

2017 ರಲ್ಲಿ- ಮೊದಲೆನೇಯ ಬಾರಿ ಅಯೋಧ್ಯೆಯಲ್ಲಿ 11 ದಿವಸಗಳಕಾಲ 100 ಕೋಟಿ ಶ್ರೀ ರಾಮ ನಾಮ ಜಪ ಯಜ್ಙ ಕಾರ್ಯಕ್ರಮ ದಿಂದ ,
2018 ರಲ್ಲಿ ಎರಡೆನೇಯ ಬಾರಿ ಕಿಷ್ಕಿಂಧೆಯಿಂದ ಶಿಲಗಳ ಜೊತೆ ಅಯೋಧ್ಯೆಗೆ ಭೇಟೀ ಮಾಡಿ ಅಲ್ಲಿ ಶ್ರೀ ಅಯೋಧ್ಯಾ ರಾಮಜನ್ಮ ಭೂಮಿಯಲ್ಲಿ ಶಿಲನ್ಯಾಸ ಶಿಲ ಸ್ಥಾಪನೆ ಮತ್ತು ಶ್ರೀರಾಮ, ಶ್ರೀಯಂತ್ರ ಪ್ರತಿಷ್ಠಾಪನೆ ಮಾಡಿ ಕಿಷ್ಕಿಂಧೆ ಯಲ್ಲಿ ನಿರ್ಮಾಣವಾಗಲಿರುವ ಶ್ರೀ ಹನುಮಂತ ದೇವರ ಮಂದಿರಕ್ಕಾಗಿ ಶ್ರೀ ಹನುಮಂತ ದೇವರ ಯಂತ್ರವನ್ನು ಶ್ರೀ ಅಯೋಧ್ಯಾ ರಾಮಜನ್ಮ ಭೂಮಿ ದಿಂದ ಪಡೆದಿದರು
2019 ರಲ್ಲಿ ಗೋವಿಂದಾನಂದ ಸರಸ್ವತಿ ಸ್ವಾಮಿಗಳ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ, ಶ್ರೀರಾಮ ಶ್ರೀಯಂತ್ರ ಸ್ಥಾಪನೆ, ನಿರ್ಮಾಣವಾಗಲಿರುವ ದೇವಾಲಯಕ್ಕೆ ಪಂಪಾ ಕಿಷ್ಕಿಂದಾ ಕ್ಷೇತ್ರದ ಪರವಾಗಿ ‘ಶ್ರೀ ಹನುಮದ್ ಸಮೇತ ಸೀತಾರಾಮ ಲಕ್ಷ್ಮಣ ದೇವರ ಉತ್ಸವ ಮೂರ್ತಿ’ಗಳನ್ನು ಸಮರ್ಪಣೆ ಮಾಡಿ ರಾಮ ಮಂದಿರ ನಿರ್ಮಾಣ ತಯಾರಿ ಪ್ರಾರಂಭವಾಗುತ್ತಿದ್ದಂತೆಯೇ “ಅಯೋಧ್ಯ ಮತ್ತು ಪಂಪಾ ಕಿಷ್ಕಿಂಧಾ ಕ್ಷೇತ್ರ” ಗಳ ಸಂಬಂಧ ಪುನ: ಆರಂಭಿಸಲಾಗಿದೆ.
ಈ ರೀತಿ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಮ್ಮ “ಹಂಪಿ–ಸ್ವರ್ಣ ಹಂಪಿ”, “ನಮ್ಮ ಕ್ಷೇತ್ರ–ಪಂಪಾಕ್ಷೇತ್ರ”, “ನಮ್ಮ ಪುರಿ- ಕಿಷ್ಕಿಂಧಾಪುರಿ” ಅಭಿಯಾನ ನಡೆಯುತ್ತಾ ಅನೇಕ ಆಧ್ಯಾತ್ಮಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.