Date : 25th Feb 2025
Jaya Virupaksha, Jaya Srirama, Jaya Hanuman,
Yesterday in New Hampi (Swarna Hampi) a meeting was held to re-consecrate the new idol “Sri Kishkindha Anjani Putra Abhaya Anjaneya, Karya Siddhi Hanuman”,
Under the guidance of Pujya Sri Govindananda Saraswati Swamiji, the devotees of the village held a meeting with the leaders at the Tayamma temple,
The date of re-consecration was fixed on March 10, 2025,
2/3 days long Homa, Pratishtha programs, 9th, 10th, March 2025,
ದಿನಾಂಕ: 25ನೇ ಫೆಬ್ರವರಿ 2025 – ಜಯ ವಿರೂಪಾಕ್ಷ, ಜಯ ಶ್ರೀರಾಮ, ಜಯ ಹನುಮಾನ್, – ನಿನ್ನೆ ಹೊಸ ಹಂಪಿಯಲ್ಲಿ (ಸ್ವರ್ಣ ಹಂಪಿ) ನೂತನ ವಿಗ್ರಹ “ಶ್ರೀ ಕಿಷ್ಕಿಂಧಾ ಅಂಜನೀ ಪುತ್ರ ಅಭಯ ಆಂಜನೇಯ, ಕಾರ್ಯ ಸಿದ್ಧಿ ಹನುಮಾನ್” ಪುನರ್ ಪ್ರತಿಷ್ಠಾಪನೆ ಸಭೆ ನಡೆಯಿತು. ಪೂಜ್ಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಗ್ರಾಮದ ಭಕ್ತರು ತಾಯಮ್ಮ ದೇವಸ್ಥಾನದಲ್ಲಿ ಮುಖಂಡರೊಂದಿಗೆ ಸಭೆ ನಡೆಸಿದರು.
ಮರು ಪ್ರತಿಷ್ಠಾಪನೆಯ ದಿನಾಂಕವನ್ನು ಮಾರ್ಚ್ 10, 2025 ರಂದು ನಿಗದಿಪಡಿಸಲಾಗಿದೆ, 2/3 ದಿನಗಳ ಹೋಮ, ಪ್ರತಿಷ್ಠಾ ಕಾರ್ಯಕ್ರಮಗಳು, 9, 10, ಮಾರ್ಚ್ 2025,
ಜಯ ಶ್ರೀ ಪಂಪಾವಿರೂಪಾಕ್ಷ – ಜಯ ಶ್ರೀ ರಾಮ – ಜಯ ಹನುಮಾನ್ ಶ್ರೀ ಪಂಪಾಕ್ಷೇತ್ರ ಕಿಷ್ಕಿಂಧಾ ಸ್ವರ್ಣಹಂಪಿ ಹೊಸಪೇಟ್ ತಾ, ವಿಜಯನಗರ ಜಿಲ್ಲೆ, ಶ್ರೀ ಕಿಷ್ಕಿಂಧಾ ಕಾರ್ಯಸಿದ್ಧಿ ಶ್ರೀ ಹನುಮಾನ್ ವಿಗ್ರಹ ಪ್ರತಿಷ್ಠಾ ಕಾರ್ಯಕ್ರಮ, ಶ್ರೀ ಪಂಪಾವಿರೂಪಾಕ್ಷೇಶ್ವರ ಸಮೇತ ಶ್ರೀ ಭುವನೇಶ್ವರಿ ನಾರಸಿಂಹ ಸಮೇತ ಶ್ರೀ ಕೋದಂಡರಾಮ ದೇವರ ಸಮೇತ ಕ್ಷೇತ್ರ ಪಾಲಕ ಶ್ರೀ ಕಾಲಭೈರವ ಸಮೇತ ಚತುರ್ದ್ವಾರೋಪದ್ವಾರ ಸಮೇತ ಶ್ರೀ ಪಂಪಾಕ್ಷೇತ್ರದಲ್ಲಿ ವಿರಾಜಮಾನರಾಗುರಿವ ಎಲ್ಲಾ ದೇವತೆ ಅಧಿದೇವತೆಯರ ಶ್ರೀ ಅಂಜನೀ ಮಾತೆಯ ಕೃಪಾ, ಪ್ರೇರಣೆ ಆಶೀರ್ವಾದಗಳಿಂದ ಸಪ್ತಋಷಿಯರ, ಶ್ರೀ ಭಗವಾನ್ ವೇದ ವ್ಯಾಸ , ಶ್ರೀ ಆದಿಶಂಕರಾಚಾರ್ಯ ಭಗವತ್ಪಾದರ , ಶ್ರೀ ವಿದ್ಯಾರಣ್ಯ ಮಾಹಾಮುನಿಗಳವರ ಕೃಪಾ, ಪ್ರೇರಣೆ ಆಶೀರ್ವಾದಗಳಿಂದ ಪರಮ ಪೂಜ್ಯ ಬದರಿ ಜ್ಯೋತಿರ್ಮಠ , ದ್ವಾರಕಾ ಶಾರದಾ ಪೀಠ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯರ ದೀಕ್ಷಿತ ಶಿಷ್ಯರು ಪಂಪಾಕ್ಷತ್ರ ಪರಮಹಂಸ ಪರಿವ್ರಾಜ ಸ್ವಾಮಿ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮಿಗಳವರ ಅಮೃತ ಹಸ್ತ ದಿಂದ ನಮ್ಮ ಹೊಸಾ ಹಂಪಿ ( ಸ್ವರ್ಣ ಹಂಪಿ) ಯಲ್ಲಿ ದೈವೀ ಪ್ರೇರಣೆ ಯಂತೆ ದೈವಜ್ಞರ, ಆದೇಶಾನು ಸಾರ ಪಂಪಾಕ್ಷೇತ್ರ ವಿಪ್ರ, ದ್ವಿಜೋತ್ತಮರ ಮಾರ್ದರ್ಶನ ನೇತೃತ್ವದಲ್ಲಿ ದಲ್ಲಿ 2 ದಿವಸಗಳ ಪ್ರತಿಷ್ಠಾ ಕಾರ್ಯಕ್ರಮ, ದಿನಾಂಕ : 9 ಮಾರ್ಚ್ 2025, ಕಲಿಶಕ 5125 ವಿಕ್ರಮ ಶಕ 2081, ಶ್ರೀ ಶಂಕರ ಶಕ 2531 ಕ್ರೋಧಿ ನಾಮ ಸಂ ಉತ್ತರಾಯಣ ಫಾಲ್ಗುಣ ಶುಕ್ಲ ಏಕಾದಶಿ ಶುಕ್ಲ ಪಕ್ಷ ಪುಷ್ಯ ನಕ್ಷತ್ರ , ಸೊಭಾಣಾಯೋಗ ವಿಷ್ಠಿ ಕರಣ ಉಪರಿ ಭಾವ ಕರಣ ಸೋಮವಾಸರ , ಹೊಸ ಹಂಪಿ ಸ್ವರ್ಣಹಂಪಿ ನಲ್ಲಿ ಮಂದಿರ ನಿರ್ಮಾಣ ಪ್ರಾಂಗಣದಲ್ಲಿ ಕಲಶ ಸ್ಥಾಪನೆ, ಉದಯ 8.00 ದಿಂದ ಶೋಭಾ ಯಾತ್ರೆ ಶ್ರೀ ಕಿಷ್ಕಿಂಧಾ ಕಾರ್ಯಸಿದ್ಧಿ ಶ್ರೀ ಹನುಮಾನ್ ವಿಗ್ರಹ , ಹೊಸ ಹಂಪಿ ಯಿಂದ , ಪ್ರಕಾಶನಗರ , ತುಂಗ ಭದ್ರಾ ನದಿ , 10.00 ತುಂಗ ಭದ್ರಾ ಜಲಗಳಿಂದ ಅಭಿಷೇಕ ,ಅಲ್ಲಿಂದ ಮೂಲ ಹಂಪಿ ಮೂಲಕ ( ಜನತಾ ಪ್ಲಾಟ್ ) ಮೂಕಲ ಶ್ರೀ ವಿರೂಪಾಕ್ಷ ಬಜಾರ್ ಮೂಲಕ ಕಡ್ಡಿರಾಂಪುರ್ ಮೂಲಕ ಹೊಸಾ ಹಂಪಿ ಗೆ 12.00 ಆಗಮನ, ಪ್ರತಿಷ್ಠಾ ಅಂಗ ಜಲಾಧಿವಾಸ, ಪುಷ್ಪಾಧಿವಾಸ, ಅನ್ನಾಧಿವಾಸ, ಧಾನ್ಯಾಧಿವಾಸ ಮತ್ತು ಹೋಮಗಳು, ಸಾಯಂಕಾಲ : ವಿಶೇಷ ಪೂಜೆ ಮಹಾ ಮಂಗಳ ಆರತಿ, ಪ್ರವಚನ ದಿನಾಂಕ : 10 ಮಾರ್ಚ್ 2025, ಉದಯ 4 ಗಂ. 5 ನಿಮಿಷ ಕ್ಕೆ ಮಕರ ಲಗ್ನ ದಲ್ಲಿ ಯಂತ್ರ ಪ್ರತಿಷ್ಠಾ , ತದನಂತರ ಶ್ರೀ ಕಿಷ್ಕಿಂಧಾ ಕಾರ್ಯಸಿದ್ಧಿ ಶ್ರೀ ಹನುಮಾನ್ ವಿಗ್ರಹ ಪ್ರತಿಷ್ಠಾ , ಹೋಮ , ಅಭಿಷೇಕ , ಅರ್ಚನೆ ಮಹಾ ಮಂಗಳ ಆರತಿ , 12.00 ಅನ್ನ ದಾಸೋಹ ಪ್ರಸಾದ ವಿತರಣೆ ಕಾರ್ಯಕ್ರಮ ಸಾಯಂಕಾಲ : ವಿಶೇಷ ಪೂಜೆ ಮಹಾ ಮಂಗಳ ಆರತಿ, ಶ್ರೀ ಪಂಪಾಕ್ಷೇತ್ರ ಸ್ವರ್ಣಹಂಪಿ ಸಮಸ್ತ ಭಕ್ತ ವೃಂದ ಶ್ರೀ ಸ್ವರ್ಣಹಂಪಿ ಭಕ್ತಿನಗರ (ರಿ) ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರೆಸ್ಟ್ (ರಿ) ಹೊಸಾ ಹಂಪಿ , ಹೊಸಪೇಟೆ ತಾಲೂಕ್, ವಿಜಯನಗರ ಜಿಲ್ಲೆ, www.swarnahampi.org www.kishkindha.org













