Trust Details

ಈ ಟ್ರಸ್ಟ್ ಸಂಸ್ಥೆಯ ರಚನೆ ವಿಧಾನ :


ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಲ್ಲಿ ಪ್ರಮುಖವಾಗಿ ಜಗದ್ಗುರು ಶಂಕರಾಚಾರ್ಯರ ಚತುರಾಮ್ನಾಯ ಪೀಠದ ಜಗದ್ಗುರುಗಳು,ಶ್ರೀ ರಾಮಾನುಜಾಚಾರ್ಯ, ಶ್ರೀ ಮಧ್ವಾಚಾರ್ಯ ಮತ್ತು ಅಖಾಡಗಳ ಸಾಧು-ಸಂತರು, ಇನ್ನಿತರ ಸನಾತನ ವೈದಿಕ ಹಿಂದು ಧರ್ಮದ ಪರಂಪರಾಗತ ಸಂಸ್ಥೆಗಳ ಆಚಾರ್ಯರು ಮಾರ್ಗದರ್ಶಕ ಮಂಡಲಿ ರೂಪದಲ್ಲಿ ಇರಲಿದ್ದಾರೆ. ಮಾರ್ಗದರ್ಶಕ ಮಂಡಳಿ ಸಲಹೆ ಸೂಚನೆಗಳ ಮೇರೆಗೆ ಶ್ರೀ ಪಂಪಾಕ್ಷೇತ್ರ ಗೋವಿಂದಾನಂದ ಸರಸ್ವತೀ ಸ್ವಾಮಿಗಳವರು ಅಧ್ಯಕ್ಷರಾಗಿದ್ಧು, ಇದರ ಜೊತೆಗೆ 16 ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯನ್ನು ಹೊಂದಿರುತ್ತದೆ. ಮತ್ತು ದೇಶದ ಎಲ್ಲಾ ರಾಷ್ಟ್ರಗಳಲ್ಲಿ ಇರುವ ಭಕ್ತರೆಗೆ ಸೇವಾ ಅವಕಾಶವನ್ನು ಒದಗಿಸಲು 28 ರಾಜ್ಯದಿಂದ 10ಸದಸ್ಯರ ಪ್ರಾಂತೀಯ ಸಮಿತಿ ಪ್ರತಿ ರಾಜ್ಯಗಳಲ್ಲಿಯೂ (ಜಿಲ್ಲೆಗಳ ಆಧಾರದ ಮೇಲೆ ಒಂದೊಂದು ಜಿಲ್ಲೆಯಿಂದ ಒಬ್ಬ ಮುಖ್ಯ ಸದಸ್ಯ) ರಚನೆ ಮಾಡಲಾಗುತ್ತದೆ, ಅವರಿಗೆ 3 ವರ್ಷಗಳ ಸೇವಾ ಅವಧಿ ನಿಗದಿಪಡಿಸಲಾಗಿರುತ್ತದೆ. ದೇಶದಲ್ಲಿರುವ ಎಲ್ಲಾ ಭಕ್ತರಿಗೂ ಮಾರ್ಗದರ್ಶಕ, ಸದಸ್ಯ, ಕಾರ್ಯಕರ್ತ, ಸೇವಾಕರ್ತರಾಗಿ ಸೇವೆ ಸಲ್ಲಿಸಲು, ಸಹ ಅವಕಾಶವಿರಲಿದೆ. ಸದಸ್ಯರ ನಿಯಮಾವಳಿ ಅನುಸಾರವಾಗಿ ಅವರು ಸದಸ್ಯರು ಅಗುವ ಮುಂದೆ ಪ್ರಮಾಣಪತ್ರದಿಂದ ಈ ಸಂಸ್ಥೆಯ ನಿಯಮ ನಿಬಂಧನಗಳೆಗೆ ಒಪ್ಪಿಕೊಂಡು ಕಿಷ್ಕಿಂಧೆ ಯಲ್ಲಿ 6 ತಿಂಗಳು ಕಾಲ ನಿವಾಸ ಇದ್ಧು ಪ್ರಾಥಮಿಕ ಸೆವೆ ಸಲ್ಲಿಸಬೇಕು, ತದನಂತರ ಅವರ ಸೇವಾಕಾಲದಲ್ಲಿ ಮಾಡಿದ ಕಾರ್ಯಗಳನ್ನು ವಿಶ್ಲೇಷಿಸಿ ಅನಂತರ ಅವರಿಗೆ ಅವಕಾಶವು ಕಲ್ಪಿಸಲಾಗುತ್ತದೆ,

ಟ್ರಸ್ಟ್ ಹೆಚ್ಚಿನ ವಿವರಗಳನ್ನು ಲಕ್ಷ್ಯಗಳು ಹೊಂದಿದೆ