ್ತಮಣುಂಬೃಹದುಪಕ್ರಮಂ |
ತದ್ಭ್ರಹ್ಮಪ್ರಾಪ್ಯಹರ್ಷೇಣ ಸ್ತೋತುಂಸಮುಪಚಕ್ರಮೇ ||

4) ಶ್ರೀ ಪಂಪಾಂಬಿಕೆಯು ಸಮಾಧಿ ಸ್ಥಿತಿಯಲ್ಲಿದ್ದಾಗ ಶ್ರೀ ವಿರೂಪಾಕ್ಷ ನನ್ನು ಕುರಿತ ಮಾಡಿದ ಸ್ತೋತ್ರವೇನು?
ಉ: ಶ್ಲೋಕ : ಜಯದೇವನಮಸ್ತುಭ್ಯಂ ಜಯಸರ್ವೇಶ್ವರ ಪ್ರಭೋ |
ಜಯಾನಂದಘನಸ್ತಾಮ ಜಯಮೃತ್ಯುಂಜಯಪ್ರಿಯ ||

ಜಯ-ನಿರ್ವಾಣ ಸುಖದ ಜಯಶಂಕರ ಕೇವಲ |
ಜಯ ಯೋಗೀಶ್ವರಾನಂತ ಜಯ ಶಂಬೋಭವಚ್ಯುತ ||

ನಮೋಸ್ತುನಿರ್ಮಲಾಯಾದ್ಯ ಕಾಲಾಂತಕ ಹರಯಚ |
ನಿರಾಮಯಾಯ ನಿರ್ಮೋಹಕರಾಯವಿದುಷೇನಮಃ ||

5) ಪಂಪಾದೇವಿಯ ತಪವನ್ನು ಮೆಚ್ಚಿ ಶಂಭುವು ಏನು ಮಾಡಿದನು?
ಉ: ಪೂರ್ವಕಾಲದಲ್ಲಿ ಶಂಭುವು ಶ್ರೀ ಪಂಪಾದೇವಿಗೆ ಕೊಟ್ಟ ವಚನವನ್ನು ಸ್ಮರಿಸಿಕೊಂಡು ದೇವತಾ ಸಮೂಹದಿಂದೊಡಗೂಡಿ ಹೇವಕೂಟದಲ್ಲಿ ಪ್ರತ್ಯಕ್ಷನಾದನು.

6) ಶ್ರೀ ವಿರೂಪಾಕ್ಷನು ಹೇಮಕೂಟದಲ್ಲಿ ಪ್ರತ್ಯಕ್ಷನಾದ ನಂತರ ಬ್ರಹ್ಮಾದಿ ದೇವತೆಗಳು ಏನು ಮಾಡಿದರು?
ಉ: ಬ್ರಹ್ಮ, ಸರಸ್ವತಿ ಮುಂತಾದ ದೇವತೆಗಳೆಲ್ಲರೂ ವಿಪ್ರಕೂಟದಲ್ಲಿ ತಪಸ್ಸನ್ನು ಆಚರಿಸುತ್ತಿದ್ದ ಪಂಪಾಂಬಿಕೆಯನ್ನು ವಿರೂಪಾಕ್ಷನ ಜೊತೆ ವಿವಾಹಕ್ಕಾಗಿ ಕರೆ ತಂದರು.

7) ಪಂಪಾಂಬಿಕೆಯ ಕನ್ಯಾದಾನವನ್ನು ಮಾಡಿದ ಬಗೆಯನ್ನು ವಿವರಿಸಿರಿ.
ಉ: ಬ್ರಹ್ಮ, ಸರಸ್ವತಿಯರು ಫಲತಾಂಬೂಲಾದಿಗಳಿಂದ ಯುಕ್ತರಾಗಿ, ಶುಭ ಅಕ್ಷತೆ , ವೇದ ಮಂತ್ರಗಳನ್ನು ಘೋಷಿಸುತ್ತಾ ವಿಧಿ ಪೂರ್ವಕವಾಗಿ ಮೂರು ಸಲ ಗೋತ್ರ ಪ್ರವರಗಳನ್ನು ಉಚ್ಚ್ರರಿಸುತ್ತಾ ( ಬ್ರಹ್ಮ ಸರಸ್ವತಿಯರು ಒಂದು ಕಡೆ ನಿಂತು … ವಿಷ್ಣುವಿನ ಮೊಮ್ಮಗಳೂ ಬ್ರಹ್ಮನ ಮಗಳೂ ಸತ್ಯ ಗೋತ್ರೋಭವಳೂ ಪಂಪಾ ಕನ್ಯೆ0iÉುಂಬ ಹೆಸರಿನ ಕನ್ಯೆಯನ್ನು, ಸದಾಶಿವನ ಮೊಮ್ಮಗನೂ ಮಹೇಶ್ವರನ ಮಗನೂ ಹೇಮಕೋಟಸ್ಥನೂ ಸದ್ಯೋಜಾತ ಗೋತ್ರದವನೂ ಆದ ವಿರೂಪಾಕ್ಷನಿಗೆ ಕೊಡುತ್ತೇ…ವೆ ಎಂದು ಘೋಷಿಸಿದರು) ಆಗ ಕೂಡಲೇ ಶ್ರೀ ಶಂಕರನು ಪಂಪಾದೇವಿಯ ಕೊರಳಿಗೆ ಮಂಗಲಸೂತ್ರವನ್ನು ಕಟ್ಟಿದನು.

8) ವಿವಾಹಾನಂತರ ಒಂದು ದಿನ ಶ್ರೀ ಪಂಪಾಂಬಿಕೆಯು ಶ್ರೀ ವಿರೂಪಾಕ್ಷನನ್ನು ಯಾವ ವರಗಳನ್ನು ಬೇಡಿದಳು?
ಉ: ಈ ಕ್ಷೇತ್ರದಲ್ಲಿ ನಾನು ಉಗ್ರ ತಪಸ್ಸನ್ನಾಚರಿಸುವದ್ದರಿಂದ ಈ ಕ್ಷೇತ್ರಕ್ಕೆ (ಪಂಪಾ) ನನ್ನ ಹೆಸರಿನ್ನಿಡಬೇಕೆಂದು ಬೇಡಿದಳು.

9) ಶ್ರೀ ವಿರೂಪಾಕ್ಷನು ಶ್ರೀ ಪಂಪಾದೇವಿಗೆ ಏನೆಂದು ವರವನ್ನಿತ್ತನು?
ಉ: ಈ ಕ್ಷೇತ್ರಕ್ಕೆ ‘ಪಂಪಾ ಕ್ಷೇತ್ರ’ ವೆಂದು ಮತ್ತು ಅವಳು ಉಗ್ರ ತಪಸ್ಸಾನ್ನಾಚರಿಸಿದ ಸರೋವರಕ್ಕೆ ‘ಪಂಪಾ ಸರೋವರ’ ವೆಂದು ಖ್ಯಾತಿಯಾಗಲೆಂದು ವರವನ್ನಿತ್ತನು.

10) ಪಂಪಾ ಪಂಚಕಗಳಾವುವು?
ಉ: 1) ಪಂಪಾದೇವಿ 2) ಪಂಪಾಪತಿ 3) ಪಂಪಾ ಕ್ಷೇತ್ರ 4) ಪಂಪಾ ಸರೋವರ 5) ಪಂಪಾ ಪುರ

11) ಈ ಪಂಪಾ ಕ್ಷೇತ್ರದಲ್ಲಿ ಯಾರು ಯಾರು (ದೇವತೆಗಳು) ಯಾವ ಯಾವ ರೂಪದಲ್ಲಿ ನೆಲೆಸಿದ್ದಾರೆ?
ಉ: ಈ ಪಂಪಾ ಕ್ಷೇತ್ರದಲ್ಲಿ ಸದಾ ನಿರ್ಮಲರಾಗಿ ಸಕಲ ದೇವತೆಗಳು ನೆಲೆಸಿದ್ದಾರೆ.

ಯಕ್ಷರು ನಾಗವೃಕ್ಷ ರೂಪ ದಿಂದಲೂ, ಕಿನ್ನರರು ಕೋಗಿಲೆ ಇತ್ಯಾದಿ ಪಕ್ಷಿ ರೂಪಗಳಿಂದಲೂ,

ಗಂಧರ್ವರು ಮೃಗ ರೂಪದಿಂದಲೂ, ಬ್ರಹ್ಮಾದಿಗಳು ತೀರ್ಥ ರೂಪದಿಂದಲೂ,

ಸಿದ್ದರು ಕಲ್ಲುಗಳ ರೂಪದಿಂದಲೂ, ಕಾಮಧೇನುಗಳು ಗಿಡರೂಪದಿಂದಲೂ,

ಋಷಿಗಳು ಕಪಿಗಳ ರೂಪದಿಂದಲೂ, ಮತ್ತು ಹುಲ್ಲು ಗುಲ್ಮ ಲತಾದಿ ಗಳ ರೂಪದಿಂದಲೂ

ಪ್ರಮಥರು ಜಲಚರ ರೂಪದಿಂದಲೂ ದಕ್ಷಿಣ ಕಾಶೀ ಗೆ ಸಮಾನವಾದ ಈ ಪಂಪಾ ಕ್ಷೇತ್ರದಲ್ಲಿ ಸದಾ ನೆಲೆಸಿರುವರು.

12) ಪಂಪಾ ಶಬ್ದದ ಅರ್ಥವನ್ನು ತಿಳಿಸಿರಿ.
ಉ: ಪಂ ಎಂದರೆ ಅಮೃತವು, ಪ ಎಂದರೆ ಸ್ವರ್ಣ (ಬಂಗಾರ) ಆ ಎಂದರೆ ದೀನ. ಬೇಡುವಾತನಿಗೆ ಅಮೃತ ರೂಪವಾದ ಮೋಕ್ಷವೂ ಸ್ವರ್ಣ ರೂಪವಾದ ಸಂಪದ್ಭೋಗಗಳೂ ಕೊಟ್ಟು ರಕ್ಷಿಸುವಂತಹದ್ದಾಗಿದೆ.

13) ಈ ಪಂಪಾ ಕ್ಷೇತ್ರದಲ್ಲಿ ಮುಮುಕ್ಷು ಗಳ ಕರ್ತವ್ಯವೇನು?
ಉ: ಶ್ರೀ ಕ್ಷೇತ್ರ ಸೇವನೆ ಮತ್ತು ಕ್ಷೇತ್ರ ರಕ್ಷಣೆ.

14) ಈ ಪಂಪಾ ಕ್ಷೇತ್ರದಲ್ಲಿ ಒಂದು ದಿವಸ ವಾಸ ಮಾಡುವದರ ಫಲವೇನು?
ಉ: ಕ್ಷೇತ್ರ ದರ್ಶನವನ್ನು ಪಡೆದು ಮಕ್ಕಳಿಲ್ಲದವರಿಗೆ ಸಂತಾನವನ್ನೂ ಮುಂತಾದ ಭುಕ್ತಿ, ಮುಕ್ತಿಗಳನ್ನು ಕೊಡುವದಾಗಿರುವ ಈ ಪಂಪಾ ಕ್ಷೇತ್ರದಲ್ಲಿ ಯಾರು ವಿವಾಹ ಕಾರ್ಯಗಳನ್ನು ಮಾಡಿಸಿ, ಸತ್ಕಥೆಗಳನ್ನು ಹೇಳಿಸುತ್ತಾರೋ ಅವರು ಮುಕ್ತಿಯನ್ನು ಪಡೆಯುತ್ತಾರೆ ಮತ್ತು ವೇದಗಳಿಗೆ ಪ್ರಮಾಣವೂ ಸಕಲ ನಿಗಮಾಗಮ ಸಾರವೂ ತ್ರಿಭುವನ ಭೋಗಗಳನ್ನು ಕರುಣಿಸುವ ಕ್ಷೇತ್ರರಾಜವೆನಿಸಿದ ಈ ಪಂಪಾ ಕ್ಷೇತ್ರದಲ್ಲಿ ಯಾವನು ಒಂದು ದಿನ ವಾಸ ಮಾಡುತ್ತಾನೋ ಅವನು ಶಂಕರ ಕೃಪೆಯಿಂದ ಸರ್ವ ಪಾಪ ರಹಿತನಾಗಿ ಶಿವನಿಂದ ರಕ್ಷಿಸಲ್ಪಟ್ಟವನಾಗಿ ಶಿವ ಸಾಯುಜ್ಯವನ್ನು ಹೊಂದುತ್ತಾನೆ. ಇದು ಸತ್ಯ ಇದು ಸತ್ಯ.

ಅಧ್ಯಾಯ-8 : ಹರ ಮಿತ್ರೋಪಾಖ್ಯಾನಂ, ತಸ್ಯ ವಿರೂಪಾಕ್ಷಾದ್ವರ ಪ್ರಾಪ್ರಿಃ.

ಪ್ರಶ್ನೋತ್ತರ ಜ್ಞಾನ ಭಂಡಾರ – ಅಧ್ಯಾಯ-8

1) ಶ್ರೀ ಪಂಪಾ ವಿರೂಪಾಕ್ಷ ವಿವಾಹ ಮಹೋತ್ಸವದ ಕಥೆಯ ನಂತರ ಸಪ್ತರ್ಷಿಗಳು ಯಾವ ಪ್ರಶ್ನೆಯನ್ನು ಕ್ಷೇತ್ರಪಾಲನಿಗೆ ಕೇಳಿದರು?
ಉ: ಬ್ರಹ್ಮ ಮಾನಸ ಪುತ್ರಿಯಾದ ಪಂಪಾದೇವಿಯು ಪೂರ್ವಜನ್ಮದಲ್ಲಿ ಯಾರಾಗಿದ್ದಳು? ಏಕೆ ಮಗಳಾಗಿ ಹುಟ್ಟಿದಳು? ಇದನ್ನು ಸವಿಸ್ತಾರವಾಗಿ ಹೇಳಲು ಕ್ಷೇತ್ರಪಾಲನನ್ನು ಮರು ಪ್ರಶ್ನೆ ಮಾಡಿದರು.

2) ಪ್ರಳಯ ಕಾಲದಲ್ಲಿ ಮಹಾವಿಷ್ಣುವು ಯಾವ ಮರದ ಎಲೆಯನ್ನು ಹಾಸಿಗೆಯನ್ನಾಗಿ ಮಾಡಿಕೊಂಡಿದ್ದನು?
ಉ: ಜಲಸಾಗರದ ಮೇಲೆ ಆಲದ ಎಲೆಯನ್ನೆ ಹಾಸಿಗೆಯನ್ನಾಗಿ ಮಾಡಿಕೊಂಡು ಅದರ ಮೇಲೆ ಯೋಗನಿದ್ರೆಯಲ್ಲಿರುವನು.

3) ಯೋಗನಿದ್ರೆಯಲ್ಲಿದ್ದಂತಹ ವಿಷ್ಣುವಿನ ಯಾವ ಶರೀರ ಭಾಗಗಳಿಂದ ಯಾರು ಹುಟ್ಟಿದರು?
ಉ: ಅವನ ಕಿವಿಗಳ ಮಲದಿಂದ ಮಧು ಕೈಟಭರೆಂಬ ರಾಕ್ಷಸರು ಹುಟ್ಟಿದರು.

4) ಮಧು ಕೈಟಭರು ಯಾರನ್ನು ಕೊಲ್ಲಲು ಬೆನ್ನು ಹತ್ತಿದರು?
ಉ: ಬ್ರಹ್ಮನನ್ನು ಕೊಲ್ಲಲು ಬೆನ್ನು ಹತ್ತಿದರು.

5) ಬ್ರಹ್ಮ ತನ್ನ ಪ್ರಾಣ ರಕ್ಷಣೆಗಾಗಿ ಯಾರನ್ನು ಆಶ್ರಯಿಸಿದನು?
ಉ: ಯೋಗನಿದ್ರೆ0iÉುಂಬ ಬಿರುದುಳ್ಳ ಪರಾಶಕ್ತಿಯನ್ನು ಶರಣು ಹೊಕ್ಕನು.

6) ಪರಾಶಕ್ತಿಯನ್ನು ಬ್ರಹ್ಮನು ಏನನ್ನು ಕೇಳಿದನು?
ಉ: ಯೋಗನಿದ್ರೆಯೊಳಗಿರುವ ವಿಷ್ಣುವನ್ನು ಮಧು ಕೈಟಭರ ಸಂಹಾರಕ್ಕಾಗಿ ಬೇಗನೆ ಎಚ್ಚರಿಸಬೇಕೆಂದು ಕೇಳಿದನು?

7) ಸ್ವಾಹಾ ಸ್ವಧಾ ವಷಟ್ಕಾರ ಸ್ಮರಾತ್ಮಿಕೆಗಳು ಯಾರು?
ಉ: ಶಿವೆ ಮಾ0iÉುಯು.

8) ಪರಾಶಕ್ತಿಗೆ ಬ್ರಹ್ಮನು ಕೇಳಿಕೊಂಡ ಮತ್ತೊಂದು ವರವೇನು?
ಉ: ವರಾರ್ಥಿಯಾದ ನನಗೆ ನೀನು ಮಗಳಾಗಿ ಜನಿಸಿ ನನ್ನನ್ನು ಪಾವನಗೊಳಿಸಬೇಕೆಂದು ವರ ಕೇಳಿದನು.

9) ದೇವಿಯು ಬ್ರಹ್ಮನಿಗೆ ವರವನ್ನು ಕೊಟ್ಟು ಏನನ್ನು ಹೇಳಿದಳು?
ಉ: ಭೋ ಶತಾನಂದನೇ, ಚತುರಾನನೇ, ಚಾಕ್ಷುಷ ಮನ್ವಂತರ ಆರಂಭವಾದಾಗ ವಿರೂಪಾಕ್ಷನು ಅವತರಿಸುವನು ಆಗ ನಿನ್ನ ಚಿದ್ಗರ್ಭದಲ್ಲಿ ಹುಟ್ಟುವೆನು. ಎಂದು ವರವನ್ನಿತ್ತು ಮಾಯವಾದಳು.

10) ವಿಷ್ಣು ಯೋಗನಿದ್ರೆಯಿಂದೆದ್ದು ಏನು ಮಾಡಿದನು?
ಉ: ಮಧು ಕೈಟಭರನ್ನು ಸಂಹಾರ ಮಾಡಿದನು.

11) ಪಂಪಾಕ್ಷೇತ್ರದಲ್ಲಿರುವ ಪಣ್ಯತಮವಾದ ಕೆಲ ಪರ್ವತಗಳ ಹೆಸರನ್ನು ತಿಳಿಸಿರಿ.
ಉ: ಶ್ಲೋ: ಕ್ಷೇತ್ರೇಸ್ಮಿನ್ ಸಂಪ್ರಕಾಶಂತೇನಗಾಃ ಪುಣ್ಯತಮಾ ಶ್ಯುಭಾಃ !
ಮತಂಗೋಮಾಲ್ಯವಾಂಶ್ಚೈವ ಋಷ್ಯಮೂಕಾಭಿಧೋಗಿರಿಃ !!
ಕಿಷ್ಕಿಂಧಾದ್ರಿರ್ಹೇಮಕೂಟಃ ಪಂಚೈತೇ ಪುಣ್ಯ ಗೋಚರಾಃ!

ಮತಂಗ ಗಿರಿ, ಮಾಲ್ಯವಂತ ಗಿರಿ, ಋಷ್ಯಮೂಕ ಪರ್ವತ, ಕಿಷ್ಕಿಂಧಾದ್ರಿ, ಹೇಮಕೂಟ, ವಿಪ್ರಕೂಟ, ಗಂಧರ್ವಗಿರಿ, ಜಂಬೂನಾಥ ಗಿರಿ, ಸೋಮ ಪರ್ವತ, ಮಾಣಿಭದ್ರೇಶ್ವರ ಪರ್ವತ ಇತ್ಯಾದಿ.

12) ಪಂಪಾ ಪುರವು ಎಷ್ಟು ಕ್ರೋಶಗಳಿಂದ ಆವೃತವಾಗಿದೆ?
ಉ: ಪಂಚಕ್ರೋಶ ಗಳಿಂದ (ಸುಮಾರು ನೂರು ಚದರ ಮೈಲು).

13) ಪಂಪಾ ಕ್ಷೇತ್ರವು ಎಷ್ಟು ದ್ವಾರ, ಉಪದ್ವಾರಗಳಿಂದ ಶೋಭಾಯಮಾನವಾಗಿದೆ?
ಉ: ನಾಲ್ಕು ದ್ವಾರಗಳು ಮತ್ತು ನಾಲ್ಕು ಉಪ ದ್ವಾರಗಳು ಅಷ್ಟದಿಕ್ಕುಗಳಲ್ಲಿವೆ.

14) ಈ ಪಂಪಾಕ್ಷೇತ್ರ ದಲ್ಲಿ ಎಷ್ಟು ತೀರ್ಥಗಳುಂಟು?
ಉ: ಮೂರುವರೆ ಕೋಟಿ.

15) ಪಂಪಾಕ್ಷೇತ್ರದಲ್ಲಿರುವ ಪಂಚಲಿಂಗಗಳ ಹೆಸರುಗಳೇನು?
ಉ: ಶ್ರೀ ಪಂಪಾಪತಿ ( ಶ್ರೀ ವಿರೂಪಾಕ್ಷೇಶ್ವರ), ಶ್ರೀ ಕಿನ್ನರೇಶ್ವರ, ಶ್ರೀ ಜಾಂಬವತೇಶ್ವರ,
ಶ್ರೀ ಸೋಮನಾಥೇಶ್ವರ , ಶ್ರೀ ಮಾಣಿಭದ್ರೇಶ್ವರ.

16) ಪಂಪಾಪುರಕ್ಕೆ ಪೂರ್ವ ಭಾಗದಲ್ಲಿರುವ ಲಿಂಗ, ಪರ್ವತ ಮತ್ತು ತೀರ್ಥಗಳ ಹೆಸರುಗಳೇನು?
ಉ: ಶ್ರೀ ಕಿನ್ನರೇಶ್ವರ ಲಿಂಗ, ಗಂಧರ್ವ ಪರ್ವತ ಮತ್ತು ಕಲ್ಯಾಣ ತೀರ್ಥ.

                                ಸಂಕಲ್ಪ

ಶ್ರೀಪಂಪಾಕ್ಷೇತ್ರೇದಲ್ಲಿ ನಿತ್ಯ, ನೈಮಿತ್ತಿಕ, ಕಾಮ್ಯ ಪುಣ್ಯಕರ್ಮಗಳು ಆಚರಿಸುವಾಗ ಶಾಸ್ತ್ರೋಕ್ತವಾಗಿ ಸಂಕಲ್ಪ ಹೇಳುವ ಕ್ರಮ ಮಮೋಪಾತ್ತ ಸಮಸ್ತ ದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಶುಭೇ ಶೋಭನೇ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯ ಪರಾರ್ಥೇ ಶ್ರೀ ಶ್ವೇತವರಾಹಕಲ್ಪೇ, ವೈವಸ್ವತಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಬೂದ್ವೀಪೇ, ಭರತವರ್ಷೇ, ಭರತಖಂಡೇ ಮೇರೋ: ದಕ್ಷಿಣದಿಗ್ಭಾಗೇ ಶ್ರೀಶೈಲಸ್ಯ ಪಶ್ಚಿಮದಿಗ್ಭಾಗೇ, ಶ್ರೀ ಪಂಪಾ ವಿರೂಪಾಕ್ಷ ಕ್ಷೇತ್ರೇ ,ತುಂಗಭದ್ರಾನದ್ಯಾ: ತಟೇ, ಭಗವತ: ಸಂಕಲ್ಪಾನುಸಾರೇಣ ಸ್ಥಾಪಿತ ನೂತನ ಶ್ರೀ ಪಂಪಾಕ್ಷೇತ್ರ ಕಿಷ್ಕಿಂದಾ, ಸ್ವರ್ಣಹಂಪಿ, ಭಕ್ತಿನಗರಸಾಮ್ರಾಜ್ಯೇ, ಅಖಿಲಾಂಡಕೋಟಿ ಬ್ರಹ್ಮಾಣ್ಡನಾಯಕ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸಹಿತ ಶ್ರೀ ಕೋದಂಡರಾಮಸ್ವಾಮಿ, ಶ್ರೀ ಲಕ್ಷ್ಮೀ ನಾರಸಿಂಹ, ಶ್ರೀ ಭುವನೇಶ್ವರೀ, ಕ್ಷೇತ್ರ ಪಾಲಕ ಶ್ರೀ ಕಾಳಭೈರವ, ಶ್ರೀ ಹನೂಮಂತ, ಶ್ರೀ ವೀರಭದ್ರ, ಶ್ರೀ ಕಿನ್ನೆರೇಶ್ವರಾದಿ, ಯಕ್ಷ, ಕಿನ್ನೆರ, ಗಂಧರ್ವ, ಕಿಂಪುರುಷಾದಿ ಸಮಸ್ತ ದೇವತಾ, ಅಧಿದೇವತಾನಾಂ ಚ, ಭಗವಾನ್ ವೇದವ್ಯಾಸಾದಿ ಗುರೂಣಾಂ, ಚರಣ ಸನ್ನಿಧೌ, ಚತುದ್ರ್ವಾರೋಪದ್ವಾರಶೋಭಿತ, ಹೇಮಕೂಟ, ಕಿಷ್ಕಿಂದಾದಿ ಪಂಚಪರ್ವತಾನಾಂ, ಕಲ್ಯಾಣ,ಮನ್ಮುಖ ತೀರ್ಥಾದಿ 41 ದಿವ್ಯ ತೀರ್ಥಾನಾಮ್, ಭಗವಾನ್ ವ್ಯಾಸಾಶ್ರಮಾದಿ ಶುಭ ಆಶ್ರಮಾಣಾಂ , ಭಾರದ್ವಾಜ, ವಸಿಷ್ಠ ಆದಿ ಸಪ್ತ ಋಷೀಣಾಂ ದಿವ್ಯ ಸಾನ್ನಿಧ್ಯೇ, ಪಂಚಕ್ರೋಶಾತ್ಮಕೇ ಕ್ಷೇತ್ರೇ , ಪಂಪಾ, ಸೀತಾದಿ ದಿವ್ಯ ಸರೋವರಾಣಾಂ ಸನ್ನಿಧೌ, ಹನೂಮಂತ,ಜಾಂಬವಂತ, ಅಂಗದಾದಿ ದಿವ್ಯ ಭಾಗವತಾನಾಂ ಜನ್ಮಸ್ಥಾನೇ, ದಕ್ಷಿಣ ಕಾಶೀ ತೀರ್ಥರಾಜ ಕ್ಷೇತ್ರ್ರೇ, ಕಲಿಕಲ್ಮಷ ಸಂಚಯಾತ್ ಶ್ರೀ ಪಂಪಾಕ್ಷೇತ್ರ ರಕ್ಷಣಾ, ಸ್ವರ್ಣಹಂಪಿ ಭಕ್ತಿನಗರಸಾಮ್ರಾಜ್ಯಸ್ಯ ಉತ್ತರೋತ್ತರಾಭಿವೃಧ್ಯರ್ಥಂ, ಅಸ್ಮಿನ್ ವರ್ತಮಾನ ವ್ಯಾವಹಾರಿಕ ಚಾಂದ್ರಮಾನೇನ ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಮಧ್ಯೇ ಶ್ರೀ………ನಾಮ ಸಂವತ್ಸರೇ,………ಆಯನೇ,………ಋತೌ,……….ಮಾಸೇ,……….ಪಕ್ಷೇ,…….ತಿಥೌ,……ವಾಸರ ಯುಕ್ತಾಯಾಂ, ………..ನಕ್ಷತ್ರೇ,………ಯೋಗೇ,……….ಕರಣೇ,……….ಏವಂ ಗುಣ ವಿಷೇಷಣ ವಿಶಿಷ್ಟಾಯಾಂ, ……..ಶುಭ ತಿಥೌ, ಶ್ರೀಮಾನ್………ಗೋತ್ರ:………ನಾಮಧೇಯಸ್ಯ, ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ಆಯುರಾರೋಗ್ಯ ಐಶ್ವಾರ್ಯಾಭಿವೃಧ್ಯರ್ಥಂ, ಧರ್ಮಾರ್ಥಕಾಮ ಮೋಕ್ಷ, ಚತುರ್ವಿಧ ಫಲ ಪುರುಷಾರ್ಥಸಿಧ್ಯರ್ಥಮ್,ಇಷ್ಟಕಾಮ್ಯಾರ್ಥಂ,ಮನೋವಾಂಛಾಫಲಸಿಧ್ಯರ್ಥಮ್,ಸಮಸ್ತದುರಿತೋಪಶಾಂತ್ಯರ್ಥಂ, ಸಮಸ್ತ ಮಂಗಳಾವಾಪ್ಯರ್ಥಂ, ಭಗವದ್ಭಕ್ತಿನಗರ ಸಾಮ್ರಾಜ್ಯಸ್ಯ ಸಮಸ್ತ ಹರಿ, ಹರ ಭಾಗವತ ಭಕ್ತಾನಾಂ ಉತ್ತರೋತ್ತರ ಭಕ್ತಿ, ಜ್ಞಾನ, ವೈರಾಗ್ಯ, ಮೋಕ್ಷ ಪ್ರಾಪ್ಯ ಸಿಧ್ಯರ್ಥಂ …….ತುಂಗ ಭದ್ರಾ ನದೀ ಸ್ನಾನಂ /ಶ್ರೀ ಪಂಪಾವಿರೂಪಾಕ್ಷೇಶ್ವರ ಪೂಜನಾಂಚ/………ಇಷ್ಟ ದೇವತಾ ಪೂಜನಾಂಚ……./ವಿಶೇಷ ಅನುಷ್ಠಾನಾರ್ಥಂ ……/ರಾತ್ರಿ ಕ್ಷೇತ್ರನಿವಾಸ ಫಲ ಸಿಧ್ಯರ್ಥಂ ……/ಕ್ಷೇತ್ರಪಾಲಕಂ ಶ್ರೀ ಕಾಲಭೈರವಂ ಧ್ಯಾತ್ವಾ ಸರ್ವೇಷಾಂ ದೇವ, ಅಧಿದೇವತಾನಾಂ ಆಜ್ಞಾಂ ಪ್ರ್ಯಾಪ್ಯ ಕ್ಷೇತ್ರ ದರ್ಶನಂ……/ಪಂಚಕ್ರೋಶ ಯಾತ್ರಾಂ………/ವಿಪ್ರೇಭ್ಯೋ ಯಥಾ ಶಕ್ತಿ ದಾನಂ…………./ದೇವತಾ ಪ್ರೀತ್ಯರ್ಥಂ ಕಲ್ಪೋಕ್ತ ಪ್ರಕಾರೇಣ ಯಾವಛ್ಚಕ್ತಿ ಧ್ಯಾನಾವಾಹನಾದಿ ಷೋಡಷೋಪಚಾರ ಪೂಜನಾಂಚ…/ ಬ್ರಾಹ್ಮಣ ಸಮ್ಮುಖೇನ…/ಬ್ರಾಹ್ಮಣಾನಾಂ ಸಾಹಾ0iÉ್ಯುೀನ ಅಹಂ ಕರಿಷ್ಯೇ.

ಶ್ರೀಕ್ಷೇತ್ರದಲ್ಲಿ ಸಂಕಲ್ಪ ಹೇಳುಕೊಳ್ಳುವಾಗ ವೇದೋಕ್ತವಾದ ವೈದಿಕರಸಹಾಯವು ತೆಗುದುಕೊಳ್ಳುವದುಇನ್ನಷ್ಟು ಫಲಕಾರಿ

ಶ್ರೀ ಹೇಮಕೂಟ ನಿಲಯಃ ಪಂಪಾಲಿಂಗಿನ ಕಾಮುಕಃ |

ಗಂಗಾಧರೋ ವಿರೂಪಾಕ್ಷೋ ಮಂಗಳಂ ದಿಶತಾತ್ಸದಾ.||