Revival of Ancient Glories of Pampakshetra Kishkindha Hampi, Capital of Pampapattana, Kishkindha, Vidya, Vijayanagara Empire : and New Creation Second Phase Inaugurated on Vasant Panchami (23 Jan 2026)

ಜಯ ಪಂಪಾ ವಿರೂಪಾಕ್ಷ – ಜಯ ಲಕ್ಷ್ಮಿ ನಾರಸಿಂಹ – ಜಯ ರುಕ್ಮಿಣೀ ಶ್ರೀ ವಿಠ್ಠಲ – ಜಯ ಭುವನೇಶ್ವರೀ , ಜಯ ಶ್ರೀರಾಮ , ಜಯ ಬದರೀ ನಾರಾಯಣ , ಜಯ ದ್ವಾರಕಾಧೀಶ, ಜಯ ಶಾರದಾಂಬಾ , ಜಯ ಕಿಷ್ಕಿಂಧಾ ಹನುಮಾನ್ , ಜಯ ಆದಿ ಶಂಕರಾಚಾರ್ಯ – ಜಯ ವಿದ್ಯಾರಣ್ಯ ,
ಜಯ ಪಂಪಾ ವಿರೂಪಾಕ್ಷ – ಜಯ ಭುವನೇಶ್ವರೀ ಲಕ್ಷ್ಮಿ ನಾರಸಿಂಹ -ಜಯ ರುಕ್ಮಿಣೀ ಶ್ರೀ ವಿಠ್ಠಲ – ಜಯ ಕಿಷ್ಕಿಂಧಾ ಹನುಮಾನ್
ಪಂಪಾಕ್ಷೇತ್ರ ಕಿಷ್ಕಿಂಧಾ ಹಂಪಿ
ಕಿಷ್ಕಿಂಧಾ , ವಿದ್ಯಾನಗರ , ವಿಜಯನಗರ ಸಾಮ್ರಾಜ್ಯ ರಾಜಧಾನಿ — ಪೂರ್ವವೈಭವ – ಪುನಃ ನಿರ್ಮಾಣ – ನೂತನ ನಿರ್ಮಾಣ , ದ್ವಿತೀಯ ಚರಣವು ಶುಭ ಆರಂಭ ( ವಸಂತಪಂಚಮೀ – ೨೩-೦೧-೨೦೨೬)
ಭಗವಂತನು ತನ್ನ ಭಕ್ತರ ಮೂಲಕವೇ
ತನ್ನ ಪವಿತ್ರ ಕ್ಷೇತ್ರವನ್ನು ಮತ್ತು ಕ್ಷೇತ್ರವೈಭವವನ್ನು
ಪುನಃ ನಿರ್ಮಿಸಿಕೊಳ್ಳುತ್ತಿರುವ
ಇದು ವೈಭವನಗರ – ಭಕ್ತಿನಗರ,
ನೂತನ ಸಾಮ್ರಾಜ್ಯ – ಭಕ್ತಿನಗರ ಸಾಮ್ರಾಜ್ಯ

ಭಗವಂತ ತನ್ನ ಭಕ್ತರಿಂದ ತನ್ನ ಕ್ಷೇತ್ರವನ್ನು, ಕ್ಷೇತ್ರವೈಭವವನ್ನು ಪುನಃ ನಿರ್ಮಿಸುಗೊಳ್ಳಿತ್ತಿರುವ ವೈಭವನಗರ ಭಕ್ತಿನಗರ, ನೂತನ ಸಾಮ್ರಾಜ್ಯ ಭಕ್ತಿನಗರಸಾಮ್ರಾಜ್ಯ

೩೧ ಕೋಟಿ ವರ್ಷಗಳ ಪುರಾತನ ಇತಿಹಾಸ ಹೊಂದಿದ ಪಂಪಾಪಟ್ಟಣ,
ತ್ರೇತಾಯುಗದ ಕಿಷ್ಕಿಂಧಾ,
೬೦೦ ವರ್ಷಗಳ ವಿಜಯನಗರ ಸಾಮ್ರಾಜ್ಯದ ವೈಭವಮಯ ರಾಜಧಾನಿ.

ಈ ಪವಿತ್ರ ಪಂಪಾಕ್ಷೇತ್ರ ಹಂಪಿ,
ಮತ್ತೊಮ್ಮೆ ಸ್ವರ್ಣಹಂಪಿಯಾಗಿ
ತನ್ನ ಪೂರ್ವ ವೈಭವವನ್ನು ಪುನಃ ಪ್ರತಿಷ್ಠಾಪಿಸುವ ಮಹಾಸಂಕಲ್ಪದೊಂದಿಗೆ,

ಕ್ಷೇತ್ರದ ಜೀರ್ಣೋದ್ಧಾರ, ಪುನರ್ ನಿರ್ಮಾಣ ಹಾಗೂ ನೂತನ ನಿರ್ಮಾಣ ಎಂಬ
ಐತಿಹಾಸಿಕ ಮಹಾಕಾರ್ಯವು,

ಪೂಜ್ಯ ಪಂಪಾಕ್ಷೇತ್ರ
ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮಿಗಳವರ
(ಬದರಿ–ದ್ವಾರಕಾ ಪೀಠ, ಬ್ರಹ್ಮಲೀನ ಜಗದ್ಗುರು ಶ್ರೀ ಶಂಕರಾಚಾರ್ಯರ ದೀಕ್ಷಿತ ಶಿಷ್ಯರು)
ಅಮೃತಹಸ್ತದಿಂದ,

ಶ್ರೀ ವಸಂತ ಪಂಚಮಿ ಎಂಬ ದಿವ್ಯ ಪರ್ವದ ಶುಭ ಮುಹೂರ್ತದಲ್ಲಿ,
23-01-2026 ರಂದು
ಐತಿಹಾಸಿಕ ಶಿಲಾಪೂಜನ ಮಹತ್ಕಾರ್ಯವಾಗಿ
ಶ್ರೀ ವಿರೂಪಾಕ್ಷ ದೇವರ ಪ್ರೇರಣೆ ಮತ್ತು ಅನುಗ್ರಹದಿಂದ
ಸಂಪನ್ನಗೊಂಡಿದೆ.

ಈ ಕಾರ್ಯಕ್ರಮಗಳಿಗೆ ಸಂಬಂಧಿಸಿ,
ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣ ಇಲಾಖೆ (ASI) ಯ ಅಧೀನದಲ್ಲಿ,
ಕೇಂದ್ರ ಸರ್ಕಾರದ ಮುಖ್ಯ ಕಾರ್ಯಾಲಯದಿಂದ (ದೆಹಲಿ)
ಪೂಜ್ಯ ಶ್ರೀ ಸ್ವಾಮಿಗಳವರಿಗೆ
ಅಧಿಕೃತ ಅನುಮತಿ ಆದೇಶ ನೀಡಲಾಗಿದೆ.

ಈ ಸಂಬಂಧಿತ ಅಧಿಕೃತ ಪತ್ರವನ್ನು
ಹಂಪಿ ASI ಸರ್ಕಲ್ ಅಧಿಕಾರಿ / ಸೈಟ್ ಇನ್‌ಚಾರ್ಜ್
ಸೀನಿಯರ್ ಕನ್ಸರ್ವೇಷನ್ ಅಸಿಸ್ಟೆಂಟ್ ಅವರು
ಪೂಜ್ಯ ಶ್ರೀ ಸ್ವಾಮಿಗಳವರಿಗೆ
ಹಸ್ತಾಂತರಿಸಿದ್ದಾರೆ.

ಈ ಮೂಲಕ ಪವಿತ್ರ ಕ್ಷೇತ್ರದ ಎರಡು ದಿವ್ಯ ಯೋಜನೆಗಳಿಗೆ ಶಿಲಾನ್ಯಾಸ
ಯಶಸ್ವಿಯಾಗಿ ಸಂಪನ್ನಗೊಂಡಿದೆ:

೧) ಶ್ರೀ ವಿಠ್ಠಲನ ನೂತನ ರಥ ನಿರ್ಮಾಣ
೨) ಶ್ರೀ ಲಕ್ಷ್ಮಿ ನಾರಸಿಂಹನ ನೂತನ ವಾಗಿ ನಿರ್ಮಾಣ ಏಕಶಿಲಾ ನೂತನ ವಿಗ್ರಹ

ಈ ಮೂಲಕ ಕ್ಷೇತ್ರದ
ನೂತನ ಮರುನಿರ್ಮಾಣದ ಐತಿಹಾಸಿಕ ಮಹಾಯಾತ್ರೆ
ಶುಭಾರಂಭಗೊಂಡಿದೆ.

ಈ ಸಂದರ್ಭದಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕಾದ ವಿಷಯವೆಂದರೆ,
2013ರಲ್ಲಿ ಮೂಲ ಹಂಪಿಯನ್ನು ತೆರವುಗೊಳಿಸಿದ ನಂತರ,
ಕ್ಷೇತ್ರದ ಜನರ ವಿನಂತಿಯ ಮೇರೆಗೆ
ಹೊಸ ಹಂಪಿ – ಸ್ವರ್ಣಹಂಪಿಯ ಶಿಲಾನ್ಯಾಸ ಹಾಗೂ ಭೂಮಿ ಪೂಜೆಯನ್ನು
ಪೂಜ್ಯ ಶ್ರೀ ಸ್ವಾಮಿಗಳವರು ನೆರವೇರಿಸಿದ್ದರು.

ಅದೇ ರೀತಿಯಲ್ಲಿ,
ಕಿಷ್ಕಿಂಧಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ,
ಪಂಪಾಸರೋವರದಲ್ಲಿಯೂ
ಶಿಲಾನ್ಯಾಸ ಹಾಗೂ ಭೂಮಿ ಪೂಜೆ
ಯಶಸ್ವಿಯಾಗಿ ಸಂಪನ್ನಗೊಂಡಿದೆ.

www.swarnahampi.org, – www.kishkindha.org