ಕಿಷ್ಕಿಂಧಾ

ಕಿಷ್ಕಿಂದ ಕ್ಷೇತ್ರ:

ಪುಣ್ಯ ಭೂಮಿ ಭಾರತದ ದಲ್ಲಿ ದಕ್ಷಿಣ ಭಾಗದ  ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಪಂಪಕ್ಷೇತ್ರವು ೩೧ ಕೋಟಿ ವರ್ಷಗಳಿಂದ ಅಧ್ಯಾತ್ಮಿಕವಾಗಿ, ಪೌರಾಣಿಕ ವಾಗಿ, ಐತಿಹಾಸಿಕವಾಗಿ  ಮಹಿವಾನ್ವಿತವಾಗಿ  ಪ್ರಸಿದ್ಧಿಹೊಂದಿದೆ.ಮತ್ತು ಈ
ಕಿಷ್ಕಿಂದ ನಗರವೂ ಸಹಾ ಪಂಪಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ ತುಂಗಭದ್ರಾ ನದಿಯ ಉಭಯ ತಟಗಳಲ್ಲಿ ಶ್ರೀ ಹೇಮಕೂಟ ಋಶ್ಯಮೂಕ, ಮಾತಂಗ, ಕಿಷ್ಕಿಂಧಾ, ಮಾಲ್ಯವಂತ ಇತ್ಯಾದಿ ಅನೇಕ ದಿವ್ಯ ಪರ್ವತಗಳಿಂದ ಪಂಪಾಸರೋವರ ಮುಖ್ಯವಾಗಿ ೪೧ ಮತ್ತು ಇನ್ನಿತರ ದಿವ್ಯ ತೀರ್ಥಗಳಿಂದ ವಾನರರ ಸಾಮ್ರಾಜ್ಯವಾಗಿ ಪರಮೇಶ್ವರನ, ಶ್ರೀ ರಾಮ, ಸೂರ್ಯ ದಿವ್ಯ ಸಾನ್ನಿಧ್ಯ ದಿಂದ ಈಗಲೂ ಸಹಾ ಅದೇ ೩೧ ಕೋಟಿ ವರ್ಷಗಳ, ೧೭ ಲಕ್ಷ ವರ್ಷಗಳ ತ್ರೇತಾಯುಗದ ಚಿನ್ಹೆಗಳು ಈಗಲೂ ಸಹಾ ಯಥಾವತ್ತಾಗಿ ಪ್ರತ್ಯಕ್ಷವಾಗಿ ಕಣ್ಣೆಗೆ ಗೋಚರಿಸುತ್ತವೆ, ಮಾತಾ ಅಂಜನಾದೇವಿ ತಪಸ್ಸನ್ನು ಆಚರಿಸಿ ಭಗವದ್ ಪ್ರಸಾದವಾಗಿ ಶ್ರೀ ಹನುಮಂತನೆಗೆ ಜನ್ಮ ನೀಡಿದ ದೈವಿಕ ಸ್ಥಳ